See also 1seal  2seal  3seal
4seal ಸೀಲ್‍
ಸಕರ್ಮಕ ಕ್ರಿಯಾಪದ
  1. ಮುದ್ರೆ ಒತ್ತು; ಮೊಹರು ಹಾಕು.
  2. ಮೊಹರು ಮಾಡು; ಮೊಹರು ಹಾಕಿ ಬಿಗಿಸು, ಅಂಟಿಸು.
  3. ಮುದ್ರೆ ಒತ್ತಿ, ಠಸ್ಸೆ ಹಾಕಿ, (ಮೇಲಿನ ಬರಹವನ್ನು ಯಾ ಲಿಖಾವಟ್ಟನ್ನು) – ಪ್ರಮಾಣೀಕರಿಸು, ಸ್ಥಿರೀಕರಿಸು, ದೃಢೀಕರಿಸು, ಸತ್ಯವೆಂದು ರುಜುವಾತುಗೊಳಿಸು.
  4. (ಕಟ್ಟೊಲವು, ನಿಷ್ಠೆ, ಭಕ್ತಿ, ಮೊದಲಾದವುಗಳ ಸತ್ಯತೆಯನ್ನು ಪ್ರಾಣವನ್ನೇ ಪಣವಾಗಿಟ್ಟು ಯಾ ಅರ್ಪಿಸಿ) ಪ್ರಮಾಣೀಕರಿಸು; ನಿಜಗೊಳಿಸು.
  5. (ಪಂದ್ಯವನ್ನು ಪುನರಾರಂಭಿಸುವ ಮುಂಚೆಯೇ ಪುನಃ ಆಟಕ್ಕೆ ಕೂಡಿದಾಗ ತಾನು ನಡೆಸಬೇಕೆಂದಿರುವ ಗರವನ್ನು) ಬರೆದಿಟ್ಟು ಖಾತರಿ ಗೊಳಿಸಿಕೊ.
  6. ಭದ್ರವಾಗಿ, ಬಿಗಿಯಾಗಿ – ಅಂಟಿಸು.
  7. ಭದ್ರವಾಗಿ, ಬಿಗಿಯಾಗಿ – ಮುಚ್ಚಿಬಿಡು.
  8. ನಿರ್ಣಯಿಸು; ನಿರ್ಧರಿಸು; ತೀರ್ಮಾನಿಸು; ನಿಷ್ಕರ್ಷಿಸು; ತೀರ್ಮಾನದ ಅಚ್ಚೊತ್ತು, ಮುದ್ರೆ ಹಾಕು: his fate is sealed ಅವನ ಗತಿ, ಹಣೆಬರಹ, ನಿರ್ಧಾರವಾಗಿದೆ. death has sealed her for his own ಮೃತ್ಯು ಆಕೆಯನ್ನು ತನಗೆ ಸಲ್ಲಬೇಕಾದವಳೆಂದು ಮುದ್ರೆ ಒತ್ತಿಬಿಟ್ಟಿದೆ.
  9. (ಒಂದು ಪ್ರದೇಶದ ಸುತ್ತ) ಭದ್ರತೆಗಾಗಿ, ಒಳಕ್ಕೆ ಬರದಂತೆ ಯಾ ಹೊರಕ್ಕೆ ಹೋಗದಂತೆ – ತಡೆ ನಿರ್ಮಿಸು, ಅಡ್ಡಗಟ್ಟು ಹಾಕು.
  10. (ಒಂದು ಮೇಲ್ಮೈಯನ್ನು ತೂತುಗಳಿಲ್ಲದಂತಾ ಗಿಸಲು ಅದಕ್ಕೆ) ಗಟ್ಟಿ ಲೇಪವನ್ನು ಬಳಿ, ಮೆತ್ತು.
ಪದಗುಚ್ಛ
  1. sealed pattern (ಬ್ರಿಟಿಷ್‍ ಪ್ರಯೋಗ) (ಪೋಷಾಕು ಮೊದಲಾದವುಗಳ ವಿಷಯದಲ್ಲಿ) (ಸೇನಾಬಲಗಳು ಬಳಸಬೇಕೆಂದು ವಿಧಿಸಿದ) ಪ್ರಮಾಣಿತ, ಅಧಿಕೃತ – ಮಾದರಿ.
  2. seal off = 4seal\((9)\).
  3. seal one’s lips (ಒಬ್ಬನ) ಬಾಯಿ ಕಟ್ಟು; ಬಾಯಿಗೆ ಬೀಗಹಾಕು: my lips are sealed ನನ್ನ ಬಾಯಿ ಕಟ್ಟಿದೆ; ನಾನು ಗುಟ್ಟನ್ನು ಬಿಡುವಂತಿಲ್ಲ; ನನ್ನ ಬಾಯಿಗೆ ಬೀಗ ಹಾಕಿದೆ.
  4. seal up
    1. ಭದ್ರವಾಗಿ ಕೂಡಿಬಿಡು; ಒಳಗೆ ಕೂಡಿ ಬಾಗಿಲು ಹಾಕಿಬಿಡು.
    2. (ಯಾವುದನ್ನೇ ಕಾಯಂ ಆಗಿ) ಮುಚ್ಚಿಬಿಡು: the ancient Egyptians sealed up the pyramids with the royal mummies within them ಪಿರಮಿಡ್ಡುಗಳೊಳಗೆ ರಾ(ಕುಟುಂಬದ) ದೇಹಗಳನ್ನಿಟ್ಟು ಪ್ರಾಚೀನ ಈಜಿಪ್ಟಿನವರು ಪಿರಮಿಡ್ಡುಗಳನ್ನು ಮುಚ್ಚಿಬಿಡುತ್ತಿದ್ದರು.