presence ಪ್ರೆಸನ್ಸ್‍
ನಾಮವಾಚಕ
  1. ಇರವು; ಎದುರು; ಹಾಜರಿ; ಉಪಸ್ಥಿತಿ; ಎದುರಿಗಿರುವುದು; ಮುನ್ನೆಲೆ; ಸನ್ನಿಧಿ; ಸಾನ್ನಿಧ್ಯ; ಸಮ್ಮುಖ: your presence is requested ನಿಮ್ಮ ಉಪಸ್ಥಿತಿಯನ್ನು ಕೋರಲಾಗಿದೆ; ನೀವು ಹಾಜರಿರಬೇಕೆಂದು ಕೋರಲಾಗಿದೆ.
  2. (ವ್ಯಕ್ತಿ) ಇರುವ ಸ್ಥಳ; ಸನ್ನಿಧಿ; ಸಾನ್ನಿಧ್ಯ; ಸಮಕ್ಷ(ಮ); ಸನ್ನಿಧಾನ: admitted to his presence ಅವನಿದ್ದ ಸ್ಥಳಕ್ಕೆ ಬರಗೊಡಲಾಯಿತು. banished from his presence ಅವನಿದ್ದ ಸ್ಥಳದಿಂದ (ಅವನ ಸಾನ್ನಿಧ್ಯದಿಂದ) ಹೊರಗೆ ಅಟ್ಟಲಾಯಿತು. in this august presence ಈ ಮಹಾ ಸನ್ನಿಧಾನದಲ್ಲಿ.
  3. (ವ್ಯಕ್ತಿಯ)
    1. (ಮುಖ್ಯವಾಗಿ ಗಂಭೀರವಾದ) ನಿಲವು; ಆಕೃತಿ; (ಶರೀರ)ವಿನ್ಯಾಸ; ಭಂಗಿ: a man of (a) noble presence ಗಂಭೀರ ನಿಲವಿನ ಮನುಷ್ಯ; ಗಂಭೀರಾಕೃತಿಯ ವ್ಯಕ್ತಿ.
    2. ವ್ಯಕ್ತಿತ್ವದ ಪ್ರಭಾವ.
  4. (ರಾಜಕೀಯ ಪ್ರಭಾವಕ್ಕಾಗಿ) ತೋರಿಸಿಕೊಳ್ಳುವುದು. maintained a presence ರಾಜಕೀಯ ಪ್ರಭಾವಕ್ಕಾಗಿ (ಥಟ್ಟನೆಯ ತುರ್ತು ಪರಿಸ್ಥಿತಿಯಲ್ಲಿ) ಶಾಂತಿ ಮತ್ತು ಚಿತ್ತಸ್ಥೈರ್ಯ ತೋರಿಸಿದ, ಪ್ರಕಟಿಸಿದ.
ಪದಗುಚ್ಛ
  1. in the presence of ಎದುರಿಗೆ; ಸಮಕ್ಷಮದಲ್ಲಿ: in the presence of a large company ದೊಡ್ಡ ನೆರವಿಯ ಎದುರಿನಲ್ಲಿ.
  2. presence of mind (ಏಕಾಏಕಿ ಒದಗುವ ಕಷ್ಟ ಪರಿಸ್ಥಿತಿಯಲ್ಲಿ) ಶಾಂತಚಿತ್ತತೆ ಮತ್ತು ಆತ್ಮ ಸಂಯಮ, ಚಿತ್ತಸ್ಥೈರ್ಯ.
  3. real presence ಪ್ರತ್ಯಕ್ಷ; ಸಮಕ್ಷಮ; ದೇವತಾ ಶಾಸ್ತ್ರಜ್ಞರು ವಾದಿಸುವಂತೆ ಪ್ರಭುಭೋಜನ ಸಂಸ್ಕಾರದ ಪ್ರಸಾದದಲ್ಲಿ ಕ್ರಿಸ್ತನ ದೇಹ ಮತ್ತು ರಕ್ತಗಳ ಪ್ರತ್ಯಕ್ಷತೆ.
  4. the presence ಉನ್ನತ ಪದವಿಯುಳ್ಳವನ (ಮುಖ್ಯವಾಗಿ ರಾಜನ) ಬಳಿಯ ವಿಧಿಪೂರ್ವಕ ಸಾನ್ನಿಧ್ಯ: he retired from the presence ರಾಜಸಾನ್ನಿಧ್ಯವನ್ನು ಬಿಟ್ಟು ತೆರಳಿದನು.