See also 2-er  3-er  4-er  5-er
1-er -ಅರ್‍
ಉತ್ತರಪ್ರತ್ಯಯ

ನಾಮವಾಚಕಗಳಿಂದ, ಗುಣವಾಚಕಗಳಿಂದ ಯಾ ಕ್ರಿಯಾಪದಗಳಿಂದ ಹುಟ್ಟುವ ಕರ್ತ್ರರ್ಥಕ ನಾಮಪದಗಳ ತುದಿಯಲ್ಲಿ ಸೇರುವ ಉತ್ತರಪ್ರತ್ಯಯ:

  1. ಒಂದು ಕೆಲಸ ಮಾಡುವ ಮನುಷ್ಯ ಯಾ ಪ್ರಾಣಿ ಎಂಬ ಅರ್ಥದ ನಾಮವಾಚಕಗಳಲ್ಲಿ: maker, player, reporter, teacher.
  2. ಉಪಕರಣ, ಯಂತ್ರ, ಘಟನೆ, ಕ್ರಿಯೆ, ಮೊದಲಾದ ಅರ್ಥದ ನಾಮವಾಚಕಗಳಲ್ಲಿ: poker, paper-cutter, deodorizer, eye-opener.
  3. ಒಂದು ವಸ್ತುವಿಗೆ ಯಾ ವಿಷಯಕ್ಕೆ ಸಂಬಂಧಪಟ್ಟವನು ಎಂಬ ಅರ್ಥದ ನಾಮವಾಚಕಗಳಲ್ಲಿ: hatter, geographer, grocer.
  4. ಸ್ಥಳ ಮೊದಲಾದವುಗಳಿಗೆ ಸೇರಿದವನು ಎಂಬ ಅರ್ಥದ ನಾಮವಾಚಕಗಳಲ್ಲಿ: villager, Londoner, Britisher.
  5. ಬೇರೆ ರೀತಿಯಲ್ಲಿ ಕೊನೆಗೊಳ್ಳುವ ಪದಗಳ ಅಶಿಷ್ಟವಾದ ಅಪಭ್ರಂಶ ರೂಪಗಳಲ್ಲಿ: rugger, soccer, footer.
  6. ವಿಶಿಷ್ಟ ಗುಣದ ಯಾ ಸಂದರ್ಭದ ವ್ಯಕ್ತಿ ಯಾ ವಸ್ತು ಎಂಬುದನ್ನು ಸೂಚಿಸುವ ನಾಮವಾಚಕಗಳಲ್ಲಿ: sixfooter, teetotaller, fiver, tenner.