See also 2jump
1jump ಜಂಪ್‍
ನಾಮವಾಚಕ
  1. (ನೆಲದಿಂದ) ನೆಗೆತ; ಎಗುರು; ಹಾರಿಕೆ; ಚಿಮ್ಮುವಿಕೆ; ಕುಪ್ಪಳಿಕೆ; ಕುಪ್ಪಳ; ಲಂಘನ.
  2. ಬೆಚ್ಚಿ ಬೀಳುವುದು; ಹೌಹಾರುವುದು; ಚಕಿತಗೊಳ್ಳುವುದು; ಸಂಭ್ರಮ, ದುಗುಡ ಅಥವಾ ಆಘಾತದಿಂದ ಆಗುವ ಬೆಚ್ಚು.
  3. (ಮೊಬಲಗು, ಬೆಲೆ, ದರ, ಮೌಲ್ಯ, ಮೊದಲಾದವುಗಳ) ಥಟ್ಟನೆಯ ಏರಿಕೆ; ಹಠಾತ್‍ ಹೆಚ್ಚಳ; ಆಕಸ್ಮಿಕ ತೇಜಿ.
  4. ಏಕಾಏಕಿಯ ಬದಲಾವಣೆ; ಹಠಾತ್‍ ಪರಿವರ್ತನೆ.
  5. ಲಂಘನ; ಹಾರಿಕೆ; ನೆಗೆತ; ಅತಿಕ್ರಮಣ; ಸರಣಿ, ವಾದ, ಮೊದಲಾದವುಗಳಲ್ಲಿ ಅನುಕ್ರಮವಾಗಿ ಮುಂದುವರೆಯದೆ, ಇದ್ದಕ್ಕಿದ್ದಂತೆ ನಡುವಣ ಹಂತಗಳನ್ನು, ಘಟ್ಟಗಳನ್ನು ಅತಿಕ್ರಮಿಸಿ ಹಾರಿದ ಅಂತರ.
  6. (ಕುದುರೆ ಮೊದಲಾದವು) ಹಾರಬೇಕಾಗಿರುವ – ಅಡ್ಡಿ, ಅಡಚಣೆ.
  7. = jump bid.
  8. = ski-jump.
ಪದಗುಚ್ಛ

the jumps (ಅಶಿಷ್ಟ)

  1. (ಅತಿ ಕುಡಿತದಿಂದಾಗುವ) ಕಂಪನ ಸನ್ನಿ(ಪಾತ); ಎದೆ ನಡುಕ; ಹೃದಯಕಂಪನ.
  2. (ರೂಪಕವಾಗಿ) ಎದೆ ನಡುಕ; ಎದೆ ಡವಗುಟ್ಟುವುದು; ಹೃದಯಕಂಪನ; ಪ್ರಬಲಭೀತಿ: this place fairly gives me the jumps ಈ ಜಾಗ ನನಗೆ ಎದೆ ನಡುಕ ಹುಟ್ಟಿಸುತ್ತದೆ, ಬರಿಸುತ್ತದೆ.
ನುಡಿಗಟ್ಟು
  1. get the jump on (also, have the jump on) (ಅಶಿಷ್ಟ) (ಎದುರಾಳಿಯ ಹೂಟವನ್ನು ಮುನ್ನಿರೀಕ್ಷಿಸಿ ಅವನನ್ನು) ಮೀರಿಸುವ – ಅವಕಾಶ ಪಡೆ, ದೊರಕಿಸಿಕೊ.
  2. one jump ahead (ಎದುರಾಳಿಯ ಹೂಟ, ತಂತ್ರಗಳನ್ನು ಮುನ್ನಿರೀಕ್ಷಿಸಿ ಅವನಿಗಿಂತ ) ಒಂದು ಹೆಜ್ಜೆ ಮುಂದಾದ; ಒಂದು ದಾಟು ಮುಂದೆ ಹೋದ.
  3. on the jump (ಆಡುಮಾತು) ಸಡಗರದಿಂದ, ಸಂಭ್ರಮದಿಂದ – ಓಡಾಡುತ್ತಾ.