See also 1miss  3miss
2miss ಮಿಸ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯ, ಕ್ಷಿಪಣಿ) ಗುರಿ ತಪ್ಪು ( ಅಕರ್ಮಕ ಕ್ರಿಯಾಪದ ಸಹ).
  2. (ವಸ್ತು ಯಾ ಗುರಿಯನ್ನು) ಕಂಡುಹಿಡಿಯದೆ ಹೋಗು; ಪಡೆಯದೆಹೋಗು; ಸಾಧಿಸದೆ ಹೋಗು ( ಅಕರ್ಮಕ ಕ್ರಿಯಾಪದ ಸಹ).
  3. (ಅವಕಾಶ, ಕಾಲ, ಸಂದರ್ಭ, ಮೊದಲಾದವನ್ನು) ಕಳೆದುಕೊ.
  4. (ರೈಲು, ಬಸ್ಸು, ಮೊದಲಾದವನ್ನು) ತಪ್ಪಿಸಿಕೊ; ಕಳೆದುಕೊ; ತಪ್ಪಿ ಹೋಗುವಂತೆ ಮಾಡಿಕೊ.
  5. (ಸಂದರ್ಭೋಕ್ತಿ ಮೊದಲಾದವನ್ನು) ಕೇಳಿಸಿಕೊಳ್ಳದೆ ಹೋಗು; ಅರ್ಥ ಮಾಡಿಕೊಳ್ಳದೆ ಹೋಗು: miss the point ಆ ಅಂಶವನ್ನು ಕೇಳಿಸಿಕೊಳ್ಳಲಿಲ್ಲ, ಅರ್ಥ ಮಾಡಿಕೊಳ್ಳಲಿಲ್ಲ.
  6. (ಓದುವಾಗ, ಬರೆಯುವಾಗ, ಮಾತು ಮೊದಲಾದವನ್ನು) ಬಿಟ್ಟುಬಿಡು.
  7. (ಗೊತ್ತು ಮಾಡಿದಂತೆ ಸಕಾಲಕ್ಕೆ ಬರದೆ, ಕೆಲಸ ನಡೆಸದೆ) ತಪ್ಪು; ಗೈರುಹಾಜರಾಗು.
  8. (ವ್ಯಕ್ತಿಯನ್ನು) ಸಂಧಿಸದೆ ಹೋಗು; ಭೇಟಿಯಾಗದಿರು.
  9. (ಭೇಟಿ ಕಾರ್ಯಕ್ರಮವನ್ನು) ಪಾಲಿಸದೆ ಹೋಗು; (ಅದರಿಂದ) ತಪ್ಪಿಸಿಕೊ; (ಅದಕ್ಕೆ) ಗೈರು ಹಾಜರಾಗು.
  10. (ಘಟನೆ ಯಾ ಸಂಗತಿಯನ್ನು) ನೋಡದಿರು; ಗಮನಿಸದಿರು; ನೋಡದೆ ಯಾ ಅದಕ್ಕೆ ಹಾಜರಾಗದೆ, ಅದರಲ್ಲಿ ಪಾಲುಗೊಳ್ಳದೆ – ಹೋಗು; ಅದನ್ನು ತಪ್ಪಿಸಿಕೊ.
  11. (ಸಾಮಾನ್ಯವಾಗಿ ವಿಷಾದದಿಂದ, ಯಾವುದೇ ವಸ್ತು, ವ್ಯಕ್ತಿ, ಮೊದಲಾದವುಗಳ) ಅಭಾವವನ್ನು – ಗುರುತಿಸು, ಗಮನಿಸು: he missed his wife terribly ತನ್ನ ಹೆಂಡತಿ ಇಲ್ಲವಲ್ಲ ಎಂದು ಬಹಳ ಪರಿತಪಿಸಿದ, ಬಲು ನೊಂದುಕೊಂಡ. he missed the watch as soon as the stranger had left ಆಗಂತುಕನು ಹೊರಟುಹೋದ ಕೂಡಲೇ ತನ್ನ ಗಡಿಯಾರ ನಾಪತ್ತೆಯಾದುದನ್ನು ಗಮನಿಸಿದ.
  12. ತಪ್ಪಿಸು: go early to miss the traffic ವಾಹನಗಳ ಒತ್ತಡವನ್ನು ತಪ್ಪಿಸಿಕೊಳ್ಳಲು ಬೇಗ ಹೊರಡು.
ಪದಗುಚ್ಛ
  1. be missing ಇಲ್ಲದಿರು; ಹೊಂದಿಲ್ಲದಿರು; ಅಭಾವವಾಗಿರು.
  2. miss fire
    1. (ಬಂದೂಕು) ಹೊಡೆಯದೆ, ಹಾರದೆ – ಹೋಗು ಯಾ ಗುರಿ ತಾಕದಿರು.
    2. (ರೂಪಕವಾಗಿ) ಉದ್ದೇಶ – ಭಂಗವಾಗು, ಸಾಧಿಸದಿರು, ನಿಷ್ಫಲವಾಗು.
  3. miss on ನಿಷ್ಫಲವಾಗು; ವಿಫಲವಾಗು; ಅಯಶಸ್ವಿಯಾಗು; ಗುರಿ ಮುಟ್ಟದೆ ಹೋಗು: a play which missed on Broadway ಬ್ರಾಡ್‍ವೇ ರಂಗಭೂಮಿಯ ಮೇಲೆ ಅಯಶಸ್ವಿಯಾದ ನಾಟಕ.
  4. miss out
    1. (ಓದುವಾಗ, ಬರೆಯುವಾಗ, ಪದ ಮೊದಲಾದವನ್ನು) ಬಿಟ್ಟುಬಿಡು.
    2. ಗೆಲ್ಲದಿರು; ಗುರಿ ಮುಟ್ಟದಿರು: he cannot offer to miss out as this is his big chance ಇದು ಅವನಿಗೆ ಪ್ರಮುಖ ಅವಕಾಶವಾಗಿರುವುದರಿಂದ, ಅವನು ಗೆಲ್ಲದೆ ಇರುವಂತಿಲ್ಲ.
  5. miss stays ಹಡಗಿನ ಗತಿಯ ದಿಕ್ಕನ್ನು ಬದಲಾಯಿಸಲು ಆಗದಿರು.
  6. miss the boat = ಪದಗುಚ್ಛ\((7)\).
  7. miss the bus ಅವಕಾಶ ಕಳೆದುಕೊ.
  8. not miss a trick ಸಿಕ್ಕಿದ ಅವಕಾಶ, ಅನುಕೂಲ, ಮೊದಲಾದವನ್ನು ಕಳೆದುಕೊಳ್ಳಬೇಡ, ಹಾಳು ಮಾಡಿಕೊಳ್ಳಬೇಡ.
  9. not miss much ಹುಷಾರಾಗಿರು; ಎಚ್ಚರಿಕೆಯಿಂದಿರು.