See also 2clear  3clear
1clear ಕ್ಲಿಅರ್‍
ಗುಣವಾಚಕ
  1. ನಿರ್ಮಲ; ನಿಚ್ಚಳ; ಸ್ವಚ್ಛ; ಮೋಡ ಮುಸುಕಿಲ್ಲದ; ತಿಳಿಯಾದ; ಮೇಘರಹಿತ; ಮೋಡವಿಲ್ಲದ; ಶುಭ್ರ; ನಿರಭ್ರ: a clear day ಮೋಡವಿಲ್ಲದ, ಮುಗಿಲಿಲ್ಲದ ಹಗಲು.
  2. ಪಾರಕ; ಪಾರದರ್ಶಕ; ಸ್ವಚ್ಛ; ತಿಳಿಯಾದ; ನಿಚ್ಚಳ: clear water ತಿಳಿಯಾದ ನೀರು.
  3. ರಾಡಿಯಿಲ್ಲದ; ಬಗ್ಗಡವಿಲ್ಲದ; ಕದಡದ; ಕಲಕಿಲ್ಲದ.
  4. ತೊಳಗುವ; ಬೆಳಗುವ; ಉಜ್ಜ್ವಲವಾದ; ಕಾಂತಿಯುತ; ಪ್ರಕಾಶಮಾನವಾದ: clear dawn ಪ್ರಕಾಶಮಾನವಾದ ಉಷಃಕಾಲ.
  5. ಶುದ್ಧ; ನಿಷ್ಕಳಂಕ; ನಿರ್ದುಷ್ಟ; ದೋಷರಹಿತ: ನಿಷ್ಕಲ್ಮಷ; ಕಳಂಕರಹಿತ: clear conscience ನಿಷ್ಕಳಂಕ ಮನಸ್ಸು; ಶುದ್ಧಾಂತಃಕರಣ; ಶುದ್ಧಾಂತರಂಗ; ತಪ್ಪಿತಸ್ಥನಲ್ಲವೆಂಬ ಮನೋಭಾವ.
  6. ಸ್ಪಷ್ಟವಾದ; ಸ್ಫುಟವಾದ; ಎದ್ದು ಕಾಣುವ; ಎದ್ದು ತೋರುವ: a clear photograph ಸ್ಫುಟವಾದ ಛಾಯಾಚಿತ್ರ.
  7. ನಿಸ್ಸಂದಿಗ್ಧವಾದ; ಸಂದಿಗ್ಧತೆಯಿಲ್ಲದ; ಸುಲಭಗ್ರಾಹ್ಯ; ಸುಲಭವಾಗಿ–ತಿಳಿಯುವ, ಗ್ರಹಿಸಬಹುದಾದ, ಅರ್ಥವಾಗುವ: clear answers ನಿಸ್ಸಂದಿಗ್ಧವಾದ ಉತ್ತರಗಳು.
  8. ತೊಡಕಿಲ್ಲದ; ಗೋಜಿಲ್ಲದ: ಜಟಿಲವಲ್ಲದ; ಎಡರುತೊಡರಿಲ್ಲದ: ತೊಡಕು, ಗೋಜು, ತೊಂದರೆ, ಇನ್ನೊಂದರ ಸಂಪರ್ಕ ಮೊದಲಾದವುಗಳಿಲ್ಲದ.
  9. ಪ್ರಕಟವಾದ; ವ್ಯಕ್ತವಾದ; ವಿಶದವಾದ; ಸಂದೇಹ ಯಾ ಗೊಂದಲಕ್ಕೆ ಎಡೆಯಿಲ್ಲದೆ ಸ್ಪಷ್ಟವಾಗಿ ಕಾಣುತ್ತಿರುವ.
  10. ಸೂಕ್ಷ್ಮ ವಿವೇಚನೆಯುಳ್ಳ; ಸೂಕ್ಷ್ಮಗ್ರಾಹಿ; ಒಳಹೊಗುವ; ತೀಕ್ಷ್ಣದೃಷ್ಟಿಯ: a clear mind ಸೂಕ್ಷ್ಮ ವಿವೇಚನೆಯುಳ್ಳ ಮನಸ್ಸು.
  11. ಭರವಸೆಯ.
  12. ಖಂಡಿತ; ಖರೆ; ನಿಸ್ಸಂಶಯ; ಖಚಿತ; ದೃಢ; ನಿಶ್ಚಿತ.
  13. ಸುಲಭಶ್ರಾವ್ಯ; ಸ್ಪಷ್ಟವಾಗಿ, ಚೆನ್ನಾಗಿ–ಕೇಳಿಸುವ; ಸ್ಫುಟವಾಗಿ ಕೇಳಿಬರುವ.
  14. (ಲಾಭ, ವೇತನ ಮೊದಲಾದವುಗಳ ವಿಷಯದಲ್ಲಿ) ನಿವ್ವಳ; ಬಟು; ಕಡಿತವಿಲ್ಲದ; ಕಳೆಯಬೇಕಾಗಿಲ್ಲದ.
  15. (ಸಂದೇಹ, ಆರೋಪ, ಸಾಲ ಮೊದಲಾದವುಗಳಿಂದ) ತೊಲಗಿಸಿಕೊಂಡ; ದೂರವಾದ; ಮುಕ್ತವಾದ; ನಿವಾರಣೆಯಾದ; ಸಂಬಂಧ ಕಡಿದುಕೊಂಡ: he kept clear of her ಅವನು ಅವಳಿಂದ ದೂರವಿದ್ದನು.
  16. ಪೂರ್ತಿ; ಪೂರಾ; ಇಡೀ; ಸಂಪೂರ್ಣ: three clear days ಪೂರ್ತಿ ಮೂರು ದಿನಗಳು.
  17. ತಡೆಯಿಲ್ಲದ; ಸಲೀಸಾಗಿರುವ; ಬಾಧಕಗಳಿಲ್ಲದ; ಅಡಚಣೆಯಿಲ್ಲದ; ಅಡ್ಡಿಯಿಲ್ಲದ; ಸರಾಗವಾದ: a clear road ಅಡೆತಡೆಯಿಲ್ಲದ ದಾರಿ.
  18. (ದಾಸ್ತಾನು, ಸಾಮಾನು ಮೊದಲಾದವನ್ನು) ಇಳಿಸಿದ; ಹೊರತೆಗೆದ.
  19. (ಆಸ್ತಿ ಮೊದಲಾದವುಗಳ ಮೇಲೆ) ತೊಡಕಿಲ್ಲದ; ಸಾಲದ ಹೊರೆಯಿಲ್ಲದ; ನಿರುಪಾಧಿಕ; ನಿರ್ಬಾಧಿತ; ಸಾಲಸೋಲ, ಪೂರ್ವಾಧಿ ಮೊದಲಾದವುಗಳಿಲ್ಲದ.
ಪದಗುಚ್ಛ
  1. clear of ಸರಾಗವಾದ; ಸಲೀಸಾದ: ಅಡ್ಡಿ ಅಡಚಣೆ, ತೊಂದರೆ ಮೊದಲಾದವುಗಳು ಇಲ್ಲದೆ ಹೋಗಲು ಸುಲಭವಾಗಿರುವ ಯಾ ಸುರಕ್ಷಿತವಾಗಿರುವ.
  2. in the clear ನಿಸ್ಸಂದಿಗ್ಧವಾದ; ಸಂದೇಹ, ತೊಂದರೆ, ಅಪಾಯಗಳಿಗೆ ಅವಕಾಶವಿಲ್ಲದ ಯಾ ಆಸ್ಪದವಿಲ್ಲದ.
  3. the coast is clear (ರೂಪಕವಾಗಿ) (ತಪ್ಪಿಸಿಕೊಂಡು ಹೋಗಲು ಮೊದಲಾದವಕ್ಕೆ) ಸರಾಗವಾಗಿದೆ; ಸಲೀಸಾಗಿದೆ; ಮುಕ್ತವಾಗಿದೆ; ಅನುಕೂಲವಾಗಿದೆ; ಸುಲಭವಾಗಿದೆ; ಬೇರೆಯವರು ಗಮನಿಸುವುದಕ್ಕಾಗಲಿ ಅಡ್ಡಿಪಡಿಸುವುದಕ್ಕಾಗಲಿ ಅವಕಾಶವಿಲ್ಲ.
ನುಡಿಗಟ್ಟು

in clear ಸಂಕೇತಲಿಪಿಯಲ್ಲಿ ಯಾ ಸಂಕೇತ ಭಾಷೆಯಲ್ಲಿ ಅಲ್ಲದೆ.