See also 2rule
1rule ರೂಲ್‍
ನಾಮವಾಚಕ
  1. ನಿಯಮ; ವಿಧಿ; ಸೂತ್ರ; ನಿಬಂಧನೆ; ಕಟ್ಟು; ಕಟ್ಟಳೆ: determine the rules of action ಕಾರ್ಯ ನಿಬಂಧನೆಗಳನ್ನು ನಿರ್ಧರಿಸು.
    1. ಪ್ರಚಲಿತ – ರೂಢಿ, ವಾಡಿಕೆ, ಸಂಪ್ರದಾಯ, ಪದ್ಧತಿ.
    2. ಪ್ರಚಲಿತ ಪ್ರಮಾಣ, ಅಳತೆಗೋಲು, ಮಾನದಂಡ.
    3. ನಿಜಸ್ಥಿತಿ; ವಾಸ್ತವಸ್ಥಿತಿ: large families are the exception and not the rule ದೊಡ್ಡ ಕುಟುಂಬಗಳಿರುವುದು ನಿಜಸ್ಥಿತಿಯಲ್ಲ, ಅದಕ್ಕೊಂದು ಅಪವಾದ.
  2. ಆಳಿಕೆ; ಆಳ್ವಿಕೆ; ಅಧಿಕಾರ; ಪ್ರಭುತ್ವ; ಆಧಿಪತ್ಯ: under British rule ಬ್ರಿಟಿಷರ ಆಳ್ವಿಕೆಯಲ್ಲಿ. the rule of law ಕಾನೂನಿನ ಪ್ರಭುತ್ವ.
  3. (ಬಡಗಿಗಳು ಮೊದಲಾದವರು ಉಪಯೋಗಿಸುವ, ಸಾಮಾನ್ಯವಾಗಿ ಕೀಲುಗೂಡಿಸಿರುವ) ಅಳತೆ – ಕಡ್ಡಿ, ಕೋಲು: foot-rule ಅಡಿಕಡ್ಡಿ.
  4. (ಮುದ್ರಣ)
    1. ಗೀಟು, ಗೆರೆ – ಪಟ್ಟಿ; ಶಿರೋನಾಮೆ, ಅಂಕಣ ವಿಭಾಗ ಮೊದಲಾದವನ್ನು ಪ್ರತ್ಯೇಕಿಸಲು ಉಪಯೋಗಿಸುವ ತೆಳು ಲೋಹದ ಪಟ್ಟಿ.
    2. (ವಿರಾಮ ಚಿಹ್ನೆ ಮೊದಲಾದವಕ್ಕಾಗಿ ಬಳಸುವ, ಸಣ್ಣ) ಅಡ್ಡಗೆರೆ; ಅಡ್ಡಗೀಟು: en rule ಸಣ್ಣ ಅಡ್ಡಗೀಟು. em rule ದೊಡ ಅಡ್ಡಗೀಟು; ಉದ್ದ ಅಡ್ಡಗೀಟು.
  5. (ಧಾರ್ಮಿಕ ಪಂಥದವರು ಪಾಲಿಸುವ) ಆಚಾರ ಸಂಹಿತೆ; ವಿಧಿನಿಯಮ.
  6. (ನ್ಯಾಯಶಾಸ್ತ್ರ) ವಿಶೇಷಾಜ್ಞೆ; ನಿರ್ದಿಷ್ಟ ವ್ಯವಹಾರಕ್ಕೆ, ಕೇಸಿಗೆ ಅನ್ವಯಿಸುವಂತೆ ಮಾತ್ರ ನ್ಯಾಯಾಧೀಶ ಯಾ ನ್ಯಾಯಾಸ್ಥಾನ ಮಾಡಿದ ಆಜ್ಞೆ.
  7. (Rules) (ಆಸ್ಟ್ರೇಲಿಯ) = Australian Rules padagucaCx(೨).
ಪದಗುಚ್ಛ
  1. as a rule ವಾಡಿಕೆಯಾಗಿ; ಸಾಮಾನ್ಯವಾಗಿ; ಬಹುತೇಕ, ಬಹಳಷ್ಟು – ಸಂದರ್ಭಗಳಲ್ಲಿ.
  2. by rule ನಿಯಮ ಪ್ರಕಾರ; ಯಾಂತ್ರಿಕವಾಗಿ; ಯಂತ್ರಪ್ರಾಯವಾಗಿ.
  3. hard and fast rule ಕಟ್ಟುನಿಟ್ಟಾದ ನಿಯಮ; ಬಹು ಬಿಗಿಯಾದ ನಿಯಮ; ನಿಷ್ಠುರ ಸೂತ್ರ.
  4. rule of the 1road.
  5. rule of three (ಗಣಿತ) ತ್ರೈರಾಶಿ; ತ್ರಯರಾಶಿ; ಎರಡೂ ಮೊತ್ತಗಳಿಗಿರುವ ನಿಷ್ಪತ್ತಿ ಇನ್ನೆರಡು ಮೊತ್ತಗಳಿಗಿರುವ ನಿಷ್ಪತ್ತಿಗೆ ಸಮನಾಗಿದ್ದು ಅವುಗಳ ಪೈಕಿ ಮೂರು ಮೊತ್ತಗಳು ಮಾತ್ರ ಗೊತ್ತಾದವಾಗಿರುವಾಗ ನಾಲ್ಕನೆಯ ಮೊತ್ತವನ್ನು ಲೆಕ್ಕ ಹಾಕುವ ಕ್ರಮ.
  6. rule of thumb ಹೆಬ್ಬೆರಳ ಸೂತ್ರ; ಸ್ಥೂಲ ವ್ಯಾವಹಾರಿಕ ಸೂತ್ರ; ಸಾಮಾನ್ಯ ನಿಯಮ; ತಾರ್ಕಿಕವಾಗಿ ಯಾ ಸೈದ್ಧಾಂತಿಕವಾಗಿ ಆಗಿರದೆ ವ್ಯಾವಹಾರಿಕ ಅನುಭವದ ಯಾ ಅಭ್ಯಾಸದ ಆಧಾರದ ಮೇಲೆ ರಚಿತವಾದ (ಆದ್ದರಿಂದ ಪ್ರತಿ ಸಂದರ್ಭಕ್ಕೂ ಸಂಪೂರ್ಣವಾಗಿ ಅನ್ವಯಿಸಲಾಗದ ಯಾ ಪ್ರತಿ ವಿವರದಲ್ಲೂ ಪೂರ್ತಿಯಾಗಿ ನೆಚ್ಚಲಾಗದ) ಮಾರ್ಗದರ್ಶಕ ಸೂತ್ರ, ನಿಯಮ.
  7. run the rule over ಸರಿಯಾಗಿದೆಯೋ ಇಲ್ಲವೋ ಎಂದು, ಸಾಕಾಗುತ್ತದೆಯೋ ಇಲ್ಲವೋ ಎಂದು – ಸ್ಥೂಲವಾಗಿ ಪರೀಕ್ಷಿಸು.
  8. standing rule ಸ್ಥಾಯೀ – ನಿಯಮ, ಕಾರ್ಯಸೂತ್ರ; ಒಂದು ಸಂಸ್ಥೆ ಕಾರ್ಯನಿರ್ವಹಣೆಗಾಗಿ ಮಾಡಿಕೊಳ್ಳುವ ನಿಯಮ, ಸೂತ್ರ.
  9. the rule of force ಬಲಪ್ರಭುತ್ವ; ಬಲಾತ್ಕಾರದ ಆಳ್ವಿಕೆ.
  10. the rules (ಚರಿತ್ರೆ) ಸೆರೆಯಾಳುಗಳೂ ಕೆಲವು ಷರತ್ತುಗಳ ಮೇಲೆ ನಿರ್ದಿಷ್ಟ ಸೆರೆಮನೆಗಳ ಹೊರಗೆ ವಾಸಮಾಡಲು ಅವಕಾಶವಿರುತ್ತಿದ್ದ ಗೊತ್ತಿನ ಎಲ್ಲೆ.
  11. work to rule ನಿಯಮದಷ್ಟು ಕೆಲಸ; ಅತಿನಿಯಮ ಪಾಲನೆಯಿಂದ ಕಾರ್ಯಸಾಗದಂತೆ ಮಾಡು; (ಬಹಿರಂಗವಾಗಿ ಮುಷ್ಕರ ಹಿಡಿಯುವುದಕ್ಕೆ ಬದಲಾಗಿ) ಸಮಯ, ಅಸಮಯವೆನ್ನದೆ ಪ್ರತಿಯೊಂದು ನಿಯಮವನ್ನೂ ನಿಷ್ಠುರವಾಗಿ ಪಾಲಿಸಿ ಸರಾಗವಾಗಿ ಕಾರ್ಯನಡೆಯುವುದು ಅಸಾಧ್ಯವಾಗುವಂತೆ ಮಾಡು.