See also 1deal  3deal
2deal ಡೀಲ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ dealt ಉಚ್ಚಾರಣೆ ಡೆಲ್ಟ್‍)

ಸಕರ್ಮಕ ಕ್ರಿಯಾಪದ
  1. (ದಾನ, ಬಹುಮಾನ, ಮೊದಲಾದವನ್ನು) ನೀಡು; ಕೊಡು; ಹಂಚು; ವಿತರಿಸು; ವಿತರಣೆ ಮಾಡು.
  2. (ಮುಖ್ಯವಾಗಿ ದೇವರು ಮೊದಲಾದವರ ವಿಷಯದಲ್ಲಿ) (ಸಲ್ಲಬೇಕಾದುದನ್ನು) ಕೊಡು; ನೀಡು; ಅನುಗ್ರಹಿಸು: dealt him happiness ದೈವ ಅವನಿಗೆ ಭಾಗ್ಯ ನೀಡಿತು.
  3. ಕೊಡು; ನೀಡು: deal a blow (at)
    1. ಹೊಡೆ; ಏಟು ಕೊಡು; ಏಟು ಹಾಕು.
    2. (ರೂಪಕವಾಗಿ) ನೋಯಿಸು; ವ್ಯಥೆ ಉಂಟುಮಾಡು; ಕೆಡುಕುಮಾಡು: the news dealt me a great blow ಸುದ್ದಿ ನನ್ನನ್ನು ಬಹಳ ನೋಯಿಸಿತು.
  4. (ಇಸ್ಪೀಟು ಎಲೆಗಳನ್ನು) ಹಾಕು; ಹಂಚು.
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ನಿಷೇಧಾರ್ಥ ಪದಗಳ ಸಂಗಡ) ಜೊತೆ ಸೇರು; ಒಡಗೂಡು; ಸಂಬಂಧವಿರಿಸಿಕೊ; ವ್ಯವಹರಿಸು; ಸಂಪರ್ಕವಿಟ್ಟುಕೊ: I refuse to deal with him ಅವನೊಂದಿಗೆ ನನಗೆ ವ್ಯವಹಾರ ಯಾ ಸಂಬಂಧ ಬೇಡವೇ ಬೇಡ.
  2. (ರೂಪಕವಾಗಿ ಸಹ) (ವ್ಯಕ್ತಿಯೊಡನೆ ಸರಕುಗಳ) ವ್ಯಾಪಾರ ಮಾಡು: ವ್ಯಾಪಾರ ನಡೆಸು; ವ್ಯವಹರಿಸು: deal with a firm ವ್ಯಾಪಾರಸಂಸ್ಥೆಯೊಂದಿಗೆ ವ್ಯವಹರಿಸು.
  3. ತೊಡಗಿರು; ಕುರಿತಿರು; ಸಂಬಂಧಿಸಿರು; ಒಳಗೊಂಡಿರು; ಉದ್ಯುಕ್ತನಾಗು: the book deals with all aspects of the subject ಈ ಪುಸ್ತಕ ವಿಷಯದ ಎಲ್ಲ ಅಂಶಗಳನ್ನು ಕುರಿತದ್ದಾಗಿದೆ.
  4. (ಯಾವುದೇ ವಿಷಯವನ್ನು ಖಂಡಿಸಲು ಯಾ ಚರ್ಚಿಸಲು) ತೆಗೆದುಕೊ; ಎತ್ತಿಕೊ.
  5. (ಮುಖ್ಯವಾಗಿ ತಿದ್ದುವ ಯಾ ಶಿಕ್ಷಿಸುವ) ಕ್ರಮ – ತೆಗೆದುಕೊ, ಕೈಗೊಳ್ಳು, ಜರಗಿಸು, ನಡೆಸು: lawcourts deal with law-breakers ನ್ಯಾಯಾಲಯಗಳು ಕಾನೂನು ಮುರಿದವರ ಮೇಲೆ ಕ್ರಮ ಜರುಗಿಸುತ್ತವೆ.
  6. ನಡೆದುಕೊ; ವ್ಯವಹರಿಸು; ವರ್ತಿಸು: deal honourably with him ಅವನೊಂದಿಗೆ ಗೌರವದಿಂದ ನಡೆದುಕೊ.
  7. (ಇಸ್ಪೀಟು) ಎಲೆ ಹಾಕು; ಎಲೆ ಹಂಚು.
ಪದಗುಚ್ಛ
  1. deal in
    1. (ಸಾಮಾನನ್ನು) ದಾಸ್ತಾನು ಮಾಡು; ದಾಸ್ತಾನಿಡು: ಸಂಗ್ರಹಿಸಿಟ್ಟಿರು.
    2. ಮಾರು; ಮಾರಾಟ ಮಾಡು.
  2. deal with
    1. ವ್ಯವಹರಿಸು; ವ್ಯಾಪಾರ ನಡೆಸು; ವ್ಯಾಪಾರಸಂಬಂಧ ಹೊಂದಿರು.
    2. ವ್ಯವಹರಿಸು; ಸಂಬಂಧ ಹೊಂದಿರು: he is easy, difficult, impossible to deal with ಅವನೊಡನೆ ವ್ಯವಹರಿಸುವುದು ಸುಲಭ, ಕಷ್ಟ, ಅಸಾಧ್ಯ.
    3. ನಡೆದುಕೊ; ವರ್ತಿಸು; ವ್ಯವಹರಿಸು: deal honourably with (or by) ಗೌರವದಿಂದ ಕಾಣು, ನಡೆದುಕೊ. deal with children ಮಕ್ಕಳೊಡನೆ ವ್ಯವಹರಿಸು; ಮಕ್ಕಳು ಉತ್ತಮರಾಗಿ ಬೆಳೆಯುವಂತೆ ಮಾಡು.
    4. (ವ್ಯವಹಾರಗಳ ವಿಷಯದಲ್ಲಿ) ನಿರ್ವಹಿಸು; ಮಾಡು; ನಡೆಸು; ನಿಭಾಯಿಸು: deal with the situation ಪರಿಸ್ಥಿತಿಯನ್ನು ನಿರ್ವಹಿಸು. deal with the problem ಸಮಸ್ಯೆಯನ್ನು ಬಗೆಹರಿಸು.
    5. ಕುರಿತಿರು; ವಿಷಯವಾಗಿರು: this book deals with India ಈ ಗ್ರಂಥ ಭಾರತವನ್ನು ಕುರಿತಿದೆ.