See also 1mind
2mind ಮೈಂಡ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ಒಂದರ ಬಗೆಗೆ) (ಮುಖ್ಯವಾಗಿ ಆಜ್ಞಾರ್ಥವಾಗಿ) ಮನಸ್ಸಿಡು; ಗಮನದಲ್ಲಿಡು; ಮನಸ್ಸು ಮಾಡು.
  2. ಲಕ್ಷ್ಯ ಕೊಡು; ಲಕ್ಷ್ಯ ಮಾಡು; ಲಕ್ಷಿಸು; ಗಮನ ಕೊಡು; ಗಮನಿಸು: never mind the expense ಖರ್ಚನ್ನು ಲಕ್ಷಿಸಬೇಡ.
  3. ಸಂಬಂಧ ಹೊಂದಿರು; ಸಂಬಂಧಿಸಿರು.
  4. (ಕೆಲಸ ಮೊದಲಾದವನ್ನು ಮಾಡಲು) ತೊಡಗು; ಮನಸ್ಸು ಮಾಡು: mind your own business ನಿನ್ನ ಕೆಲಸವನ್ನು ನೀನು ನೋಡಿಕೊ; ಮತ್ತೊಬ್ಬನ ಗೋಜಿಗೆ ಹೋಗಬೇಡ; ಇನ್ನೊಬ್ಬರ ಉಸಾಬರಿ ನಿನಗೇಕೆ?
  5. (ಸಾಮಾನ್ಯವಾಗಿ ನಿಷೇಧವಾಚಿಯೊಂದಿಗೆ ಯಾ ಪ್ರಶ್ನೆಯಲ್ಲಿ) ಆಕ್ಷೇಪಿಸು; ವಿರೋಧಿಸು; ಆಕ್ಷೇಪಕರವೆಂದು, ಅಡ್ಡಿ, ತೊಂದರೆ ಯಾ ಅಭ್ಯಂತರವೆಂದು – ಭಾವಿಸು: would you mind ringing? ಟೆಲಿಹೋನ್‍ ಮಾಡಲು ನಿಮಗೆ ಆಕ್ಷೇಪ ಇಲ್ಲವಷ್ಟೆ? I should not mind a cup of tea ಒಂದು ಬಟ್ಟಲು ಚಹಾ ಕೊಟ್ಟರೆ ನನ್ನದೇನೂ ಅಡ್ಡಿಯಿಲ್ಲ.
  6. ಗಮನವಿಡು; ಮರೆಯದಿರು; ನೆನಪಿಡು; ಎಚ್ಚರವಹಿಸು: mind that you don’t talk loud ಗಟ್ಟಿಯಾಗಿ ಮಾತನಾಡಬಾರದು ಎಂಬುದನ್ನು ಮರೆಯಬೇಡ.
  7. ನೆನಪಿಡು; ಗಮನಿಸು; ನಿಗಾ ಇಡು; (ಒಂದರ ಬಗ್ಗೆ) ಎಚ್ಚರಿಕೆಯಿಂದಿರು, ಹುಷಾರಾಗಿರು: mind the step ಮೆಟ್ಟಲಿದೆ ಜೋಕೆ! ಮೆಟ್ಟಲಿನ ನಿಗಾ ಇರಲಿ.
  8. (ಉಸ್ತುವಾರಿ) ನೋಡಿಕೊ; ಉಪಚರಿಸು: the nurse minds the child ದಾದಿ ಮಗುವನ್ನು ನೋಡಿಕೊಳ್ಳುತ್ತಾಳೆ.
  9. (ಅಮೆರಿಕ ಮತ್ತು ಐರ್ಲೆಂಡ್‍) ವಿಧೇಯನಾಗಿರು; ಹೇಳಿದಂತೆ ಕೇಳು ಯಾ ಹೇಳಿದ ಹಾಗೆ ನಡೆದುಕೊ: mind what your teacher says ನಿನ್ನ ಉಪಾಧ್ಯಾಯರಿಗೆ ವಿಧೇಯನಾಗಿರು, ಅವರು ಹೇಳಿದಂತೆ ಕೇಳು.
ಪದಗುಚ್ಛ
  1. mind one’s P’s and Q’s ತನ್ನ ವರ್ತನೆಯಲ್ಲಿ, ನಡೆವಳಿಕೆಯಲ್ಲಿ ಎಚ್ಚರದಿಂದಿರು; ಮಾತುಕತೆ, ನಡಾವಳಿಗಳಲ್ಲಿ – ಜಾಗರೂಕನಾಗಿರು, ಎಚ್ಚರಿಕೆಯಿಂದಿರು, ಎಚ್ಚರಿಕೆ ವಹಿಸು.
  2. mind out (for) = 2mind\((7)\).
  3. mind the shop ತಾತ್ಕಾಲಿಕವಾಗಿ ವ್ಯವಹಾರಗಳ ಜವಾಬ್ದಾರಿ ವಹಿಸು.
  4. mind you ನೆನಪಿರಲಿ; ಗಮನದಲ್ಲಿರಲಿ: I have no objection mind you ನನ್ನ ಅಭ್ಯಂತರವೇನೂ ಇಲ್ಲ, ನೆನಪಿರಲಿ.
  5. mind your back (or backs) (ಆಡುಮಾತು) ಹಾದುಹೋಗಲು ಬಿಡು; ನಾನು ಹೋಗಲು ದಾರಿ ಕೊಡು.
  6. never mind
    1. ಪರವಾಗಿಲ್ಲ; ಚಿಂತಿಸಬೇಡಿ; ಯೋಚನೆ ಮಾಡಬೇಡಿ (ಸಮಾಧಾನ ಹೇಳಲು ನುಡಿಯುವ ಮಾತು).
    2. (never you mind ಸಹ) ಅದನ್ನು ಬಿಡಿ; ಸರಿಸರಿ; ನಿಮ್ಮ ಪ್ರಶ್ನೆಗೆ ನಾನು ಉತ್ತರ ಹೇಳುವುದಿಲ್ಲ, ಉತ್ತರ ಹೇಳಲು ನಿರಾಕರಿಸುತ್ತೇನೆ (ಪ್ರಶ್ನೆಗೆ ಉತ್ತರ ಹೇಳುವುದನ್ನು ತಪ್ಪಿಸಿಕೊಳ್ಳಲು ಬಳಸುವ ಮಾತು).
  7. mind your eye (ಅಶಿಷ್ಟ) ಹುಷಾರಾಗಿರು; ಜೋಕೆ.
  8. if you don’t mind ನಿಮ್ಮ ಅಭ್ಯಂತರವಿಲ್ಲದಿದ್ದರೆ; ನೀವು ಬೇಡವೆನ್ನದಿದ್ದರೆ; ನಿಮ್ಮ ಆಕ್ಷೇಪ, ಅಸಮ್ಮತಿ, ವಿರೋಧ ಇಲ್ಲದಿದ್ದರೆ.
  9. do you mind? (ವ್ಯಂಗ್ಯವಾಗಿ) ದಯವಿಟ್ಟು (ನೀನು ಆಡುತ್ತಿರುವುದನ್ನು ಯಾ ಮಾಡುತ್ತಿರುವುದನ್ನು) ನಿಲ್ಲಿಸು (ಯಾ ನಿಲ್ಲಿಸುವೆಯಾ?)