See also 1rule
2rule ರೂಲ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ, ನಡತೆ, ತನ್ನ ರಾಗದ್ವೇಷಗಳನ್ನು) ಅಧೀನದಲ್ಲಿ ಇಡು, ಇಟ್ಟುಕೊ; ಅಂಕೆಯಲ್ಲಿ ಇಡು; ವಶದಲ್ಲಿಟ್ಟುಕೊ; ನಿಗ್ರಹಿಸು.
  2. ಆಳು; ಆಳ್ವಿಕೆ ನಡಸು; ಪ್ರಭುತ್ವ – ಮಾಡು, ನಡಸು; ( ಅಕರ್ಮಕ ಕ್ರಿಯಾಪದ ಸಹ): kings should rule by love ದೊರೆಗಳು ಪ್ರೇಮದಿಂದ ಆಳಬೇಕು.
  3. (ಅಧಿಕಾರಯುತವಾಗಿ) ನಿರ್ಣಯ – ಕೊಡು, ಮಾಡು; ನಿರ್ಧರಿಸು; ತೀರ್ಪು ಹೇಳು: was ruled out of order ನಿಯಮಬಾಹಿರವೆಂದು ನಿರ್ಣಯಿಸಲಾಯಿತು.
    1. (ಕಾಗದದ ಮೇಲೆ) ಸಮಾನಾಂತರದ ಗೆರೆಗಳನ್ನು ಹಾಕು.
    2. (ರೂಲುದೊಣ್ಣೆಯಿಂದ ಯಾ ಇತರ ಯಾಂತ್ರಿಕ ಸಲಕರಣೆಯಿಂದ) ಗೆರೆಗಳನ್ನು ಹಾಕು; ಸಾಲೆಳೆ; ರೂಲು ಹಾಕು.
  4. (ಕರ್ಮಣಿಪ್ರಯೋಗದಲ್ಲಿ) ಹೇಳಿದಂತೆ ಕೇಳು; ಅಧೀನವಾಗಿ ವರ್ತಿಸು; ತಗ್ಗಿ ನಡೆ; ಆಳಲ್ಪಡು.
ಅಕರ್ಮಕ ಕ್ರಿಯಾಪದ

(ಬೆಲೆಗಳು, ಸರಕುಗಳು ಮೊದಲಾದವುಗಳ ವಿಷಯದಲ್ಲಿಯಾ ಗುಣ ಮೊದಲಾದವುಗಳ ವಿಷಯದಲ್ಲಿ) ಒಂದು ಗೊತ್ತಾದ ಮಟ್ಟದಲ್ಲಿ – ಇರು, ನಡೆ: prices ruled high ಬೆಲೆಗಳು ತುಟ್ಟಿಯಾಗಿದ್ದವು, ಮೇಲಕ್ಕೆ ಏರಿದ್ದವು.

ಪದಗುಚ್ಛ
  1. rule out ತಳ್ಳಿಹಾಕು; ವರ್ಜಿಸು; ಅಸಂಬದ್ಧ, ಅನರ್ಹ, ಅಕ್ರಮವೆಂದು ನಿರ್ಣಯಿಸು, ತೀರ್ಪುಕೊಡು.
  2. rule (person or thing) out of order (ವ್ಯಕ್ತಿಯನ್ನು, ವಿಷಯವನ್ನು) ಕ್ರಮಬಾಹಿರವೆಂದು ನಿರ್ಣಯ ಕೊಡು.
  3. rule the roast (or roost) ಹತೋಟಿ ಹೊಂದಿರು; ನಿಯಂತ್ರಣದಲ್ಲಿ, ವಶದಲ್ಲಿ – ಇಟ್ಟುಕೊಂಡಿರು.