See also 2come
1come ಕಮ್‍
ಅಕರ್ಮಕ ಕ್ರಿಯಾಪದ(ಭೂತರೂಪ ಎಚಮೆ
ಉಚ್ಚಾರಣೆ ಕೇಮ್‍, ಭೂತಕೃದಂತ come)
  1. (ನಿರ್ದಿಷ್ಟವಾಗಿ ಯಾ ಸ್ಪಷ್ಟವಾಗಿ ತಿಳಿದ ಸ್ಥಳ, ಕಾಲ ಯಾ ಸ್ಥಿತಿಗೆ) ಬಾ; ಬರು; ಹೊರಟು ಬಾ; ಬಂದು ಮುಟ್ಟು; ತಲುಪು; ಸೇರು.
  2. ಬರು; ತರಲಾಗು; ತರಲ್ಪಡು; the dinner came ಊಟ ಬಂದಿತು.
  3. ಸಿಗು; ಸಿಕ್ಕು; ದೊರೆ: this dress comes in three sizes ಈ ಉಡುಪು ಮೂರು ಸೈಜುಗಳಲ್ಲಿ ಸಿಕ್ಕುತ್ತದೆ.
  4. ಗೋಚರಿಸು; ಗೋಚರವಾಗು; ಕಣ್ಣಿಗೆ ಕಾಣು; ದೃಷ್ಟಿಗೆ ಬೀಳು; ಎದುರಾಗು; ಕಾಣಬರು: comes into sight ಕಣ್ಣಿಗೆ ಬೀಳುತ್ತದೆ.
  5. ಮನಸ್ಸಿಗೆ ತೋರು; ಅರಿವಿಗೆ ಬರು: come to one’s knowledge ಅರಿವಿಗೆ, ತಿಳಿವಳಿಕೆಗೆ–ಬರು.
  6. (ನಿರ್ದಿಷ್ಟ ಸ್ಥಳ ಯಾ ಎಲ್ಲೆಯವರೆಗೆ) ತಲುಪು; ಮುಟ್ಟು; ಬರು: motorway comes within ten miles of us ಮೋಟಾರುಹಾದಿ ನಮ್ಮ ಸ್ಥಳದಿಂದ ಹತ್ತು ಮೈಲಿಗೂ ಹತ್ತಿರ ಬರುತ್ತದೆ.
  7. ಬರು; ಒಂದು ಸ್ಥಳದಲ್ಲಿ ಇರು; ಒಂದು ನಿರ್ದಿಷ್ಟ ಜಾಗವನ್ನು ಆಕ್ರಮಿಸು: this line comes on page 20 ಈ ಪಂಕ್ತಿ 20ನೆ ಪುಟದಲ್ಲಿ ಬರುತ್ತದೆ. comes within the scope of the inquiry ತನಿಖೆಯ ವ್ಯಾಪ್ತಿಯಲ್ಲಿ ಇರುತ್ತದೆ.
  8. ಆಗು; ಸಂಭವಿಸು; ಉಂಟಾಗು; ಒದಗು; ಪಾಲಿಗೆ ಬರು: how comes it that he failed ಅವನು ಫೇಲಾದದ್ದು ಹೇಗೆ? ill luck comes to me ದುರದೃಷ್ಟ ನನ್ನದು. the work comes to me ಆ ಕೆಲಸ ನನ್ನ ಪಾಲಿನದು.
  9. ಇಂದೇ–ಆಗು, ನೆರವೇರು, ನಡೆ; ಮುಂದೆ ಸಂಭವಿಸುವ ಬದಲು ಇಂದೇ ಆಗು.
  10. ಫಲಿಸು; ಫಲವಾಗು; ಪರಿಣಾಮವಾಗಿರು: that’s what comes of grumbling ಗೊಣಗಾಟದ ಫಲ ಅದು. nothing came of it ಅದರಿಂದ ಏನೂ ಫಲಿಸಲಿಲ್ಲ.
  11. ಹುಟ್ಟು ಜನಿಸು; ಮೂಡು; ಹುಟ್ಟಿರು; ಜನಿಸಿರು; ಒಡಮೂಡಿರು; ಸಂಜಾತವಗಿರು: come of noble parents ದೊಡ್ಡವರ ಹೊಟ್ಟೆಯಲ್ಲಿ ಹುಟ್ಟು; ಶ್ರೇಷ್ಠ ತಂದೆತಾಯಿಯರಿಂದ ಜನಿಸು.
  12. (ಘರ್ಷಣೆ, ವಿರೋಧ, ತೊಂದರೆ, ಕಾರ್ಯ, ಪ್ರಾಮುಖ್ಯ ಮೊದಲಾದವಕ್ಕೆ) ಬರು; ಈಡಾಗು; ಪಕ್ಕಾಗು; ಸಿಕ್ಕಿಕೊ; ಒಳಗಾಗು; ತೊಡಗು: come to harm ತೊಂದರೆಗೆ ಈಡಾಗು.
  13. ಒಟ್ಟು ಅಷ್ಟಾಗು; ಮೊತ್ತವಾಗು; ಸೇರಿ ಆಗು: the total comes to Rs.20/- ಎಲ್ಲ ಸೇರಿ 20 ರೂಪಾಯಿಗಳಾಗುತ್ತವೆ. all these arguments come to no more than a single point ಈ ಎಲ್ಲ ವಾದಗಳೂ ಒಟ್ಟಿನಲ್ಲಿ ಒಂದೇ ಒಂದು ಅಂಶವಾಗುತ್ತವೆ. on the whole it comes to this ಒಟ್ಟಿನಲ್ಲಿ ಅದು ಇಷ್ಟಾಗುತ್ತದೆ; ಅದರ ಪರಿಣಾಮ, ಸಾರಾಂಶ–ಇಷ್ಟು.
  14. (ಸಮಾನಾರ್ಥಕ ಕರ್ಮಪದದೊಡನೆ) ನಡೆ; ಸಾಗು; ಪ್ರಯಾಣ ಮಾಡು; ಕ್ರಮಿಸು: have come 3 miles ಮೂರು ಮೈಲಿ ನಡೆದು ಬಂದಿದ್ದೇನೆ.
  15. (ಒಂದು ಸ್ಥಳದ) ನಿವಾಸಿಯಾಗಿರು: she comes from Mysore ಅವಳು ಮೈಸೂರಿನವಳು; ಅವಳ ಸ್ಥಳ ಮೈಸೂರು.
  16. (ಅಶಿಷ್ಟ) ಪಾತ್ರವಾಡು; ನಡೆದುಕೊ; ವರ್ತಿಸು: comes the bully over the subordinates ಕೈಕೆಳಗಿನವರ ಮೇಲೆ ದಬ್ಬಾಳಿಕೆ ನಡೆಸುತ್ತಾನೆ.
  17. (ವಿಧಿ ರೂಪದಲ್ಲಿ, ಉದ್ಗಾರಾರ್ಥವಾಗಿ)
    1. (ಉತ್ತೇಜನ ನೀಡಲು ಹೇಳುವ) ಎಲ್ಲಿ ಈಗ: come, come, that’s right, go on ಎಲ್ಲಿ ಈಗ, ಅದು ಸರಿಯಾಗಿದೆ, ಮುಂದುವರಿ.
    2. ಸರಿಯಾಗಿ ಯೋಚಿಸು; ಇನ್ನೊಮ್ಮೆ ಯೋಚಿಸು; ದುಡುಕ ಬೇಡ: come, come that won’t do, speak again ನೋಡು, ನೋಡು, ಅದು ಸರಿಯಲ್ಲ, ಯೋಚಿಸಿ ಹೇಳು.
  18. (ಸಭ್ಯವಲ್ಲದ ಪ್ರಯೋಗ) (ಸಂಭೋಗದಲ್ಲಿ) ಪರಾಕಾಷ್ಠೆ ತಲುಪು.
ಪದಗುಚ್ಛ
  1. come what may ಏನೇ ಬರಲಿ; ಏನೇ–ಆಗಲಿ, ಸಂಭವಿಸಲಿ.
  2. easy come easy go ಸಲೀಸಾಗಿ ಬಂದದ್ದು ಸಲೀಸಾಗಿಯೇ ಹೋಗುತ್ತದೆ; ಸುಲಭವಾಗಿ ದಕ್ಕಿದ್ದು ಸುಲಭವಾಗಿಯೇ ಹೋಗುತ್ತದೆ.
  3. let ’em all come! (ಅಶಿಷ್ಟ) (ಜಗಳದಲ್ಲಿ, ಸವಾಲಾಗಿ) ಎಲ್ಲರೂ ಬರಲಿ, ನೋಡಿಕೊಳ್ಳುತ್ತೇನೆ.
  4. light come light go = ಪದಗುಚ್ಛ \((2)\).
  5. not know whether one is coming or going ಏನಾಗುತ್ತಿದೆ ಎಂಬುದೇ ತಿಳಿಯದಿರು, ಗೊತ್ತಾಗದಿರು; ಗೊಂದಲಕ್ಕೀಡಾಗು; ದಿಕ್ಕು ತೋರದಂತಾಗು.
  6. how come? (ಆಡುಮಾತು) ಅದು ಹೇಗೆ ಆಯಿತು, ಸಂಭವಿಸಿತು?
  7. to come (ಆಗು) ಬರುವ; ಮುಂದಿನ; ಭವಿಷ್ಯದ: for a year to come ಇನ್ನೊಂದು ವರ್ಷ ಕಾಲ; ಮುಂದಿನ ಒಂದು ವರ್ಷ ಕಾಲ.
ನುಡಿಗಟ್ಟು
  1. as (tough etc.) as they come ತೀರ, ಅತ್ಯಂತ (ಕಠಿನ ಮೊದಲಾದವು) ಆಗಿ.
  2. come about (ಯಾವುದೇ ಘಟನೆಯ ವಿಷಯದಲ್ಲಿ) ಆಗು; ನಡೆ; ಸಂಭವಿಸು.
  3. come across
    1. (ವ್ಯಕ್ತಿ ಯಾ ವಸ್ತುವನ್ನು) ಆಕಸ್ಮಿಕವಾಗಿ ಸಂಧಿಸು, ಕಾಣು.
    2. (ಅಶಿಷ್ಟ) (ಹಣ ಮೊದಲಾದವನ್ನು) ಕೊಟ್ಟುಬಿಡು; ತೆತ್ತುಬಿಡು.
    3. ಗುರುತಿಸಲ್ಪಡು; ಕಣ್ಣಿಗೆ ಬೀಳು; ಗಮನಕ್ಕೆ ಬರು; ಗೋಚರವಾಗು.
    4. (ಅಶಿಷ್ಟ) ಪರಿಣಾಮಕಾರಿಯಾಗಿರು; ಪ್ರಭಾವಕಾರಿಯಾಗಿರು.
  4. come again.
  5. come along
    1. ಮುಂದಕ್ಕೆ ನಡೆ, ಚಲಿಸು, ಕಾಲು ಹಾಕು, ಹೆಜ್ಜೆ ಹಾಕು.
    2. ಬಂದು ಸೇರು; ತಲುಪು; ಆಗಮಿಸು.
    3. (ಆಡುಮಾತು) (ನಿಧಾನ ಮಾಡುತ್ತಿರುವವನನ್ನು ಕುರಿತು ಹೇಳುವಾಗ) ಜಾಗ್ರತೆ (ಮಾಡು); ಬೇಗ (ಮಾಡು); ತ್ವರೆ ಮಾಡು.
  6. come and go
    1. ಹೋಗಿಬರು; (ಒಂದೆಡೆ ನಿಲ್ಲದೆ) ಹೋಗಿಬರುತ್ತಿರು; ಅಲ್ಲಿಂದಿಲ್ಲಿಗೆ ಓಡಾಡುತ್ತಿರು.
    2. ಕಿರುಭೇಟಿ(ಗಳನ್ನು) ನೀಡುತ್ತಿರು; ಸ್ವಲ್ಪಕಾಲದ ಭೇಟಿ ನೀಡುತ್ತಿರು.
    3. ಸ್ಥಿರವಲ್ಲದಿರು; ಕ್ಷಣಿಕವಾಗಿರು; ಅಲ್ಪಕಾಲಿಕವಾಗಿರು.
  7. come apart ಚೂರುಚೂರಾಗು.
  8. come at
    1. (ಯಾವುದೇ ವಸ್ತು, ಸ್ಥಾನ, ಪುಟ, ಸಾಲು ಮೊದಲಾದವನ್ನು) ಮುಟ್ಟು; ತಲುಪು: at last I came at the page I wanted ಕಟ್ಟ ಕಡೆಗೆ ನನಗೆ ಬೇಕಾಗಿದ್ದ–ಪುಟವನ್ನು ತಲುಪಿದೆ, ಪುಟ ಸಿಕ್ಕಿತು.
    2. (ಯಾವುದೇ ವ್ಯಕ್ತಿಯ ಮೇಲೆ) ಎರಗು; ಮೇಲೆ ಬೀಳು: the ill tempered fellow came at everyone he saw ಆ ಸಿಡುಕ ಕಂಡಕಂಡವರ ಮೇಲೆಲ್ಲಾ ಎರಗಿ ಬೀಳುತ್ತಿದ್ದ.
    3. ಪಡೆ; ಹೊಂದು.
  9. come away
    1. ಕಳಚಿಕೊಂಡು, ಕಿತ್ತುಕೊಂಡು–ಬರು; ಬೇರ್ಪಟ್ಟು ಬರು: the nail came away from the wall ಮೊಳೆ ಗೋಡೆಯಿಂದ ಕಿತ್ತುಕೊಂಡು ಬಂದಿತು.
    2. (ಪರಿಣಾಮ, ಭಾವನೆ, ಅಭಿಪ್ರಾಯ, ಮೊದಲಾದವುಗಳಿಂದ) ಕೂಡಿ ಉಳಿ.
  10. come back
    1. (ಚಾಲ್ತಿಗೆ, ಬಳಕೆಗೆ, ರೂಢಿಗೆ, ಸ್ಥಳಕ್ಕೆ, ವಿಷಯಕ್ಕೆ) ಪುನಃ, ಮತ್ತೆ, ತಿರುಗಿ, ವಾಪಸು–ಬರು: the old fashion has come back ಹಳೆಯ ಹ್ಯಾಷನ್‍ ಈಗ ತಿರುಗಿ ಬಂದಿದೆ.
    2. ನೆನಪಿಗೆ ಬರು; ಜ್ಞಾಪಕಕ್ಕೆ ಬರು: when I racked my brain the stanza came back to me ತಲೆ ಕೆರೆದುಕೊಂಡ ಮೇಲೆ ಆ ಪದ್ಯ ನನ್ನ ನೆನಪಿಗೆ ಬಂದಿತು.
    3. (ಅಮೆರಿಕನ್‍ ಪ್ರಯೋಗ) ಪ್ರತ್ಯುತ್ತರ ನೀಡು; ಎದುರಾಡು; ಎದುರುನುಡಿ; ಪ್ರತಿಹೇಳು: come back with a witty remark ಚತುರೋಕ್ತಿಯಿಂದ ಪ್ರತ್ಯುತ್ತರ ಕೊಡು.
  11. come before
    1. (ನ್ಯಾಯಾಧೀಶ ಮೊದಲಾದ ಅಧಿಕಾರಿಯ ಮುಂದೆ) ಪರಿಶೀಲನೆಗಾಗಿ, ತನಿಖೆಗಾಗಿ ಯಾ ವಿಚಾರಣೆಗಾಗಿ–ಬರು.
    2. ಮುಂಚೆ, ಮೊದಲು–ಬರು; ಆದ್ಯತೆ ಹೊಂದು.
  12. come between (ವ್ಯಕ್ತಿಗೂ ವ್ಯಕ್ತಿಗೂ, ಯಾ ವ್ಯಕ್ತಿಗೂ ಅವನ ಕೆಲಸ ಕಾರ್ಯಗಳಿಗೂ) ನಡುವೆ ಅಡ್ಡಿಯಾಗಿ ಬರು; ತಡೆಯಾಗು.
  13. come by
    1. (ಪಕ್ಕದಲ್ಲಿ) ಬರು; ಹಾದುಹೋಗು.
    2. ಪಡೆ; ಹೊಂದು; ಗಳಿಸು; ಸಂಪಾದಿಸು: by dint of effort he came by this property ಕಠಿಣಪ್ರಯತ್ನದ ಫಲವಾಗಿ ಅವನು ಈ ಆಸ್ತಿಯನ್ನು ಪಡೆದುಕೊಂಡ.
    3. ಆಕಸ್ಮಿಕವಾಗಿ ಸಿಕ್ಕು, ದೊರೆ: how did you come by the purse? ಆ ಪರ್ಸು ನಿನಗೆ ಹೇಗೆ ಸಿಕ್ಕಿತು?
    4. ಆಕಸ್ಮಿಕವಾಗಿ–ಆಗು, ಸಂಭವಿಸು: he came by the injury through a fall ಅವನು ಬಿದ್ದುದರಿಂದ ಈ ಗಾಯ ಆಯಿತು.
  14. come clean (with) (ಗುಟ್ಟು ಮೊದಲಾದವನ್ನು) ಮರೆ ಮಾಚದೆ ಹೊರಗೆಡವು; ತಪ್ಪು, ತಪ್ಪಿತ ಯಾ ಪಾಪವನ್ನು ಪೂರ್ತಿ ಒಪ್ಪಿಕೊ: come clean with your secret ನಿನ್ನ ಗುಟ್ಟನ್ನು ಪೂರ್ತಿ ಹೊರಗೆಡಹಿಬಿಡು, ಹೇಳಿಬಿಡು.
  15. come down
    1. ಕೆಳಕ್ಕೆ ಬರು; ಇಳಿ; ಯಾವುದೇ ಮಟ್ಟದವರೆಗೂ ಇಳಿಬೀಳು.
    2. (ಮಳೆ, ಮಂಜು, ಮೊದಲಾದವುಗಳ ವಿಷಯದಲ್ಲಿ) ಬೀಳು.
    3. (ವಿಮಾನದ ವಿಷಯದಲ್ಲಿ) ನೆಲಕ್ಕೆ ಇಳಿ; ನೆಲ ಮುಟ್ಟು.
    4. ಪರಂಪರಾಗತವಾಗಿ ಬರು: our culture has come down from the timeless past ನಮ್ಮ ಸಂಸ್ಕೃತಿಯು ಅನಾದಿಕಾಲದಿಂದಲೂ ಪರಂಪರಾಗತವಾಗಿ ಬಂದದ್ದು.
    5. (ಮನಸ್ಸಿನಲ್ಲಿ ಇರುವುದನ್ನು, ತೀರ್ಮಾನವನ್ನು, ನಿಶ್ಚಯವನ್ನು) ತಿಳಿಸಿಬಿಡು; ಹೇಳಿಬಿಡು; ಪ್ರಕಟಿಸು: alright then, come down with it ಸರಿ, ಹಾಗಾದರೆ (ನಿನ್ನ ಮನಸ್ಸಿನಲ್ಲಿರುವುದನ್ನು) ಹೇಳಿಬಿಡು.
    6. (ಬೆಲೆಗಳ ವಿಷಯದಲ್ಲಿ) ಇಳಿ; ಮಂದಿಯಾಗು; ಬೀಳು; ಕುಸಿ; ಬಿದ್ದುಹೋಗು.
    7. ಒಟ್ಟಿನಲ್ಲಿ ಇಷ್ಟಾಗು; ಇಷ್ಟು ಮೊತ್ತವಾಗು.
    8. ಕೀಳಾಗು; ಮರ್ಯಾದೆ, ಗೌರವ–ಕಳೆದುಕೊ: come down in the world ಸಾಮಾಜಿಕ ಸ್ಥಾನಮಾನ ಕಳೆದುಕೊ; (ಮೇಲಂತಸ್ತಿನಿಂದ) ಕೀಳು ಸ್ಥಿತಿಗೆ ಬೀಳು; ಹೀನಾವಸ್ಥೆಗೆ ಬರು.
  16. come down on or upon
    1. (ಒಬ್ಬನ ಯಾ ಒಂದರ) ಮೇಲೆ–ಬೀಳು, ಎರಗು.
    2. (ಒಬ್ಬನನ್ನು) ಛೀಮಾರಿ ಮಾಡು; ತರಾಟೆಗೆ ತೆಗೆದುಕೊ.
    3. ದಂಡನೆ ಮಾಡು; ಶಿಕ್ಷಿಸು; ದಂಡಿಸು ಯಾ ಭಾರಿ ದಂಡ ತೆರಿಸು, ಕಸಿದುಕೊ: his kidnappers came down heavily upon him ಅವನ ಅಪಹರಣಕಾರರು ಅವನಿಂದ ಭಾರಿ ದಂಡವನ್ನು ಕಸಿದುಕೊಂಡರು.
    4. ಪರಿಹಾರ ವಸೂಲಿ ಮಾಡು; ನಷ್ಟಭರ್ತಿ ಮಾಡಿಕೊ.
  17. come (down) to ಎಲ್ಲ ಸೇರಿ ಇಷ್ಟಾಗು; ಒಟ್ಟು ಇಷ್ಟಕ್ಕೆ ಬರು; ಮೊತ್ತವಾಗು.
  18. come down with
    1. ಹಣವನ್ನು ಎಣಿಸಿಬಿಡು; ರೊಕ್ಕ–ಮಡಗಿಬಿಡು, ಇಟ್ಟುಬಿಡು: come down with your wager first ನಿನ್ನ ಪಣವನ್ನು ಮೊದಲು ಮಡಗು.
    2. (ರೋಗದಿಂದ) ನರಳಲಾರಂಭಿಸು.
  19. come forward
    1. (ಯಾವುದನ್ನೇ ಕೊಡಲು ಯಾ ಮಾಡಲು) ಮುಂದಾಗು; ಮುಂದೆ ಬರು: will no one come forward as a candidate? ಅಭ್ಯರ್ಥಿಯಾಗಿ ನಿಲ್ಲಲು ಯಾರೂ ಮುಂದೆ ಬರುವುದಿಲ್ಲವೆ?
    2. (ವಾಣಿಜ್ಯ) ಮಾರಾಟಕ್ಕೆ ಸರಕುಗಳು ಬರು.
  20. come $^3$home to.
  21. come in
    1. (ಮನೆ ಯಾ ಕೋಣೆಯನ್ನು) ಪ್ರವೇಶಿಸು; ಹೊಗು; ಒಳಕ್ಕೆ ಬರು.
    2. (ಕ್ರಿಕೆಟ್‍) ಇನಿಂಗ್ಸ್‍ ಆರಂಭಿಸು.
    3. (ಓಟದ ಪಂದ್ಯ ಮೊದಲಾದವುಗಳಲ್ಲಿ) ಸ್ಥಾನ–ಪಡೆ, ಗಳಿಸು: come in third (ಓಟದ ಪಂದ್ಯ ಮೊದಲಾದವಲ್ಲಿ) ಮೂರನೆ ಸ್ಥಾನ ಪಡೆ.
    4. ಚುನಾಯಿತನಾಗು; ಚುನಾವಣೆಯಲ್ಲಿ ಗೆಲ್ಲು.
    5. ಅಧಿಕಾರಕ್ಕೆ ಬರು.
    6. ಆದಾಯವಾಗಿ ಬರು.
    7. (ಸಹಾಯ, ಕೊಡುಗೆಗಳು, ಬುದ್ಧಿವಾದ, ಹ್ಯಾಷನ್‍, ಮೊದಲಾದವು) ಸಕಾಲಕ್ಕೆ ಬರು.
    8. (ಯಾವುದಾದರೂ ಕೆಲಸಕ್ಕೆ) ಒದಗಿಬರು; ಉಪಯುಕ್ತವಾಗು (ಮುಖ್ಯವಾಗಿ come in handy or useful ಎಂಬಲ್ಲಿ).
    9. (ವ್ಯಕ್ತಿಗೆ ಯಾ ವಸ್ತುವಿಗೆ) ಉಚಿತ ಸ್ಥಾನ ಯಾ ಪಾತ್ರ ಇರು: where does the joke come in? ಈ ಹಾಸ್ಯಕ್ಕೆ ಸ್ಥಾನವೆಲ್ಲಿ?
    10. (ಅಲೆಯ ವಿಷಯದಲ್ಲಿ) ಏರು; ಬರು: the tide is coming in ಅಲೆ ಏರುತ್ತಿದೆ.
    11. ಬಳಕೆಗೆ ಬರು; ಹ್ಯಾಷನ್‍ ಆಗು.
    12. ರೇಡಿಯೋ ಪ್ರಸಾರ ಆರಂಭವಾಗು.
  22. come in for
    1. (ಪಾಲು, ಆಸ್ತಿ, ಹಕ್ಕು, ಮೊದಲಾದ ರೂಪದಲ್ಲಿ) ಪಡೆ; ಹೊಂದು: he came in for a part of his property ಆಸ್ತಿಯಲ್ಲಿ ಅವನು ಒಂದು ಪಾಲನ್ನು ಪಡೆದ.
    2. (ಸ್ತುತಿ, ನಿಂದೆ, ಮೊದಲಾದವಕ್ಕೆ) ಪಾತ್ರನಾಗು; ಒಳಗಾಗು; ಈಡಾಗು; ಗುರಿಯಾಗು: he came in for sharp criticism ಅವನು ಕಟುಟೀಕೆಗೆ ಒಳಗಾದ.
    3. ಹೊಂದು; ಪಡೆ.
  23. come in on (ವ್ಯಾಪಾರ, ಉದ್ಯಮ, ಮೊದಲಾದವುಗಳಿಗೆ) ಸೇರು; ಭಾಗವಹಿಸು.
  24. come into
    1. (ಮುಖ್ಯವಾಗಿ ಉತ್ತರಾಧಿಕಾರಿಯ ವಿಷಯದಲ್ಲಿ) ಆಸ್ತಿ, ಅಧಿಕಾರ, ಮೊದಲಾದವನ್ನು ಪಡೆ.
    2. = 1come(12).
  25. come into being = ನುಡಿಗಟ್ಟು($26$).
  26. come into the world (ಈ ಲೋಕದಲ್ಲಿ) ಹುಟ್ಟು; ಜನ್ಮ ತಾಳು.
  27. come it (too) $^2$strong.
  28. come near (to) doing ಸ್ವಲ್ಪದರಲ್ಲಿ–ಪಾರಾಗು, ತಪ್ಪಿಸಿಕೊ ಯಾ ಅಯಶಸ್ವಿಯಾಗು.
  29. come of age
    1. ಪ್ರಾಯಕ್ಕೆ ಬರು; ಪ್ರಾಪ್ತವಯಸ್ಸಿಗೆ ಬರು; ಪ್ರಾಪ್ತವಯಸ್ಕನಾ(ಳಾ)ಗು.
    2. (ಯಾವುದೇ ಸಂಸ್ಥೆಯ ವಿಷಯದಲ್ಲಿ) ಉತ್ಪಾದನೆಯ ಘಟ್ಟಕ್ಕೆ, ಸ್ಥಿತಿಗೆ ಬರು.
  30. come off
    1. ಕಳಚಿಕೊ; ಬೇರ್ಪಡು; ಕಿತ್ತು ಬರು; ಬೇರೆಯಾಗು: a button has come off my coat ನನ್ನ ಕೋಟಿನಿಂದ ಒಂದು ಗುಂಡಿ ಕಿತ್ತುಕೊಂಡಿದೆ.
    2. (ಸಮಾರಂಭ ಮೊದಲಾದವುಗಳ ವಿಷಯದಲ್ಲಿ) ನೆರವೇರು; ನಡೆ; ಆಗು; ಸಂಭವಿಸು: this function came off very well ಈ ಸಮಾರಂಭವು ತುಂಬ ಚೆನ್ನಾಗಿ ನೆರವೇರಿತು.
    3. (ಕ್ರಿಕೆಟ್‍) ಬೋಲ್‍ ಮಾಡುವುದನ್ನು ನಿಲ್ಲಿಸು.
    4. (ಯಾವುದೇ ಊರು, ನಾಟಕ ಮಂದಿರ, ಮೊದಲಾದವುಗಳಲ್ಲಿ ನಡೆಸುತ್ತಿರುವ ಪ್ರದರ್ಶನಗಳ) ಅವಧಿ–ಮುಗಿ, ತೀರು.
    5. = 1come(18).
    6. (ಕುದುರೆ ಯಾ ಸೈಕಲ್ಲಿನಿಂದ ಕೆಳಕ್ಕೆ) ಬೀಳು.
    7. (ಪಂದ್ಯ ಮೊದಲಾದವುಗಳಿಂದ) ಹಿಂದೆಗೆ.
    8. ಇಳಿ: come off your bicycle ಬೈಸಿಕಲ್ಲಿನಿಂದ ಇಳಿ.
    9. (ಯೋಜನೆ, ಪ್ರಯತ್ನ, ಮೊದಲಾದವುಗಳ ವಿಷಯದಲ್ಲಿ) ಯಶಸ್ವಿಯಾಗು; ಸಫಲವಾಗು: the experiment did not come off ಪ್ರಯೋಗ ಯಶಸ್ವಿಯಾಗಲಿಲ್ಲ.
  31. come off it (ಆಡುಮಾತು) (ಬಡಾಯಿ, ಪ್ರತಾಪ, ಬೆದರಿಕೆ, ಅಳು, ಮೊದಲಾದವುಗಳ ವಿಷಯದಲ್ಲಿ) ಸಾಕು, ನಿಲ್ಲಿಸು.
  32. come off with flying colours ಜಯಪತಾಕೆ ಮೆರೆಸು; ಜಯಶೀಲನಾಗು; ಯಶಸ್ವಿಯಾಗು; ಗೆಲ್ಲು.
  33. come on
    1. ಹಿಂದೆ ಬರು; ತರುವಾಯ ಬರು; ಹಿಂಬಾಲಿಸು; ಅನುಸರಿಸು: you go first, I’ll come on later ನೀನು ಮೊದಲು ಹೋಗು, ಆಮೇಲೆ ನಾನು ಬರುತ್ತೇನೆ.
    2. ಬರುತ್ತಿರು; ಬರುತ್ತಾ–ಇರು, ಹೋಗು.
    3. (ದಾಳಿ ಮಾಡಲು, ಮೇಲೆರಗಲು) ನುಗ್ಗು; ಮುಂದೆ ಬರು.
    4. ಮುಂದುವರಿ; ಪ್ರಗತಿ ಹೊಂದು.
    5. ಏಳಿಗೆ ಪಡೆ; ಅಭಿವೃದ್ಧಿ ಹೊಂದು; ವರ್ಧಿಸು.
    6. ಪ್ರಾರಂಭಿಸು; ಶುರುವಾಗು; ಉಪಕ್ರಮಿಸು.
    7. (ದೂರದರ್ಶನ, ದೂರವಾಣಿ, ಮೊದಲಾದವುಗಳಲ್ಲಿ) ಕಾಣಿಸಿಕೊ; ಕೇಳಿಬರು.
    8. (ಗಾಳಿ, ಬಿರುಗಾಳಿ, ರೋಗಗಳ ವಿಷಯದಲ್ಲಿ) ಆಗಮಿಸು; ಉಪಕ್ರಮಿಸು; ಪರಿಸ್ಥಿತಿಯೊಂದರ ನಡುವೆ ಯಾ ಅದರ ಬದಲಾವಣೆಯಾಗಿ ಬರು.
    9. ಚರ್ಚೆಗೆ, ಪರಿಶೀಲನೆಗೆ ಯಾ ವಿಚಾರಣೆಗೆ ಬರು: the case came on for trial ವ್ಯಾಜ್ಯ ವಿಚಾರಣೆಗೆ ಬಂದಿತು.
    10. (ನಾಟಕರಂಗದ ಮೇಲೆ ಯಾ ದೃಶ್ಯದಲ್ಲಿ) ಬರು; ಕಾಣಿಸಿಕೊ; ಪ್ರವೇಶ ಮಾಡು.
    11. (ಕ್ರಿಕೆಟ್‍) ಬೋಲ್‍ ಮಾಡಲು ಪ್ರಾರಂಭಿಸು.
    12. (ವಿಧ್ಯರ್ಥದಲ್ಲಿ): (i) ಜಾಗ್ರತೆ ಮಾಡು; ತ್ವರೆ ಮಾಡು. (ii) ನನ್ನನ್ನು–ಹಿಂಬಾಲಿಸು, ಅನುಸರಿಸು. (iii) ದಯವಿಟ್ಟು ನಾನು ಹೇಳಿದ್ದನ್ನು ಮಾಡು, ನಾನು ಹೇಳಿದಂತೆ ಕೇಳು. (iv) ಏನು ಮಾಡುತ್ತೀಯೋ ಮಾಡು, ನೋಡೋಣ!; ನಿನ್ನ ಸವಾಲಿಗೆ ನಾನು ಸಿದ್ಧ.
  34. come out
    1. (ಪರೀಕ್ಷೆ, ಸ್ಪರ್ಧೆ, ಮೊದಲಾದವುಗಳಲ್ಲಿ) ಗೆದ್ದು ಯಾ ಸೋತು ಬರು; ನಿರ್ದಿಷ್ಟ ಫಲಿತಾಂಶ ಪಡೆ.
    2. (ಮೋಡ, ಮರೆ, ಮೊದಲಾದವುಗಳಿಂದ) ಹೊರಬರು.
    3. (ಕಾರ್ಖಾನೆ, ಕಚೇರಿ ಮೊದಲಾದವುಗಳಿಂದ, ಕೆಲಸ ಬಿಟ್ಟು) ಹೊರಬರು; ಮುಷ್ಕರ ಹೂಡು; ಸಂಪು ಹೂಡು.
    4. (ಸತ್ಯಾಂಶ, ಗುಟ್ಟು, ಸಂಚು, ಮೊದಲಾದವುಗಳ ವಿಷಯದಲ್ಲಿ) ಹೊರಬರು; ಬೆಳಕಿಗೆ ಬರು; ಬಯಲಾಗು; ಪ್ರಕಟವಾಗು: the truth came out at last ಸತ್ಯಾಂಶ ಕಡೆಗೂ ಹೊರಬಂತು.
    5. (ಸಮಸ್ಯೆಗಳ ವಿಷಯದಲ್ಲಿ) ಬಗೆಹರಿ; ಪರಿಹಾರವಾಗು; ಉತ್ತರ, ಪರಿಹಾರ–ದೊರಕು, ಸಿಕ್ಕು: the solution for the equation came out at last ಆ ಸಮೀಕರಣಕ್ಕೆ ಉತ್ತರ ಕೊನೆಗೂ ಬಂತು.
    6. (ಭಾವಚಿತ್ರ ಮೊದಲಾದವುಗಳ ವಿಷಯದಲ್ಲಿ) ಸ್ಪಷ್ಟವಾಗಿ–ಮೂಡಿಬರು, ಕಾಣು, ಬಿದ್ದಿರು.
    7. (ಸಿಡುಬು ಮೊದಲಾದವುಗಳ ವಿಷಯದಲ್ಲಿ) ಹೊಮ್ಮು; ಹೊಮ್ಮಿಬರು; ಕಾಣಿಸಿಕೊ.
    8. (ಗುಣಗಳ ವಿಷಯದಲ್ಲಿ) ಹೊರಪಡು; ಪ್ರಕಟವಾಗು; ಕಾಣು: his arrogance comes out in every speech ಅವನ ಒಂದೊಂದು ಭಾಷಣದಲ್ಲೂ ದುರಹಂಕಾರ ಕಾಣುತ್ತದೆ.
    9. (ಪುಸ್ತಕ, ಪತ್ರಿಕೆ, ಮೊದಲಾದವುಗಳ ವಿಷಯದಲ್ಲಿ) ಹೊರಬರು; ಬಿಡುಗಡೆಯಾಗು; ಪ್ರಕಟಿಸಲ್ಪಡು: when will your book come out? ನಿಮ್ಮ ಪುಸ್ತಕ ಯಾವಾಗ ಪ್ರಕಟವಾಗುತ್ತದೆ?
    10. (ರಂಗಭೂಮಿಯಲ್ಲಿ, ನೃತ್ಯರಂಗದಲ್ಲಿ ಯಾ ಉನ್ನತ ಸಮಾಜದಲ್ಲಿ) ಮೊದಲ ಬಾರಿಗೆ ಬರು; ಪ್ರಥಮ ಪ್ರವೇಶ ಮಾಡು.
    11. (ಶಬ್ದ ಯಾ ವಾಚ್ಯಾರ್ಥದ ವಿಷಯದಲ್ಲಿ) ಸ್ಪಷ್ಟವಾಗು; ಸ್ಪಷ್ಟವಾಗಿ ತೋರು: the meaning comes out clearly in his annotation ಆತನ ಟಿಪ್ಪಣಿಯಲ್ಲಿ ಅರ್ಥ ಸ್ಪಷ್ಟವಾಗುತ್ತದೆ.
    12. (ಕಲೆಗಳು, ಬಟ್ಟೆ, ಮೊದಲಾದವುಗಳ ವರ್ಣದ ವಿಷಯದಲ್ಲಿ) ಹೋಗಿಬಿಡು: will the dye come out if the cloth is washed? ಈ ಬಟ್ಟೆಯನ್ನು ಒಗೆದರೆ ಬಣ್ಣ ಹೋಗುತ್ತದೆಯೆ?
    13. (ಯಾವುದರದೇ ಪರ ಯಾ ವಿರುದ್ಧವಾಗಿ ತನ್ನನ್ನು) ಘೋಷಿಸಿಕೊ; ತಿಳಿಯಪಡಿಸಿಕೊ; ಸಾರಿಕೊ; ಸ್ಪಷ್ಟವಾಗಿ ತೋರಿಸಿಕೊ; ಪ್ರಕಟಿಸಿಕೊ.
  35. come out with (ಸುದ್ದಿ, ಗುಟ್ಟು, ಕಥೆ, ಮೊದಲಾದವನ್ನು) ಬಯಲು ಮಾಡು; ಹೇಳಿಬಿಡು: come out with your story now ಈಗ ನಿನ್ನ ಕಥೆ ಹೇಳಿಬಿಡು.
  36. come over
    1. (ಹೆಸರಿಸಿದ ಸ್ಥಳದಿಂದ ನಡುವಣ ದೂರವನ್ನು ಯಾ ಹಾದಿಯನ್ನು ಕ್ರಮಿಸಿ) ಇಲ್ಲಿಗೆ ಬರು: the family came over with the refugees ಆ ಕುಟುಂಬವು ನಿರಾಶ್ರಿತರೊಡನೆ ಬಂದಿತು. the family came over from Bombay to see us ಆ ಕುಟುಂಬ ನಮ್ಮನ್ನು ನೋಡಲು ಬೊಂಬಾಯಿಯಿಂದ ಇಲ್ಲಿಗೆ ಬಂದಿತು.
    2. (ಪಕ್ಷವನ್ನು) ಬದಲಾಯಿಸು; ಅನ್ಯಪಕ್ಷ ಸೇರು; ಪಕ್ಷಾಂತರ ಮಾಡು.
    3. ಭಾವನೆ ಯಾ ಅಭಿಪ್ರಾಯ ಬದಲಾಯಿಸು; ಬೇರೆ ಅಭಿಪ್ರಾಯ ತಾಳು.
    4. (ಆಡುಮಾತು) (ಯಾವುದೇ ಸಂವೇದನೆಗೆ) ಒಳಗಾಗು; ಈಡಾಗು; ಅನುಭವಿಸು: come over faint ಮೂರ್ಛೆಗೆ ಒಳಗಾಗು.
  37. come over (queer) etc. on a person (ಆಡುಮಾತು) ವ್ಯಕ್ತಿಯ ಮೇಲೆ (ವಿಚಿತ್ರ ಮೊದಲಾದ) ಪರಿಣಾಮವನ್ನುಂಟುಮಾಡು, ಪ್ರಭಾವ ಬೀರು.
  38. come round
    1. ಅಕಸ್ಮಾತ್ತಾಗಿ ಬರು; ಕಾರಣ ಯಾ ಉದ್ದೇಶ ಇಲ್ಲದೆ ಬರು, ಭೇಟಿಕೊಡು.
    2. (ತಾರೀಖಿನ ವಿಷಯದಲ್ಲಿ) ಮತ್ತೆ ಬರು; ಪುನರಾವರ್ತನೆಯಾಗು.
    3. (ಮೂರ್ಛೆ, ರೋಗದ ಹಿಡಿತ, ಮೊದಲಾದವುಗಳಿಂದ) ಚೇತರಿಸಿಕೊ; ಸರಿಯಾಗು; ಸ್ವಸ್ಥಿತಿಗೆ ಬರು.
    4. (ಕೋಪ ಬಿಟ್ಟು) ಸಮಾಧಾನ ಹೊಂದು; ಸರಿಯಾಗು.
    5. (ತನ್ನ ಪಟ್ಟು, ಅಭಿಪ್ರಾಯ, ಭಾವನೆ, ಮೊದಲಾದವನ್ನು ತ್ಯಜಿಸಿ ಸಾಧುವೆಂದು ತೋರುವ) ಬೇರೊಬ್ಬನ ಭಾವನೆ, ನಂಬಿಕೆ ಮೊದಲಾದವಕ್ಕೆ ಬರು; ಬೇರೊಬ್ಬನ ಅಭಿಪ್ರಾಯ ಒಪ್ಪಿಕೊ: he has come round ಅವನು ಒಪ್ಪಿಕೊಂಡಿದ್ದಾನೆ, ಸಮ್ಮತಿಸಿದ್ದಾನೆ.
  39. come short
    1. (ನಿರೀಕ್ಷಿಸಿದ್ದಕ್ಕಿಂತ ಯಾ ಬಯಸಿದ್ದಕ್ಕಿಂತ ಯಾ ಆಶಿಸಿದ್ದಕ್ಕಿಂತ) ಕಡಮೆಯಾಗು; ಕೊರೆಯಾಗು; ಕೊರತೆ ಬೀಳು.
    2. (ವ್ಯಕ್ತಿಯ ವಿಷಯದಲ್ಲಿ) (ದಕ್ಷತೆ, ಕರ್ತವ್ಯ ನಿರ್ವಹಣ, ಶೀಲ, ಉದಾರತೆ, ಮೊದಲಾದವುಗಳಲ್ಲಿ) ನಿರೀಕ್ಷಿಸಿದ ಮಟ್ಟಕ್ಕೆ–ಬರದಿರು, ತಲುಪದಿರು, ಮುಟ್ಟದಿರು.
  40. come through
    1. (ಅಪಾಯ, ತೀವ್ರಬೇನೆ, ಮೊದಲಾದವನ್ನು ಯಶಸ್ವಿಯಾಗಿ) ತಾಳಿಕೊ; ಸಹಿಸಿಕೊ; ಜೀವದಿಂದ ಉಳಿ; ಬದುಕಿಬರು: with such a weak heart he was lukcy to come through ಅಂಥ ದುರ್ಬಲ ಹೃದಯವನ್ನಿಟ್ಟುಕೊಂಡು ಬದುಕಿಬಂದದ್ದು ಅವನ ಅದೃಷ್ಟ.
    2. (ದೂರವಾಣಿ ಮೊದಲಾದವುಗಳ ಮೂಲಕ ಸುದ್ದಿ ಮೊದಲಾದವು) ಬರು; ಸಿಗು.
  41. come to
    1. (ಚಲಿಸುತ್ತಿರುವ ನೌಕೆ ಮೊದಲಾದವುಗಳ ವಿಷಯದಲ್ಲಿ) ನಿಶ್ಚಲ ಸ್ಥಿತಿಗೆ ಯಾ ಸಾಮಾನ್ಯ ಸ್ಥಿತಿಗೆ ಬರು.
    2. (ವಂಶಾನುಕ್ರಮವಾಗಿ, ಉತ್ತರಾಧಿಕಾರಿಯಿಂದ) ಪಡೆ.
    3. (ಮೂರ್ಛೆಯಿಂದ ಎದ್ದು) ಪ್ರಜ್ಞೆ ಹೊಂದು; ಪ್ರಜ್ಞೆ ಬರು; ಚೇತರಿಸಿಕೊ; ಸ್ವಸ್ಥಿತಿಗೆ ಬರು.
    4. ಒಟ್ಟು ಅಷ್ಟಾಗು; ಮೊತ್ತವಾಗು.
    5. (ಅದೃಷ್ಟದಿಂದ ಯಾ ಇತರರಿಂದ) ಪಡೆ; ತೆಗೆದುಕೊ.
    6. ಬರು; ಬಂದು ಮುಟ್ಟು; ತಲುಪು: what is the world coming to? ಈ ಪ್ರಪಂಚ ಎಲ್ಲಿಗೆ ಬಂದು ಮುಟ್ಟುತ್ತದೆ?
  42. come to a head
    1. (ಕುರು ಮೊದಲಾದವುಗಳ ವಿಷಯದಲ್ಲಿ) ಹಣ್ಣಾಗು; ಪಕ್ವಸ್ಥಿತಿಗೆ ಬರು.
    2. (ರೂಪಕವಾಗಿ) (ಪರಿಸ್ಥಿತಿಯ ವಿಷಯದಲ್ಲಿ) ಉಲ್ಬಣಗೊಳ್ಳು; ವಿಷಮಾವಸ್ಥೆಗೆ ಬರು; ಉತ್ಕಟಾವಸ್ಥೆ ತಲುಪು.
  43. come to an end ಕೊನೆಗೊಳ್ಳು; ಮುಗಿ; ಕೊನೆಮುಟ್ಟು; ಕೊನೆಗೆ ಬರು; ಮುಕ್ತಾಯವಾಗು; ಸಮಾಪ್ತಿಗೊಳ್ಳು.
  44. come to a point ಮೊನೆಯಾಗು; ಚೂಪಾಗು.
  45. come to blows ಹೊಡೆದಾಟಕ್ಕೆ ಬರು; ಮಾರಾಮಾರಿಗೆ ಇಳಿ: from words they came to blows ಮಾತಿನಿಂದ ಅವರು ಕೊನೆಗೆ ಹೊಡೆದಾಟಕ್ಕೆ ಇಳಿದರು.
  46. come to grief (ತನ್ನ ಅವಿವೇಕ ಯಾ ಅಪರಾಧದಿಂದ) ಸಂಕಟಕ್ಕೆ ಈಡಾಗು; ತೊಂದರೆಗೆ ಗುರಿಯಾಗು.
  47. come to $^1$hand.
  48. come to light (ಯಾವುದೇ ಗುಟ್ಟಾದ ವಿಷಯಗಳು) ಬೆಳಕಿಗೆ ಬರು; ಬಯಲಾಗು; ಪ್ರಕಟವಾಗು.
  49. come to no harm ಯಾವ ತೊಂದರೆಯೂ ಆಗದಿರು; ಹಾನಿಗೆ ಒಳಗಾಗದಿರು; ಹಾನಿ ತಟ್ಟದಿರು.
  50. come to oneself or one’s senses (ಅವಿವೇಕ, ಮೂರ್ಛೆ, ಮೊದಲಾದವು ತೊಲಗಿ) ಬುದ್ಧಿ, ವಿವೇಕ, ಪ್ರಜ್ಞೆ–ಬರು.
  51. come to pass ಆಗು; ನಡೆ; ಜರುಗು; ಸಂಭವಿಸು.
  52. come to stay ನೆಲೆಯಾಗಿರು; ಸ್ಥಿರವಾಗಿ ನಿಲ್ಲು; ಶಾಶ್ವತವಾಗಿ ಉಳಿ.
  53. come to terms
    1. ಒಪ್ಪಂದಕ್ಕೆ, ಕರಾರಿಗೆ–ಬರು.
    2. ರಾಜಿಮಾಡಿಕೊ.
  54. come to that (ಆಡುಮಾತು) ಅಷ್ಟಕ್ಕೆ ಬಂದರೆ; ಆ ಘಟ್ಟವನ್ನು ಮುಟ್ಟಿದರೆ, ತಲುಪಿದರೆ.
  55. come to the point ಪ್ರಸಕ್ತ ಅಂಶಕ್ಕೆ, ವಿಷಯಕ್ಕೆ–ಬರು.
  56. come $^1$true.
  57. come under
    1. ವರ್ಗೀಕೃತವಾಗು; ಹೆಸರಿಸಿದ ವರ್ಗಕ್ಕೆ–ಸೇರು, ಸೇರಿರು.
    2. (ಯಾವುದೇ ಪ್ರಭಾವ, ಅಧಿಕಾರ, ಒತ್ತಾಯ ಮೊದಲಾದವಕ್ಕೆ) ಒಳಪಡು; ಒಳಗಾಗು.
  58. come unstuck (ಆಡುಮಾತು) ತೊಂದರೆಗೀಡಾಗು; ನಷ್ಟಕ್ಕೊಳಗಾಗು; ಯಶಸ್ವಿಯಾಗದಿರು.
  59. come up
    1. (ಬ್ರಿಟಿಷ್‍ ಪ್ರಯೋಗ) ವಿಶ್ವವಿದ್ಯಾನಿಲಯಕ್ಕೆ–ಬರು, ಪ್ರವೇಶಿಸು, ಸೇರು.
    2. (ಗಿಡ ಮೊದಲಾದವುಗಳ ವಿಷಯದಲ್ಲಿ) ಮೊಳಕೆ ಹುಟ್ಟು; ಮೂಡಿ ಬರು; ಅಂಕುರಿಸು; ನೆಲದಿಂದ ಮೇಲಕ್ಕೆ ಕಾಣಿಸಿಕೊ.
    3. ಮಾತುಕತೆಗಾಗಿ–ಒಬ್ಬನಲ್ಲಿಗೆ ಬರು, ಒಬ್ಬನನ್ನು ಭೇಟಿಯಾಗು.
    4. (ಅಲಂಕರಣ, ಹ್ಯಾಷನ್ನುಗಳ ವಿಷಯದಲ್ಲಿ) ಬಳಕೆಗೆ ಬರು; ಹ್ಯಾಷನ್ನಾಗು; ಹ್ಯಾಷನ್ನಿಗೆ ಬರು: bell-bottomed pants have now come up ಬೆಲ್‍ಬಾಟಮ್‍ ಪ್ಯಾಂಟುಗಳು ಈಗ ಹ್ಯಾಷನ್ನಿಗೆ ಬಂದಿವೆ.
    5. (ಚರ್ಚೆ ಮೊದಲಾದವುಗಳಿಗಾಗಿ) ಪ್ರಸ್ತಾಪಕ್ಕೆ ಬರು; ಮಂಡಿಸಲ್ಪಡು; ಮುಂದಿಡಲ್ಪಡು: the case has not come up yet ಆ ಕೇಸು ಇನ್ನೂ (ವಿಚಾರಣೆಗೆ) ಬಂದಿಲ್ಲ.
    6. (ವಿಧ್ಯರ್ಥದಲ್ಲಿ) (ಸವಾರನು ಯಾ ಬಂಡಿಯವನು ಕುದುರೆಗೆ ಕೊಡುವ ಹುಕುಂ) ಬೇಗ, ಬೇಗ! ಜಲ್ದಿ, ಜಲ್ದಿ!
    7. (ಅಶಿಷ್ಟ) (ಲಾಟರಿ, ಜೂಜು ಮೊದಲಾದವುಗಳಲ್ಲಿ ಗೆಲುವಿನ ಸೂಚಕವಾಗಿ) ಟಿಕೆಟ್‍, ಟೋಕನ್‍, ಮೊದಲಾದವು ಬರು: my ticket did not come up at the recent lottery ಈಚಿನ ಲಾಟರಿಯಲ್ಲಿ (ಬಹುಮಾನ) ನನ್ನ ಟಿಕೆಟ್‍(ಗೆ) ಬರಲಿಲ್ಲ.
    8. ಆಗು; ಉಂಟಾಗು; ಉದ್ಭವಿಸು: no vacancy has come up yet ಯಾವ ಹುದ್ದೆಯೂ ಇನ್ನೂ ಖಾಲಿಯಾಗಿಲ್ಲ.
    9. ಮೇಲುಮಟ್ಟಕ್ಕೆ ಏರು; ಉನ್ನತಸ್ಥಿತಿಗೆ ಬರು: he has come up the hard way ಆತ ತೀರ ಪ್ರಯಾಸದಿಂದ ಉನ್ನತಸ್ಥಿತಿಗೆ ಬಂದಿದ್ದಾನೆ.
    10. (ಮಾದರಿ ಮೊದಲಾದವುಗಳಿಗೆ) ಸಮವಾಗಿರು.
  60. come up against (ವಿರೋಧ, ಕಷ್ಟ, ಮೊದಲಾದವುಗಳಿಗೆ) ಎದುರಾಗು.
  61. come upon
    1. ಹಠಾತ್ತಾಗಿ, ಇದ್ದಕ್ಕಿದ್ದಂತೆ–ಮೇಲೆರಗು, ಆಕ್ರಮಿಸು: disaster came upon them ವಿಪತ್ತು ಅವರನ್ನು ಇದ್ದಕ್ಕಿದ್ದಂತೆ ಆಕ್ರಮಿಸಿತು.
    2. ಮನಸ್ಸಿನಲ್ಲಿ ಹೊಳೆ ಯಾ ಮನಸ್ಸನ್ನೆಲ್ಲಾ ಆವರಿಸು.
    3. ನ್ಯಾಯ ಸಮ್ಮತವಾಗಿ–ಒತ್ತಾಯಪಡಿಸು, ಬಲಾತ್ಕಾರ ಮಾಡು: the divorcee came upon her former husband for alimony ದಾಂಪತ್ಯ ವಿಚ್ಛೇದ ಪಡೆದ ಆಕೆ ತನ್ನ ಹಿಂದಿನ ಗಂಡನನ್ನು ಜೀವನಾಂಶಕ್ಕಾಗಿ (ಕಾನೂನು ಪ್ರಕಾರ) ಒತ್ತಾಯಪಡಿಸಿದಳು.
    4. ಹೊರೆಯಾಗಿರು; ಭಾರವಾಗಿರು: the orphans came upon their uncle ಆ ಅನಾಥ ಮಕ್ಕಳು ಚಿಕ್ಕಪ್ಪನಿಗೆ ಹೊರೆಯಾದರು.
    5. ಅಕಸ್ಮಾತ್ತಾಗಿ–ಸಿಕ್ಕು, ಕಣ್ಣಿಗೆ ಬೀಳು.
  62. come upto ನಿರೀಕ್ಷಿತ ಗುಣಮಟ್ಟಕ್ಕೆ ಬರು: the photograph has not come upto my standard ಆ ಹೋಟೋ ನಾನು ನಿರೀಕ್ಷಿಸಿದ ಮಟ್ಟಕ್ಕೆ ಬರಲಿಲ್ಲ.
  63. come up with
    1. (ಮುಂದೆ ಹೋಗುತ್ತಿರುವವರು ಮೊದಲಾದವರ) ಜೊತೆಗೆ ಬರು; ಸರಿಸಮಕ್ಕೆ ಬರು: we came up soon with the advance party ಮುಂದೆ ಹೋದ ಗುಂಪಿನ ಸರಿಸಮಕ್ಕೆ ನಾವು ಬೇಗ ಬಂದೆವು.
    2. ಮುಂದಿಡು; ಮಂಡಿಸು: come up tomorrow with the records ನಾಳೆ ದಾಖಲೆಗಳ ಸಮೇತ ಮಂಡಿಸು.
    3. (ಸವಾಲು ಮೊದಲಾದವುಗಳಿಗೆ ಪ್ರತ್ಯುತ್ತರವಾಗಿ ಅಭಿಪ್ರಾಯ ಮೊದಲಾದವನ್ನು) ಮುಂದಿಡು; ತರು.
  64. come with (ಸಾಮಾನ್ಯವಾಗಿ ವಸ್ತುಗಳು ಮೊದಲಾದವುಗಳ ವಿಷಯದಲ್ಲಿ) (ಹುದ್ದೆ ಮೊದಲಾದವುಗಳ) ಒಡನೆಯೇ, ಜೊತೆಯಲ್ಲಿಯೇ–ಬರು; ಅನುಬಂಧಿಯಾಗಿ ಬರು.
  65. have it coming to one (ಆಡುಮಾತು) (ಯಾವನೇ ವ್ಯಕ್ತಿಗೆ) ಆಗಬೇಕಾದದ್ದೇ ಆಗು; ಆಗಬೇಕಾದ ಶಾಸ್ತಿಯೇ ಆಗು.
  66. if it comes to that = ನುಡಿಗಟ್ಟು \((54)\).
  67. it came on my head ಅದು ನನ್ನ ತಲೆಯ ಮೇಲೆ ಬಿದ್ದಿತು; ಅದಕ್ಕೆ ನಾನು ಹೊಣೆಯಾದೆ; ಅದರ ಜವಾಬ್ದಾರಿ ನನ್ನ ಪಾಲಿಗೆ ಬಂದಿತು.
  68. things come right (ಘಟನೆ ಮೊದಲಾದವು) ಸರಿಯಾಗಿ ಒದಗುತ್ತವೆ; ಸರಿಬರುತ್ತವೆ.
  69. this is where we came in ನಾವು ಪ್ರಾರಂಭಿಸಿದ್ದು ಈ–ಅಂಶದಿಂದಲೇ, ಘಟ್ಟದಿಂದಲೇ, ಜಾಗದಿಂದಲೇ.
  70. where do I come in?
    1. ನನ್ನ ಪಾತ್ರವೇನು?
    2. ನನಗೇನು ಪ್ರಯೋಜನ? ನನಗೆಷ್ಟು ಉಪಯೋಗ? ನನ್ನ ಹಿತಾಸಕ್ತಿಗಳಿಗೆ ಎಷ್ಟು ಸಹಾಯಕ?
  71. come it over ಮೋಸದಿಂದ ಪ್ರಭಾವ ಬೀರಲು ಪ್ರಯತ್ನಿಸು.