See also 1play
2play ಪ್ಲೇ
ನಾಮವಾಚಕ
  1. ಆಟ; ನಲಿದಾಟ; ಚಟುವಟಿಕೆಯ ಓಡಾಟ: the play of sunlight upon water ನೀರಿನ ಮೇಲೆ ಸೂರ್ಯನ ಬೆಳಕಿನ ಸುಳಿದಾಟ.
  2. (ಮುಖ್ಯವಾಗಿ ಮಕ್ಕಳ ಯಾ ಎಳೆಯ ಪ್ರಾಣಿಗಳ) ಸಹಜವಾದ, ಚುರುಕಾದ ಸುಳಿದಾಟ; ಹಗುರವಾದ ಯಾ ಅನಿಯತವಾದ ಚಲನೆ.
  3. ಚಟುವಟಿಕೆ; ಕಾರ್ಯ; ಕ್ರಿಯೆ; ಕಾರ್ಯಾಚರಣೆ: lively play of fancy ಕಲ್ಪನೆಯ ಉಲ್ಲಾಸದ ಚಟುವಟಿಕೆ. brought into play ಕಾರ್ಯಾಚರಣೆಗೆ ತರಲಾಯಿತು.
  4. (ಯಂತ್ರಭಾಗ ಮೊದಲಾದವಕ್ಕೆ)
    1. ಚಲನೆಯ ಸ್ವಾತಂತ್ರ್ಯ; ಚಲನೆಗೆ ನಿರ್ಬಂಧ, ಅಡೆತಡೆ ಇಲ್ಲದಿರುವಿಕೆ; ಸಲೀಸಾದ, ಸರಾಗವಾದ ಚಲನೆ.
    2. ನಿರಾತಂಕ ಯಾ ಮುಕ್ತ ಚಲನೆಗೆ ಅವಕಾಶ, ಎಡೆ, ಜಾಗ: bolts should have half an inch of play ಅಗುಳಿಗಳ ಸರಾಗವಾದ ಚಲನೆಗೆ ಅರ್ಧ ಅಂಗುಲದ ಜಾಗ ಬೇಕು.
    3. ಚಟುವಟಿಕೆಗೆ ಆಸ್ಪದ, ಅವಕಾಶ: allow full play to curiosity ಕುತೂಹಲಕ್ಕೆ ಸಂಪೂರ್ಣ ಅವಕಾಶಕೊಡು.
  5. ವಿನೋದ; ತಮಾಷೆ; ಆಟ.
  6. ಆಟ; ಕ್ರೀಡೆ.
  7. ಆಟದ ರೀತಿ, ಶೈಲಿ: there was a lot of rough play in the football match ಕಾಲ್ಚೆಂಡಾಟದ ಪಂದ್ಯದಲ್ಲಿ ತುಂಬಾ ಒರಟು ಆಟವಿತ್ತು, ಒರಟು ಆಟದ ರೀತಿಯಿತ್ತು.
    1. (ಮುಖ್ಯವಾಗಿ ಆಟದಲ್ಲಿನ ಯಾ ಆಟದಲ್ಲಿರುವಂಥ) ಚಲನೆ, ನಡೆ ಯಾ ಕುಶಲತಂತ್ರ.
    2. ಆಟ; ಆಟವೊಂದರಲ್ಲಿ ನಿಯಾಮಾನುಸಾರ ಆಡಬಹುದಾಗಿರುವ, ಚೆಂಡು ಮೊದಲಾದವುಗಳ ಸ್ಥಿತಿ: in play ಆಟದಲ್ಲಿ. out of play ಆಟದ ಹೊರಗೆ.
    3. ಆಟ ಆಡುವುದು.
  8. (ಮುಷ್ಕರ ಮೊದಲಾದವನ್ನು ಹೂಡಿರುವ ಕೆಲಸಗಾರರ ವಿಷಯದಲ್ಲಿ) ಕೆಲಸದಿಂದ ಬಿಡುವು, ವಿರಾಮ; ಕೆಲಸವನ್ನು ನಿಲ್ಲಿಸುವುದು: when miners strike they call it going to play ಗಣಿಕೆಲಸದವನು ಮುಷ್ಕರ ಹೂಡಿದಾಗ ಅವರು ಅದನ್ನು ಕೆಲಸದಿಂದ ಬಿಡುವೆಂದು ಕರೆಯುತ್ತಾರೆ.
  9. ನಾಟಕ; ರೂಪಕ.
  10. ಜೂಜಾಟ: high play ದೊಡ್ಡ ಜೂಜಾಟ; ಭಾರೀ ಪಣಕಟ್ಟಿ ಆಡುವ ಜೂಜಾಟ.
  11. ಆಟದ ಸರದಿ: whose play is it now? ಈಗ ಆಟದ ಸರದಿ ಯಾರದ್ದು?
  12. (ವಾರ್ತಾ ಮಾಧ್ಯಮಗಳಲ್ಲಿ) ಗಮನ; ಪ್ರಾಮುಖ್ಯ; ಪ್ರಾಶಸ್ತ್ಯ; ಪ್ರಚಾರ; ಮಹತ್ವ: official propaganda gives a heavy play to spectacular statistics ಅಧಿಕೃತ ಪ್ರಚಾರವು ಎದ್ದುಕಾಣುವಂಥ ಅಂಕಿಅಂಶಗಳಿಗೆ ಹೆಚ್ಚಿನ ಗಮನವನ್ನು ಕೊಡುತ್ತದೆ.
  13. ಬಿರುಸಾದ, ಹಗುರಾದ ಯಾ ಬಿಟ್ಟು ಬಿಟ್ಟು ಬರುವ – ಚಲನೆ.
ಪದಗುಚ್ಛ
  1. as good as a play ಆಟದಂಥ; ಬಹಳ ವಿನೋದವಾದ, ತಮಾಷೆಯಾದ ಯಾ ಆಸಕ್ತಿಕರವಾದ.
  2. at play ಆಟವಾಡುತ್ತ; ಆಟವಾಡುವುದರಲ್ಲಿ ತೊಡಗಿ; ಮನರಂಜನೆಯಲ್ಲಿ ತೊಡಗಿ.
  3. in play
    1. ವಿನೋದಕ್ಕಾಗಿ; ತಮಾಷೆಗಾಗಿ: I said it only in play ಅದನ್ನು ಕೇವಲ ವಿನೋದಕ್ಕಾಗಿ ಹೇಳಿದೆ.
    2. ಕಾರ್ಯದಲ್ಲಿ – ತೊಡಗಿ, ನಿರತವಾಗಿ: hold one’s attackers in play ಆಕ್ರಮಣಕಾರರನ್ನು ತಡೆ ಹಿಡಿಯುವಲ್ಲಿ ತೊಡಗು.
  4. make a play for (ಆಡುಮಾತು) ಪಡೆದುಕೊಳ್ಳಲು ಎಲ್ಲರಿಗೂ ಕಾಣುವಂತೆ ಪ್ರಯತ್ನಮಾಡು.
  5. make play
    1. ಪರಿಣಾಮಕಾರಿಯಾಗಿ ವರ್ತಿಸು, ನಡೆ.
    2. (ಮುಖ್ಯವಾಗಿ ಜೂಜಿನಲ್ಲಿ, ಬೇಟೆಯಲ್ಲಿ) ಬೆನ್ನಟ್ಟಿ ಬರುವವರನ್ನು ದಣಿಸಿಬಿಡು.
  6. make play with ಪ್ರದರ್ಶನಾತ್ಮಕವಾಗಿ ಬಳಸು, ಉಪಯೋಗಿಸು.
  7. out of play (ಕ್ರಿಕೆಟ್‍, ಕಾಲ್ಚೆಂಡಾಟ, ಮೊದಲಾದವಲ್ಲಿ) ಆಟಕ್ಕೆ ಸೇರದ; ಆಟದಲ್ಲಿಲ್ಲದ; ನಿಯಾಮಾವಳಿಯ ಪ್ರಕಾರ ತಾತ್ಕಾಲಿಕವಾಗಿ ಆಟದಲ್ಲಿ ಬಳಸುತ್ತಿರದ: ball is out of play (ನಿಯಮಾನುಸಾರ) ಚೆಂಡು ತಾತ್ಕಾಲಿಕವಾಗಿ ಆಟದಲ್ಲಿಲ್ಲ; ಆಟದಲ್ಲಿ ತಾತ್ಕಾಲಿಕವಾಗಿ ಚೆಂಡನ್ನು ಬಳಸುತ್ತಿಲ್ಲ.
  8. play of words ಪದಗಳ ಚೆಲ್ಲಾಟ; ಮಾತಿನ ಬಿನ್ನಾಣ, ಬೆಡಗು.
  9. play on words ಹದಿರುನುಡಿ; ಶ್ಲೇಷೆ.