See also 1mark  3mark
2mark ಮಾರ್ಕ್‍
ಸಕರ್ಮಕ ಕ್ರಿಯಾಪದ
  1. (ಮುದ್ರೆಯೊತ್ತಿ, ಕೆತ್ತನೆ ಮಾಡಿ, ಬರೆದು, ಮೊದಲಾಗಿ ವಸ್ತುವಿನ ಯಾ ವ್ಯಕ್ತಿಯ ಮೇಲೆ) ಗುರುತುಮಾಡು; ಅಂಕಿಸು.
  2. (ಗುರುತಿಸಲಾಗುವಂತೆ ಉಡುಪು ಮೊದಲಾದವುಗಳಿಗೆ) ಗುರುತುಹಾಕು; ಹೆಸರು ಹಾಕು: mark the tree with their initials ಮರಗಳ ಮೇಲೆ ಅವರ ಹೆಸರಿನ ಆದ್ಯಕ್ಷರಗಳನ್ನು ಹಾಕು, ಕೆತ್ತು.
  3. (ಸರಕುಗಳ ಮೇಲೆ) ಬೆಲೆ ಅಂಕಿ ಅಂಟಿಸು; ಬೆಲೆ ಸೂಚಿಸುವ ಅಂಕಿಗಳನ್ನು ಲಗತ್ತಿಸು: we marked all the books with price-tags ಎಲ್ಲಾ ಪುಸ್ತಕಗಳಿಗೂ ಬೆಲೆ(ಅಂಕಿ) ಚೀಟಿಗಳನ್ನು ಅಂಟಿಸಿದೆವು.
  4. (ಕರ್ಮಣಿಪ್ರಯೋಗದಲ್ಲಿ) ಸ್ವಾಭಾವಿಕ ಮಚ್ಚೆಗಳನ್ನು ಹೊಂದಿರು: marked with silver spots ಬೆಳ್ಳಿ ಚುಕ್ಕೆಗಳಿಂದ ಕೂಡಿದ.
  5. (ಭೂಪಟದಲ್ಲಿ ಸ್ಥಳವನ್ನು, ಉಚ್ಚಾರಾಂಶದಲ್ಲಿ ದೀರ್ಘ ಸ್ವರವನ್ನು) ಚಿಹ್ನೆಗಳಿಂದ ಯಾ ಗುರುತುಗಳಿಂದ – ಹೆಸರಿಸು, ಸೂಚಿಸು, ನಿರ್ದೇಶಿಸು, ತೋರಿಸು.
  6. (ಆಟಗಳಲ್ಲಿ ಗೆದ್ದ ಅಂಕಗಳನ್ನು) ಗುರುತು ಮಾಡು; ನಮೂದಿಸು; ಬರೆದಿಡು; ದಾಖಲಿಸು.
  7. (ತನ್ನ ಅಸಮಾಧಾನ ಮೊದಲಾದವನ್ನು) ತೋರಿಸು; ವ್ಯಕ್ತಪಡಿಸು; ಪ್ರಕಟಿಸು; ಪ್ರಕಟಪಡಿಸು: marked his anger by leaving early ಬೇಗ ಎದ್ದು ಹೋಗಿ ತನ್ನ ಕೋಪ ಪ್ರಕಟಪಡಿಸಿದ.
  8. ಸ್ಪಷ್ಟವಾಗಿ ಕಾಣಿಸಿಕೊಳ್ಳು, ತೋರಿಸಿಕೊಳ್ಳು; ಎದ್ದು ತೋರು; ಎದ್ದುಕಾಣಿಸು (ಕರ್ಮಣಿಪ್ರಯೋಗದಲ್ಲಿ): this tendency is strongly marked ಈ ಪ್ರವೃತ್ತಿ ಬಲವಾಗಿ ಎದ್ದುಕಾಣಿಸುತ್ತಿದೆ. a marked difference ಸ್ಪಷ್ಟವಾಗಿ ಕಾಣಿಸುವ, ಎದ್ದು ಕಾಣಿಸುವ ವ್ಯತ್ಯಾಸ.
  9. ಒಡನೆ ಇರು; ಜೊತೆಯಲ್ಲಿರು; ಕುರುಹಾಗಿರು; ಚಿಹ್ನೆಯಾಗಿರು; ಲಕ್ಷಣ ಆಗಿರು: no triumph marks her manner ಅವಳ ರೀತಿಯಲ್ಲಿ ಜಯೋತ್ಸಾಹದ ಕುರುಹಿಲ್ಲ.
  10. ನೋಡು; ಗಮನಿಸು; ಲಕ್ಷ್ಯಕೊಡು; ಗ್ರಹಿಸು; ಅರ್ಥ ಮಾಡಿಕೋ: mark my words ನನ್ನ ಮಾತನ್ನು ಗಮನಿಸು, ಗ್ರಹಿಸು.
  11. (ಬೇಟೆಯ ಹಕ್ಕಿ ಮೊದಲಾದವು ಅಡಗಿಕೊಳ್ಳುವ ಸ್ಥಳವನ್ನು) ಜ್ಞಾಪಕದಲ್ಲಿಟ್ಟುಕೊ; ಗುರುತಿಟ್ಟುಕೊ; ನೆನಪಿಡು; ಗಮನಿಸು; ಲಕ್ಷ್ಯದಲ್ಲಿಡು.
  12. (ಬ್ರಿಟಿಷ್‍ ಪ್ರಯೋಗ) (ಕಾಲ್ಚೆಂಡಾಟ) (ಎದುರಾಳಿ ಆಚೀಚೆ ಚಲಿಸದಂತೆ) ಅವನಿಗೆ ಅಂಟಿಕೊಂಡಿರು; ಅವನ ಮೇಲೆ ನಿಗಾ, ಕಣ್ಣು ಇಟ್ಟಿರು; ಅವನ ಸುತ್ತಮುತ್ತಲೇ, ಅಕ್ಕಪಕ್ಕದಲ್ಲೇ ಇರು.
  13. (ಆಸ್ಟ್ರೇಲಿಯ, ರಗ್ಬಿ ಕಾಲ್ಚೆಂಡಾಟ ನಿಯಮ) (ಚೆಂಡನ್ನು) ಹಿಡಿ.
  14. (ವಸ್ತು ಯಾ ವ್ಯಕ್ತಿಯ) ಸ್ವರೂಪವನ್ನು ಗುರುತಿಸು, ಲಕ್ಷಿಸು, ಚಿತ್ರಿಸು: marked them as weak ಅವರನ್ನು ದುರ್ಬಲರೆಂದು ಲಕ್ಷಿಸಿದನು.
  15. (ಅಮೆರಿಕನ್‍ ಪ್ರಯೋಗ ಮತ್ತು ಆಸ್ಟ್ರೇಲಿಯ) (ಕುರಿಮರಿಯನ್ನು) ಹಿಡಮಾಡು; ಬೀಜವೊಡೆ.
  16. (ವಿದ್ಯಾರ್ಥಿಯ ಪ್ರಬಂಧ, ಉತ್ತರ, ಮೊದಲಾದವುಗಳ)
    1. ಸರಿತಪ್ಪು ನೋಡು; ಪರಿಶೀಲಿಸು.
    2. (ಅವುಗಳಿಗೆ) ನಂಬರು – ಕೊಡು, ಹಾಕು, ನೀಡು.
    3. (ಅಕ್ಷರಗಳ ಮೂಲಕ ಅವುಗಳ) ದರ್ಜೆ, ಮಟ್ಟ – ನಮೂದಿಸು, ನಿರ್ಧರಿಸು: marked A ಪ್ರಥಮ ದರ್ಜೆಯ, ಸ್ಥಾನದ.
  17. (ಯಾವುದರದೇ) ಗುರುತಾಗಿರು; ಚಿಹ್ನೆಯಾಗಿರು; ಲಕ್ಷಣವಾಗಿರು: the day was marked by storms ಬಿರುಮಳೆ ಅಂದಿನ ಲಕ್ಷಣವಾಗಿತ್ತು.
  18. (ಅಳತೆ ಮೊದಲಾದ ಕ್ರಮಾಂಕನ ಮಾಡಿದ ಉಪಕರಣಗಳ ವಿಷಯದಲ್ಲಿ, ಇಷ್ಟು ಡಿಗ್ರಿ ಮೊದಲಾದವುಗಳೆಂದು) ತೋರಿಸು; ಸೂಚಿಸು.
  19. ಪರಿಗಣಿಸು; ಮಾನ್ಯಮಾಡು; ಆಚರಿಸು: marked the occasion with a feast ಆ ಸಂದರ್ಭವನ್ನು ಔತಣದ ಮೂಲಕ ಆಚರಿಸಿದ.
ಪದಗುಚ್ಛ
  1. mark down
    1. (ವಸ್ತು, ಸರಕುಗಳು, ಮೊದಲಾದವುಗಳ ಮೇಲೆ) ಕಡಿಮೆ ಬೆಲೆ ಹಾಕು.
    2. ಟಿಪ್ಪಣಿ ಬರೆ; ಲಿಖಿತ ಟಿಪ್ಪಣಿ ತಯಾರಿಸು.
    3. (ಒಬ್ಬ ವ್ಯಕ್ತಿಯನ್ನು) ತನಗೆ ಬಲಿಯಗಿ ಆರಿಸಿಕೊ.
  2. mark off (ಎಲ್ಲೆ ಗುರುತಿಸಿ ಒಂದು ವಸ್ತುವನ್ನು ಮತ್ತೊಂದರಿಂದ) ಪ್ರತ್ಯೇಕಿಸು; ಬೇರೆಮಾಡು; ಬೇರ್ಪಡಿಸು (ರೂಪಕವಾಗಿ ಸಹ).
  3. mark out
    1. (ಗೊತ್ತಾದ ಭೂಪ್ರದೇಶಕ್ಕೆ) ಎಲ್ಲೆ ರಚಿಸು; ಎಲ್ಲೆ ಗುರುತುಮಾಡು; ಮೇರೆ ಗುರುತಿಸು.
    2. (ಕೆಲಸದ ವಿಧಾನ, ಮಾರ್ಗ, ಕ್ರಮ) ಯೋಜಿಸು; ಹಂಚಿಕೆಹಾಕು; ವ್ಯವಸ್ಥೆಗೊಳಿಸು; ಏರ್ಪಡಿಸು.
    3. ಗೊತ್ತು ಮಾಡು; ನಿಯಾಮಕ ಮಾಡು; ನಿಗದಿಗೊಳಿಸು; ಮೀಸಲಾಗಿಸು: marked out for slaughter ವಧೆಗೆ ಮೀಸಲಿಟ್ಟ; ಕಡಿಯಲು ಗೊತ್ತುಮಾಡಿದ.
  4. mark time
    1. (ಸೈನ್ಯ) ಮುಂದುವರಿಯದೆ, ನಿಂತಲ್ಲೇ, ಶಿಸ್ತಿನ ನಡಗೆಯಲ್ಲಿ ಹೇಗೋ ಹಾಗೆ ಹೆಜ್ಜೆ ಹಾಕುತ್ತಿರು; ಹೆಜ್ಜೆ ಎತ್ತಿಡುತ್ತಿರು.
    2. ಎಂದಿನಂತೆ, ರೂಢಿಯಂತೆ ಕೆಲಸ ಮಾಡುತ್ತಿರು; ಯಾಂತ್ರಿಕವಾಗಿ ಕೆಲಸ ಸಾಗಿಸುತ್ತಿರು, ಚಟುವಟಿಕೆ ತೋರುತ್ತಿರು.
    3. (ಮೇಲೇರಲು) ಸಮಯ ಕಾಯುತ್ತಿರು; ಹೊಂಚು ಹಾಕುತ್ತಿರು.
  5. mark up (ಸಾಮಾನಿನ ಮೇಲೆ)
    1. ಬೆಲೆ ಏರಿಸು, ಹೆಚ್ಚಿಸು; ಹೆಚ್ಚು ಬೆಲೆ ಹಾಕು.
    2. (ಬೆರಳಚ್ಚು ಮಾಡಲು ಯ ಬದಲಾಯಿಸಲು ಕರಡು ಪ್ರತಿ ಮೊದಲಾದವನ್ನು) ತಿದ್ದು; ತಿದ್ದುಪಡಿಮಾಡು.
  6. mark you ದಯವಿಟ್ಟು ಗಮನಿಸಿ; ಇಗೋ ನೋಡಿ: without obligation, mark you ದಾಕ್ಷಿಣ್ಯವಿಲ್ಲದೆ ದಯವಿಟ್ಟು ನೋಡಿ.