1deal
ಡೀಲ್
ನಾಮವಾಚಕ
- (ಯಾವುದೇ ಹೆಚ್ಚಾದ) ಮೊತ್ತ; ಅಳವು; ಮಟ್ಟ; ಪ್ರಮಾಣ; ಪರಿಮಾಣ: a good deal of work ತುಂಬ ಕೆಲಸ. a great deal of money ಭಾರೀ ಮೊತ್ತದ ಹಣ; ಅಪಾರ ಹಣ.
- ಹಂಚಿಕೆ; ವಿತರಣೆ; ಹಂಚುವಿಕೆ; ಪಾಲು ಮಾಡುವಿಕೆ.
- (ಇಸ್ಪೀಟು)
- (ಆಟಗಾರರಿಗೆ) ಎಲೆಗಳ ಹಂಚಿಕೆ.
- (ಹಂಚಿದ) ಎಳೆಗಳು; ಕೈಎಲೆಗಳು.
- (ಆಟಗಾರನ) ಹಂಚಿಕೆ ಸರದಿ.
- ಒಂದು ಸುತ್ತು ಇಳಿತದ ಕಾಲ.
- (ಆಟದ) ಒಂದು – ಸುತ್ತು, ವರಿಸೆ, ಸೂಳು.
- (ಆಡುಮಾತು) (ಮುಖ್ಯವಾಗಿ ಪರಸ್ಪರ ಪ್ರಯೋಜನಕ್ಕಾಗಿ ಮಾಡಿಕೊಂಡ) ಗುಟ್ಟಿನ ಒಪ್ಪಂದ; ಗುಪ್ತ ಕರಾರು; ರಹಸ್ಯವಾದ ಯಾ ನ್ಯಾಯವಾಗಿರದ ವ್ಯಾಪಾರ.
- (ಆಡುಮಾತು) (ವ್ಯವಹಾರದಲ್ಲಿ) ನಡೆವಳಿಕೆ; ರೀತಿನೀತಿ; ವರ್ತನೆ.
ಪದಗುಚ್ಛ
- a deal (ಆಡುಮಾತು) = ಪದಗುಚ್ಛ \((2)\).
- a good deal ದೊಡ್ಡ ಪ್ರಮಾಣ; ಭಾರಿ ಮೊತ್ತ.
- a great deal = ಪದಗುಚ್ಛ \((2)\).
- new deal
- ಹೊಸ ನೀತಿ; ನ್ಯಾಯವೆಂದು ಭಾವಿಸಿದ ಯಾವುದೇ ಹೊಸ ಯೋಜನೆ.
- (New Deal) (ಅಮೆರಿಕನ್ ಪ್ರಯೋಗ) ನ್ಯೂ ಡೀಲ್(ನೀತಿ); 1932ರಲ್ಲಿ ಹ್ರ್ಯಾಂಕ್ಲಿನ್ ರೂಸ್ವೆಲ್ಟ್ ಯೋಜಿಸಿದ ಆರ್ಥಿಕ ಹಾಗೂ ಸಾಮಾಜಿಕ ಸುಧಾರಣಾ ಕಾರ್ಯಕ್ರಮ.
ನುಡಿಗಟ್ಟು
- fair(or square)deal ನ್ಯಾಯವಾದ ನಡವಳಿಕೆ.
- it’s a deal (ಆಡುಮಾತು) ನಿನ್ನ ಕರಾರಿಗೆ ಒಪ್ಪಿದ್ದೇನೆ; ನಿನ್ನ ಷರತ್ತು ನನಗೆ ಸಮ್ಮತ.
- raw (or rough) deal ಒರಟಾದ ಯಾ ಅನ್ಯಾಯದ ವರ್ತನೆ ಯಾ ನಡವಳಿಕೆ.