See also 1hook
2hook ಹುಕ್‍
ಸಕರ್ಮಕ ಕ್ರಿಯಾಪದ
  1. ಕೊಕ್ಕೆಯಿಂದ ಹಿಡಿ.
  2. (ಕೊಕ್ಕೆಯಿಂದ ಯಾ ಕೊಕ್ಕೆಗಳಿಂದ) ಕೂಡಿಸು; ಬಂಧಿಸು; ಬಿಗಿಸು; ಸಿಕ್ಕಿಸು; ಸೇರಿಸು.
  3. (ಅಶಿಷ್ಟ) ಕದಿ.
  4. ಗಾಳ ಹಾಕು; ಗಾಳ ಹಾಕಿ (ಮೀನು) ಹಿಡಿ (ರೂಪಕವಾಗಿ ಸಹ).
  5. (ರೂಪಕವಾಗಿ) (ಮುಖ್ಯವಾಗಿ ಒಬ್ಬನನ್ನು ಗಂಡನಾಗುವಂತೆ) ಗಾಳಹಾಕಿ ಹಿಡಿ.
  6. ಹುಕ್‍ ಮಾಡು; ಕೊಕ್ಕೆ ಹೊಡೆತ ಹೊಡೆ:
    1. (ಗಾಲ್‍ಹ್‍) ಚೆಂಡನ್ನು ಹೊಡೆಯುವವನ ಕಡೆಗೆ ತಿರುಗುವಂತೆ ಬೀಸಿ ಹೊಡಿ ( ಅಕರ್ಮಕ ಕ್ರಿಯಾಪದ ಸಹ).
    2. (ಕ್ರಿಕೆಟ್‍) ಚೆಂಡನ್ನು ‘ಆಹ್‍ಸೈಡ್‍’ನಿಂದ ‘ಆನ್‍ಸೈಡ್‍ಗೆ’ ತಿರುಗಿಸಿ ಹೊಡೆ.
    3. (ರಗ್ಬಿ ಕಾಲ್ಚೆಂಡಾಟ) ಮುಂಚೂಣಿಯ ಆಟಗಾರರ ನಡುವೆ ಚೆಂಡು ಸಿಕ್ಕಿಬಿದ್ದಾಗ ಅದನ್ನು ವಶಪಡಿಸಿಕೊಂಡು ಕಾಲಿನಿಂದ ಹಿಂದಕ್ಕೆ ‘ಪಾಸ್‍’ ಮಾಡು, ಹಿಂದಿರುವ ಆಟಗಾರನಿಗೆ ಕಳುಹಿಸು.
    4. (ಮುಷ್ಟಿ ಕಾಳಗದಲ್ಲಿ) ಎದುರಾಳಿಯನ್ನು ಮೊಣಕೈ ಬಾಗಿಸಿದ ಮುಷ್ಟಿಯಿಂದ ಹೊಡೆ.
ನುಡಿಗಟ್ಟು
  1. be hooked (on) (ಅಶಿಷ್ಟ):
    1. ಚಟಕ್ಕೆ ಸಿಕ್ಕಿರು.
    2. ಮೋಹಕ್ಕೆ ಬಿದ್ದಿರು; ವಶವಾಗಿರು; ಆಕರ್ಷಣೆಗೆ ಸಿಕ್ಕಿರು.
  2. hook on.
  3. hook up ಕೊಕ್ಕೆಯಿಂದ ಯಾ ಅದರಿಂದ ಮಾಡಿದಂತೆ – ಸೇರಿಸು, ತಗುಲಿಸು, ಸಿಕ್ಕಿಸು.