See also 2skin
1skin ಸ್ಕಿನ್‍
ನಾಮವಾಚಕ
  1. (ಮನುಷ್ಯ ಯಾ ಪ್ರಾಣಿಯ) ಚರ್ಮ; ತ್ವಚೆ; ತ್ವಕ್ಕು.
  2. (ಬಣ್ಣದ ದೃಷ್ಟಿಯಿಂದ ವ್ಯಕ್ತಿಯ ಯಾ ಪ್ರಾಣಿಯ) ಚರ್ಮ; ಮೈಬಣ್ಣ; ದೇಹವರ್ಣ: a fair skin ಒಳ್ಳೆಯ ಮೈಬಣ್ಣ; ಗೌರವರ್ಣ. a dark skin ಕಪ್ಪು ಮೈಬಣ್ಣ; ಶ್ಯಾಮಲ ವರ್ಣ.
  3. (ಅಂಗರಚನಾಶಾಸ್ತ್ರ) ಹೊರ ಯಾ ಒಳ ಚರ್ಮ.
  4. (ಮೃತ ಪ್ರಾಣಿಯ ಮೈಯಿಂದ ಎಡೆದ) ಚಕ್ಕಳ; ತೊಗಲು.
  5. (ಸಣ್ಣ ಪುಟ್ಟ ಪ್ರಾಣಿಗಳ) ಹದಮಾಡಿದ ಚರ್ಮ.
  6. (ಮದ್ಯ, ನೀರು, ಮೊದಲಾದವನ್ನು ತುಂಬಲು ಮಾಡಿದ, ಪ್ರಾಣಿಯ ಇಡೀ ಮೈಯ) ಚಕ್ಕಳದ ಚೀಲ; ಬಉದ್ದಲಿ; ಬಉದ್ದಲಿಗೆ.
  7. (ಗಿಡದ ಯಾ ಮರದ) ತೊಗಟೆ.
  8. (ಕಾಯಿ, ಹಣ್ಣು, ಮೊದಲಾದವುಗಳ) ಸಿಪ್ಪೆ.
  9. (ಸಾಸೇಜು, ಹೂರಣಗಡುಬಉ, ಕರಿಗಡುಬಉ, ಮೊದಲಾದವುಗಳ) ಹೊದಿಕೆ; ಹೊರಪದರ.
  10. (ದ್ರವ ಮೊದಲಾದವುಗಳ ಮೇಲಣ ತೆಳುವಾದ) ಪೊರೆ.
  11. (ಹಡಗಿನ ಯಾ ದೋಣಿಯ ಒಳಮೈ ಯಾ ಹೊರಮೈಗೆ ಹೊದ್ದಿಸಿದ) ಹಲಗೆಯ ಯಾ ತಗಡಿನ ಹೊದಿಕೆ.
  12. (ಯಾವುದೇ ವಾಹನದ ಮುಖ್ಯವಾಗಿ ವಿಮಾನದ ಯಾ ಆಕಾಶನೌಕೆಯ) ಹೊರಮೈ; ಹೊರಹೊದಿಕೆ.
  13. = gold-beater’s skin.
  14. (ನಕಲು ತೆಗೆಯುವಲ್ಲಿ ಬಳಸುವ) ಸ್ಟೆನ್ಸಿಲ್‍ನ ತೆಳುಕಾಗದ, ತೆಳುಹಾಳೆ.
  15. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) = skinhead.
  16. ಒಂದು ಬಗೆಯ ಅಮೆರಿಕನ್‍ ಇಸ್ಪೀಟಾಟ.
ಪದಗುಚ್ಛ
  1. change one’s skin:
    1. (ಹಾವು ಮೊದಲಾದವುಗಳ ವಿಷಯದಲ್ಲಿ) ಪೊರೆಯನ್ನು ಯಾ ಮೇಲ್ಚರ್ಮವನ್ನು ಬಿಸುಡು; ಪೊರೆ – ಬಿಡು, ಕಳಚು; ಚರ್ಮ ಬದಲಾಯಿಸಿಕೊ.
    2. (ಬದಲಾಯಿಸಲು ಅಸಾಧ್ಯವೆನಿಸುವ) ಸ್ವರೂಪ, ಸ್ವಭಾವ, ಮೊದಲಾದವನ್ನು ಬದಲಾಯಿಸು.
  2. (escape) by (or with) the skin of one’s teeth (ಕೂದಲೆಳೆಯಷ್ಟರಲ್ಲಿ) ತಪ್ಪಿಸಿಕೊ, ಪಾರಾಗು: the passengers escaped the accident by the skin of their teeth ಪ್ರಯಾಣಿಕರು ಕೂದಲೆಳೆಯಷ್ಟರಲ್ಲಿ ಆ ಅಪಘಾತವನ್ನು ತಪ್ಪಿಸಿಕೊಂಡರು, ಅಪಘಾತದಿಂದ ಪಾರಾದರು.
  3. get under a person’s skin (ಆಡುಮಾತು).
    1. (ಯಾವುದೇ ಅಭ್ಯಾಸ, ಚಟ, ಮೊದಲಾದವುಗಳ ವಿಷಯದಲ್ಲಿ) (ವ್ಯಕ್ತಿಯನ್ನು) ಬಿಗಿಯಾಗಿ ಹಿಡಿ; (ವ್ಯಕ್ತಿಯಲ್ಲಿ) ಸ್ಥಿರವಾಗಿ ಊರು; ಭದ್ರವಾಗಿ ನೆಲಸು.
    2. (ವ್ಯಕ್ತಿಯಲ್ಲಿ ತಡೆಯಲಾಗದ) ಆಸಕ್ತಿಯನ್ನು, ಮೋಹವನ್ನು – ಹುಟ್ಟಿಸು.
    3. (ವ್ಯಕ್ತಿಗೆ) ಬಲವಾಗಿ ಸಿಟ್ಟು ಬರಿಸು.
  4. jump out of one’s skin (ಆಶ್ಚರ್ಯ, ಆನಂದ, ಮೊದಲಾದವುಗಳಿಂದ) ಬೆಚ್ಚಿ ಬೀಳು; ಹೌಹಾರು; ಚಕಿತನಾಗು.
  5. outer skin ಹೊರ ಚರ್ಮ.
  6. save one’s skin
    1. ನಷ್ಟ, ಅವಮಾನ, ಹಾನಿ, ಮೊದಲಾದವುಗಳಿಂದ – ತಪ್ಪಿಸಿಕೊ, ಪಾರು ಮಾಡಿಕೊ.
    2. ಪ್ರಾಣ, ಮಾನ, ಧನ, ಮೊದಲಾದವನ್ನು – ಕಾಪಾಡಿಕೊ, ರಕ್ಷಿಸಿಕೊ, ಉಳಿಸಿಕೊ.
  7. skin and bone ಬರಿಯ ಮೂಳೆ ಚಕ್ಕಳ; ಬಡಕಲ ವ್ಯಕ್ತಿ; ಶುದ್ಧ ನರಪೇತಲ: after his illness he has become mere skin and bone ಕಾಯಿಲೆ ಬಿದ್ದ ಮೇಲೆ ಅವನು ಬರಿಯ ಮೂಳೆ ಚಕ್ಕಳವಾಗಿ ಹೋಗಿದ್ದಾನೆ.
  8. the skin off your nose (or back, or teeth) (ಆಡುಮಾತು) (ಸ್ವಸ್ತಿಪಾನ ಮಾಡುವಾಗ ಶುಭಾಶಯ ಕೋರಲು ಬಳಸುವ ಉಕ್ತಿ) (ಯಾವುದೇ ವಿಷಯದಲ್ಲಿ)
    1. ನಿಮಗೆ ಚಿಂತೆ, ಕಳವಳ, ಹಾನಿ ಇಲ್ಲದಿರಲಿ.
    2. ಅನುಕೂಲ, ಲಾಭ ಸಿಗಲಿ.
  9. no skin off one’s back, nose, or teeth (ಆಡುಮಾತು)
    1. ಅನಾದರಣೆಯ, ಉಪೇಯ ವಿಷಯ.
    2. ಲಾಭದಾಯಕ ವಿಷಯ.
  10. thick skin (ತನ್ನನ್ನು ಕುರಿತ ತೀಕ್ಷ ವಾದ ಟೀಕೆ, ಅಪಮಾನ, ಮೊದಲಾದವನ್ನು ಲೆಕ್ಕಿಸದ) ಎಮ್ಮೆ ಚರ್ಮ; ದಪ್ಪ ಚರ್ಮ; ಜಡ್ಡು ಸ್ವಭಾವ.
  11. thin skin (ತನ್ನನ್ನು ಕುರಿತ ಕಟು ಟೀಕೆ, ಅಪಮಾನ, ಮೊದಲಾದವುಗಳಿಂದ ಬೇಗ ಮತ್ತು ತೀವ್ರವಾಗಿ ಮನನೋಯುವ) ಅತಿ ಸೂಕ್ಷ್ಮ- ಪ್ರಕೃತಿ, ಸ್ವಭಾವ.
  12. to the skin ಚರ್ಮದವರೆಗೂ (ಮುಟ್ಟುವಂತೆ); ದೇಹ ಪೂರ್ತಿ: wet to the skin ದೇಹವೆಲ್ಲ ಒದ್ದೆಯಾಗಿ; (ಬಟ್ಟೆಯೆಲ್ಲ ತೊಯ್ದು ಹೋಗಿ) ಚರ್ಮದವರೆಗೂ ಒದ್ದೆಯಾಗಿ.
  13. true (or inner) skin ಒಳಚರ್ಮ; ನಿಜಚರ್ಮ.
  14. with a whole skin ಸ್ವಲ್ಪವೂ ಗಾಯವಾಗದೆ, ಗಾಸಿಗೊಳ್ಳದೆ; ಚರ್ಮ ಕೂಡ ತರಚದೆ.