See also 1miss  2miss
3miss ಮಿಸ್‍
ನಾಮವಾಚಕ
  1. ಕನ್ಯೆ; ಕುಮಾರಿ:
    1. ಹುಡುಗಿ ಯಾ ಮದುವೆಯಾಗಿರದ ಹೆಂಗಸು.
    2. ಮದುವೆಯಾಗಿದ್ದರೂ ತನ್ನ ವೃತ್ತಿಯ ಉದ್ದೇಶಗಳಿಗಾಗಿ ತನ್ನ ಕನ್ಯಾವಸ್ಥೆಯ ಹೆಸರನ್ನೇ ಉಳಿಸಿಕೊಂಡಿರುವ ಹೆಂಗಸಿಗೆ ಬಳಸುವ ಒಕ್ಕಣೆಯ ಪದ: miss Smith ಕುಮಾರಿ ಸ್ಮಿತ್‍ (ಬಹುವಚನ the Miss Smiths, the Misses Smith ಸ್ಮಿತ್‍ ಕನ್ಯೆಯರು, ಕುಮಾರಿಯರು).
  2. (ಯಾವುದೇ ಒಂದು ದೇಶದಲ್ಲಿ ಯಾವುದೇ ಒಂದು ವರ್ಷದ) ಸೌಂದರ್ಯರಾಣಿ, ಪರಮ ಸುಂದರಿ ಎಂದು ಆಯ್ಕೆಯಾದ ತರುಣಿ: Miss 1996 ಒಂದು ಸಾವಿರದ ಒಂಬೈನೂರ ತೊಂಬತ್ತಾರನೆಯ ಇಸವಿಯ ಪರಮ ಸುಂದರಿ. Miss India ಭಾರತದ ಪರಮ ಸುಂದರಿ.
  3. (ತಿರಸ್ಕಾರವಾಗಿ ಯಾ ಹಾಸ್ಯವಾಗಿ) ಪೋರಿ; ಹುಡುಗಿ (ಮುಖ್ಯವಾಗಿ ಪಾಠಶಾಲೆಯ ಪೋರಿ): a pert miss ದಿಟ್ಟ ಪೋರಿ.
  4. (ಶಿಕ್ಷಕಿ, ಅಂಗಡಿ ಸಹಾಯಕಿ ಯಾ ಯಜಮಾನಿಯನ್ನು ಹೆಸರು ಉಚ್ಚರಿಸದೆ ಸಂಬೋಧಿಸುವಾಗ ಒಕ್ಕಣೆಯಾಗಿ ಬಳಸುವ ಪದ) ಮಿಸ್‍; ತಂಗಿ: may I help you, miss? ತಂಗಿ, ನಾನು ನಿನಗೆ ಸಹಾಯ ಮಾಡಲೇ?