See also 2meet  3meet
1meet ಮೀಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ met ಉಚ್ಚಾರಣೆ ಮೆಟ್‍).
ಸಕರ್ಮಕ ಕ್ರಿಯಾಪದ
  1. (ಎದುರಿಗೆ ಬರುತ್ತಿರುವ ವ್ಯಕ್ತಿಯನ್ನು ಯಾ ವ್ಯಕ್ತಿಗಳನ್ನು ಆಕಸ್ಮಿಕವಾಗಿಯೋ, ಉದ್ದೇಶಪೂರ್ವಕವಾಗಿಯೋ) ಸಂಧಿಸು; ಭೇಟಿಯಾಗು.
  2. (ವ್ಯಕ್ತಿ, ರೈಲುಬಂಡಿ, ಮೊದಲಾದವುಗಳು ಬರುವ ಕಡೆ ಹೋಗಿ) ಎದುರುಗೊಳ್ಳು; ಬರಮಾಡಿಕೊ; ಸ್ವಾಗತಿಸು: meet the guests at the door ಬಾಗಿಲ ಬಳಿ ಅತಿಥಿಗಳನ್ನು ಎದುರುಗೊಳ್ಳು.
  3. (ಗೆರೆ, ರಸ್ತೆ, ಮೊದಲಾದವುಗಳು ಮತ್ತೊಂದು ಗೆರೆ ಮೊದಲಾದವನ್ನು) ಕೂಡು; ಸೇರು; ಸಂಧಿಸು: where the road meets the flyover ರಸ್ತೆಯು ಮೇಲುಸೇತುವೆಯನ್ನು ಸೇರುವ ಕಡೆ.
  4. (ಒಬ್ಬನ) ಪರಿಚಯ ಮಾಡಿಕೊ; ಸಂಧಿಸು; (ಒಬ್ಬನ ಜೊತೆಗೆ) ಕಲೆ, ಸೇರು (ಪರಿಚಯ ಮಾಡಿಕೊಡುವಾಗ, ಅಮೆರಿಕನ್‍ ಪ್ರಯೋಗ ವಿಧಿರೂಪದಲ್ಲಿ ಪ್ರಯೋಗ): meet Dr. Smith ಡಾ| ಸ್ಮಿತ್‍ರನ್ನು ಸಂಧಿಸಿ; ಇಕೋ; ಇವರೆ ಡಾ| ಸ್ಮಿತ್‍. delighted to meet you ನಿಮ್ಮನ್ನು ಭೇಟಿ ಮಾಡಲು ಸಂತೋಷವಾಗುತ್ತದೆ.
  5. (ಸಮ್ಮೇಳನ, ವ್ಯವಹಾರ, ಪೂಜೆ, ಮೊದಲಾದವುಗಳಿಗಾಗಿ) ಒಟ್ಟಿಗೆ ಸೇರು; ಸಭೆಸೇರು: the committee meets every week ಆ ಸಮಿತಿ ಪ್ರತಿವಾರವೂ ಸಭೆ ಸೇರುತ್ತದೆ.
  6. (ಒಬ್ಬ ವ್ಯಕ್ತಿ ಯಾ ಒಂದು ಗುಂಪಿನ ವಿಷಯದಲ್ಲಿ) (ಬೇಡಿಕೆ, ಆವಶ್ಯಕತೆ, ಮೊದಲಾದವನ್ನು) ಪೂರೈಸು; ತೃಪ್ತಿಗೊಳಿಸು: could not meet his requirements ಅವನ ಆವಶ್ಯಕತೆಗಳನ್ನು ಅದು ಪೂರೈಸಲಿಲ್ಲ. met the original proposal with hostility ಮೂಲ ಪ್ರಸ್ತಾಪಕ್ಕೆ ವಿರೋಧ ತೋರಿಸಲಾಯಿತು.
  7. (ಆಕ್ಷೇಪ ಮೊದಲಾದವುಗಳಿಗೆ) ಉತ್ತರ ಕೊಡು; ಸಮಾಧಾನ ಹೇಳು; ಸಮಜಾಯುಷಿ ಕೊಡು.
  8. (ಸೂಚನೆಗಳು, ಗಡುವುಗಳು, ಮೊದಲಾದವುಗಳಿಗೆ) ಒಪ್ಪು; ಸಮ್ಮತಿಸು: agreed to meet the new terms ಹೊಸ ಷರತ್ತುಗಳನ್ನು ಪೂರೈಸಲು ಒಪ್ಪಿದ.
  9. (ಬಿಲ್ಲನ್ನು) ಪಾವತಿ ಮಾಡು; (ಅದರ ಹಣ) ಸಲ್ಲಿಸು.
  10. (ಚೆಕ್ಕಿಗೆ ಆವಶ್ಯಕವಾದ ಹಣ) ತುಂಬು; ನೀಡು; ಸಲ್ಲಿಸು; ಪಾವತಿ ಮಾಡು.
  11. (ಕಷ್ಟ ನಷ್ಟ, ಜಯ, ಮೊದಲಾದವುಗಳನ್ನು) ಎದುರಿಸು; ಅನುಭವಿಸು: met many a difficulty ಅನೇಕ ಕಷ್ಟಗಳನ್ನು ಅನುಭವಿಸಿದ, ಎದುರಿಸಿದ.
  12. (ಪಂದ್ಯ, ಕಾಳಗ, ದ್ವಂದ್ವ ಯುದ್ಧ, ಮೊದಲಾದವನ್ನು) ಎದುರಿಸು; ವಿರೋಧಿಸು; ಎದುರಿಸಿ ನಿಲ್ಲು: our boys meet the University team next week ನಮ್ಮ ಹುಡುಗರು ಮುಂದಿನ ವಾರ ವಿಶ್ವವಿದ್ಯಾನಿಲಯದ ತಂಡವನ್ನು ಎದುರಿಸುತ್ತಾರೆ.
  13. (ಒಬ್ಬನಿಗೆ, ಒಬ್ಬನ ಅಭಿಲಾಷೆಗಳಿಗೆ) ಹೊಂದಿಕೊ; ಅನುಕೂಲವಾಗಿರು: expressed his willingness to meet him on that point ಆ ವಿಷಯದಲ್ಲಿ (ಅವನೊಡನೆ) ಹೊಂದಿಕೊಳ್ಳಲು ಒಪ್ಪಿದ.
ಅಕರ್ಮಕ ಕ್ರಿಯಾಪದ
  1. (ಇಬ್ಬರು ಯಾ ಹೆಚ್ಚು ಜನರ ವಿಷಯದಲ್ಲಿ) ಎದುರಾಗು; ಮುಖಾಮುಖಿಯಾಗು; (ಒಬ್ಬರನ್ನೊಬ್ಬರು) ಭೇಟಿಯಾಗು; ಸಂಧಿಸು: we met on the street ನಾವು ರಸ್ತೆಯಲ್ಲಿ ಸಂಧಿಸಿದೆವು. decided to meet on the bridge ಸೇತುವೆಯ ಮೇಲೆ ಸಂಧಿಸಲು ನಿರ್ಧರಿಸಿದ.
  2. (ಒಬ್ಬರು ಯಾ ಹೆಚ್ಚು ಜನರ ವಿಷಯದಲ್ಲಿ) ಪರಸ್ಪರ ಪರಿಚಯ ಮಾಡಿಕೊ.
  3. (ಚಲಿಸುವ ವಸ್ತು, ಗೆರೆ, ಪ್ರದೇಶ, ಮೊದಲಾದವುಗಳ ವಿಷಯದಲ್ಲಿ) ಸೇರು; ಸಂಧಿಸು; ಸಂಪರ್ಕಕ್ಕೆ ಬರು: where the sky and the land meet ಆಕಾಶ, ಭೂಮಿ ಸೇರುವ ಸ್ಥಳದಲ್ಲಿ: their hands met ಅವರ ಕೈಗಳು ಪರಸ್ಪರ ಸೇರಿದವು.
  4. (ಸಭೆ, ಕಾರ್ಯಕಲಾಪ, ಪೂಜೆ, ಮೊದಲಾದವನ್ನು ನಡೆಸಲು) ಸೇರು; ಕೂಡು; ಒಟ್ಟಿಗೆ ಬರು: the city council will meet soon to deal with the problems ಸಮಸ್ಯೆಯನ್ನು ಪರಿಶೀಲಿಸಲು ನಗರಸಮಿತಿಯು ಸದ್ಯದಲ್ಲಿಯೇ ಸೇರಲಿದೆ.
  5. (ಕಷ್ಟ, ನಷ್ಟ, ಜಯ, ಮೊದಲಾದವುಗಳನ್ನು) ಅನುಭವಿಸು; ಎದುರಿಸು: meet with success ಜಯ ಪಡೆ. meet with many problems ಅನೇಕ ಸಮಸ್ಯೆಗಳನ್ನು ಎದುರಿಸು.
  6. (ಬಟ್ಟೆಗಳು, ಪರದೆಗಳು, ಮೊದಲಾದವುಗಳ ವಿಷಯದಲ್ಲಿ) ಸರಿಯಾಗಿ ಸೇರಿಕೊ, ಕೂಡು: my jacket won’t meet ನನ್ನ ಜಾಕೆಟ್ಟು ಸರಿಯಾಗಿ ಒಂದಕ್ಕೊಂದು ಕೂಡುವುದಿಲ್ಲ, ಜಾಕೆಟ್ಟು ತುಂಬ ಬಿಗಿ ಯಾ ಗುಂಡಿ ಹಾಕಲಾಗದಷ್ಟು ಚಿಕ್ಕದು.
  7. (ಗುಣಗಳು ಮೊದಲಾದವುಗಳ ವಿಷಯದಲ್ಲಿ) ಒಂದುಗೂಡು; ಒಟ್ಟಿಗೆ ಸೇರು; ಸಂಗಮಿಸು; ಸಂಗಮವಾಗು; ಒಬ್ಬನಲ್ಲಿ ಒಟ್ಟಿಗೆ ಸೇರು: many virtues meet in her ಅವಳಲ್ಲಿ ಅನೇಕ ಒಳ್ಳೆಯ ಗುಣಗಳು ಸೇರಿವೆ.
ಪದಗುಚ್ಛ
  1. make both $^1$ends meet.
  2. meet a person’s eye
    1. ಒಬ್ಬನ ದೃಷ್ಟಿಗೆ ಬೀಳು; ನೋಟಕ್ಕೆ ಸಿಗು; ಅವನು ನಿನ್ನನ್ನು ನೋಡುವಂತಾಗು.
    2. ಒಬ್ಬನು ನಿನ್ನನ್ನು ನೋಡುತ್ತಿದ್ದಾನೆಯೇ ಎಂಬುದನ್ನು ಗಮನಿಸಿ ಅವನತ್ತ ಮರುದೃಷ್ಟಿ ಬೀರು.
  3. meet a person halfway
    1. (ಇನ್ನೊಬ್ಬನು) ನೀಡುವ ಸ್ನೇಹ ಹಸ್ತ ಹಿಡಿ, ತೆಗೆದುಕೊ, ಸ್ವೀಕರಿಸು.
    2. ಒಪ್ಪಂದಕ್ಕೆ ಬರು; ಕೊಟ್ಟು, ಪಡೆದು ರಾಜಿಯಾಗು; ಅರ್ಧ ಪಟ್ಟು ಬಿಟ್ಟು ರಾಜಿಯಾಗು: in spite of their differences they agreed to meet halfway ಭಿನ್ನಾಭಿಪ್ರಾಯಗಳಿದ್ದರೂ ಅವರಿಬ್ಬರೂ ಕೊಟ್ಟು ಪಡೆದು ರಾಜಿಯಾಗಲು ಒಪ್ಪಿದರು.
  4. meet the ear ಕಿವಿಗೆ ಬೀಳು; ಕೇಳಿಸಿಕೊ.
  5. meet the eye ಕಣ್ಣಿಗೆ ಬೀಳು; ದೃಷ್ಟಿಗೋಚರವಾಗು; ಕಾಣಿಸಿಕೊ.
  6. meet together ಸೇರು; ಒಟ್ಟಾಗು; ಒಟ್ಟುಗೂಡು; ಕಲೆ: they met together ಅವರು ಒಬ್ಬರನ್ನೊಬ್ಬರು ಸಂಧಿಸಿದರು.
  7. meet up (ಆಡುಮಾತು) ಅಕಸ್ಮಾತ್ತಾಗಿ ಸಂಧಿಸು.
  8. meet with
    1. (ಅಡಚಣೆ ಮೊದಲಾದವನ್ನು) ಎದುರಿಸು.
    2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ವ್ಯಕ್ತಿ ಮೊದಲಾದವರನ್ನು) ಸಂಧಿಸು; ಭೇಟಿಯಾಗು.
    3. ಪಾತ್ರವಾಗು; ಪಕ್ಕಾಗು; ಅನುಭವಿಸು: they met with courtesy during their stay ಅವರು ಅಲ್ಲಿ ಇಳಿದುಕೊಂಡಿದ್ದಾಗ ಸೌಜನ್ಯಕ್ಕೆ ಪಾತ್ರರಾದರು.
  9. more in it than meets the eye ಅದರಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನ ಅಂಶಗಳಿವೆ; ಕಣ್ಣಿಗೆ ಕಾಣದ ಗುಣಗಳು ಯಾ ತೊಡಕುಗಳು ಅದರಲ್ಲಿವೆ.
  10. meet the case ಸಂದರ್ಭಕ್ಕೆ ಸಾಕಷ್ಟಿರು, ಸಾಕಾಗಿರು.