ಬದಲಿಸು; ಬದಲಾಯಿಸು; ಒಂದಕ್ಕೆ ಬದಲಾಗಿ ಮತ್ತೊಂದು ತೆಗೆದುಕೊ: change one’s coat ಕೋಟು ಬದಲಾಯಿಸು.
(ಬೇರೊಂದಕ್ಕಾಗಿ ಸದ್ಯದ್ದನ್ನು) ಬಿಟ್ಟುಬಿಡು; ತ್ಯಜಿಸು; ತೊರೆ; ವರ್ಜಿಸು; ಬಿಟ್ಟುಕೊಡು: I will not change independence for the comforts of wealth ಐಶ್ವರ್ಯದ ಸುಖಕ್ಕಾಗಿ ಸ್ವಾತಂತ್ರ್ಯವನ್ನು ಬಿಟ್ಟುಕೊಡಲಾರೆ.
ಬದಲಾಯಿಸು; ಬೇರೆ ಮಾಡು; ಮಾರ್ಪಡಿಸು; ವ್ಯತ್ಯಾಸ ಮಾಡು: the conjuror changed the boy into a rabbit ಯಕ್ಷಿಣಿಕಾರನು ಹುಡುಗನನ್ನು ಮೊಲವನ್ನಾಗಿ ಮಾರ್ಪಡಿಸಿದ.
(ನಾಣ್ಯ) ಚಿಲ್ಲರೆ ಕೊಡು.
(ನಾಣ್ಯ) ಚಿಲ್ಲರೆ ಪಡೆ; ಚಿಲ್ಲರೆ–ಮುರಿಸು, ಮಾಡಿಸು.
ಉಡುಪು ಬದಲಾಯಿಸು; ಹೊಸ ಉಡುಪು ತೊಡಿಸು; ಬೇರೆ ಬಟ್ಟೆ–ಹಾಕು, ಹೊದಿಸು: change a baby ಮಗುವಿಗೆ ಹೊಸ ಉಡುಪು ಹೊದಿಸು.
ಒಂದರಿಂದ ಮತ್ತೊಂದಕ್ಕೆ ಹೋಗು; ಬದಲಾಯಿಸು: thing changes hands ಪದಾರ್ಥ ಕೈ ಬದಲಾಯಿಸುತ್ತದೆ. change houses, trains ಮನೆಗಳನ್ನು, ರೈಲುಗಳನ್ನು ಬದಲಾಯಿಸು.
ಕೊಟ್ಟು ತೆಗೆದುಕೊ; ಅದಲುಬದಲು ಮಾಡು; ವಿನಿಮಯಿಸು: change places with (ಒಬ್ಬನೊಡನೆ) ಜಾಗ ಬದಲಾಯಿಸಿಕೊ. we changed places ನಾವು ಸ್ಥಾನ ಅದಲುಬದಲು ಮಾಡಿಕೊಂಡೆವು.
(ವಿದೇಶಿ ಹಣ, ನಾಣ್ಯ) ವಿನಿಮಯಿಸು.
ಅಕರ್ಮಕ ಕ್ರಿಯಾಪದ
ಬದಲಾಗು; ಮಾರ್ಪಡು; ವ್ಯತ್ಯಾಸ ಹೊಂದು; ಬೇರೆಯಾಗು: caterpillars change into butterflies ಮರಿಹುಳುಗಳು ಚಿಟ್ಟೆಗಳಾಗುತ್ತವೆ, ಚಿಟ್ಟೆಗಳಾಗಿ ಮಾರ್ಪಡುತ್ತವೆ.
ಬದಲಾಯಿಸು; ಒಂದರಿಂದ ಇನ್ನೊಂದಕ್ಕೆ ಹೋಗು: we can change into an express ನಾವು ಎಕ್ಸ್ಪ್ರೆಸ್ಗೆ ಬದಲಾಯಿಸಬಹುದು; ನಾವು (ನಮ್ಮ ರೈಲನ್ನು ಬಿಟ್ಟು) ಎಕ್ಸ್ಪ್ರೆಸ್ಗೆ ಹತ್ತಬಹುದು.
ವಿನಿಮಯಿಸು; ಕೊಟ್ಟು ಬದಲಾಯಿಸಿಕೊ.
ಬಟ್ಟೆ ಬದಲಾಯಿಸು; ಉಡುಪು ಬದಲಾಯಿಸು; (ಮುಖ್ಯವಾಗಿ ಸಾಯಂಕಾಲದ ವೇಳೆಯಲ್ಲಿ ಧರಿಸುವ) ಬೇರೆ ಬಟ್ಟೆ ಹಾಕಿಕೊ.
ಪದಗುಚ್ಛ
change down (ವಾಹನದಲ್ಲಿ) ಕೆಳಗಿನ ಗೇರು ಹಾಕು.
change feet ಹೆಜ್ಜೆ ಬದಲಾಯಿಸು; (ಮುಖ್ಯವಾಗಿ ಕವಾಯತ್ತಿನಲ್ಲಿ) ನಡೆಯುತ್ತಿರುವಾಗ ಒಂದು ಹೆಜ್ಜೆ ಬೀಳುತ್ತಿದ್ದ ಕಾಲದಲ್ಲಿ ಬೇರೊಂದು ಹೆಜ್ಜೆ ಬೀಳುವಂತೆ ಕಾಲು ಹಾಕು.