See also 1change
2change ಚೆಂಜ್‍
ಸಕರ್ಮಕ ಕ್ರಿಯಾಪದ
  1. ಬದಲಿಸು; ಬದಲಾಯಿಸು; ಒಂದಕ್ಕೆ ಬದಲಾಗಿ ಮತ್ತೊಂದು ತೆಗೆದುಕೊ: change one’s coat ಕೋಟು ಬದಲಾಯಿಸು.
  2. (ಬೇರೊಂದಕ್ಕಾಗಿ ಸದ್ಯದ್ದನ್ನು) ಬಿಟ್ಟುಬಿಡು; ತ್ಯಜಿಸು; ತೊರೆ; ವರ್ಜಿಸು; ಬಿಟ್ಟುಕೊಡು: I will not change independence for the comforts of wealth ಐಶ್ವರ್ಯದ ಸುಖಕ್ಕಾಗಿ ಸ್ವಾತಂತ್ರ್ಯವನ್ನು ಬಿಟ್ಟುಕೊಡಲಾರೆ.
  3. ಬದಲಾಯಿಸು; ಬೇರೆ ಮಾಡು; ಮಾರ್ಪಡಿಸು; ವ್ಯತ್ಯಾಸ ಮಾಡು: the conjuror changed the boy into a rabbit ಯಕ್ಷಿಣಿಕಾರನು ಹುಡುಗನನ್ನು ಮೊಲವನ್ನಾಗಿ ಮಾರ್ಪಡಿಸಿದ.
  4. (ನಾಣ್ಯ) ಚಿಲ್ಲರೆ ಕೊಡು.
  5. (ನಾಣ್ಯ) ಚಿಲ್ಲರೆ ಪಡೆ; ಚಿಲ್ಲರೆ–ಮುರಿಸು, ಮಾಡಿಸು.
  6. ಉಡುಪು ಬದಲಾಯಿಸು; ಹೊಸ ಉಡುಪು ತೊಡಿಸು; ಬೇರೆ ಬಟ್ಟೆ–ಹಾಕು, ಹೊದಿಸು: change a baby ಮಗುವಿಗೆ ಹೊಸ ಉಡುಪು ಹೊದಿಸು.
  7. ಒಂದರಿಂದ ಮತ್ತೊಂದಕ್ಕೆ ಹೋಗು; ಬದಲಾಯಿಸು: thing changes hands ಪದಾರ್ಥ ಕೈ ಬದಲಾಯಿಸುತ್ತದೆ. change houses, trains ಮನೆಗಳನ್ನು, ರೈಲುಗಳನ್ನು ಬದಲಾಯಿಸು.
  8. ಕೊಟ್ಟು ತೆಗೆದುಕೊ; ಅದಲುಬದಲು ಮಾಡು; ವಿನಿಮಯಿಸು: change places with (ಒಬ್ಬನೊಡನೆ) ಜಾಗ ಬದಲಾಯಿಸಿಕೊ. we changed places ನಾವು ಸ್ಥಾನ ಅದಲುಬದಲು ಮಾಡಿಕೊಂಡೆವು.
  9. (ವಿದೇಶಿ ಹಣ, ನಾಣ್ಯ) ವಿನಿಮಯಿಸು.
ಅಕರ್ಮಕ ಕ್ರಿಯಾಪದ
  1. ಬದಲಾಗು; ಮಾರ್ಪಡು; ವ್ಯತ್ಯಾಸ ಹೊಂದು; ಬೇರೆಯಾಗು: caterpillars change into butterflies ಮರಿಹುಳುಗಳು ಚಿಟ್ಟೆಗಳಾಗುತ್ತವೆ, ಚಿಟ್ಟೆಗಳಾಗಿ ಮಾರ್ಪಡುತ್ತವೆ.
  2. (ಚಂದ್ರನ ವಿಷಯದಲ್ಲಿ) ಕಳೆ ಬದಲಾಯಿಸು; (ಮುಖ್ಯವಾಗಿ ಅಮಾವಾಸ್ಯೆಯ ತರುವಾಯ) ಹೊಸದಾಗು.
  3. ಬದಲಾಯಿಸು; ಒಂದರಿಂದ ಇನ್ನೊಂದಕ್ಕೆ ಹೋಗು: we can change into an express ನಾವು ಎಕ್ಸ್‍ಪ್ರೆಸ್‍ಗೆ ಬದಲಾಯಿಸಬಹುದು; ನಾವು (ನಮ್ಮ ರೈಲನ್ನು ಬಿಟ್ಟು) ಎಕ್ಸ್‍ಪ್ರೆಸ್‍ಗೆ ಹತ್ತಬಹುದು.
  4. ವಿನಿಮಯಿಸು; ಕೊಟ್ಟು ಬದಲಾಯಿಸಿಕೊ.
  5. ಬಟ್ಟೆ ಬದಲಾಯಿಸು; ಉಡುಪು ಬದಲಾಯಿಸು; (ಮುಖ್ಯವಾಗಿ ಸಾಯಂಕಾಲದ ವೇಳೆಯಲ್ಲಿ ಧರಿಸುವ) ಬೇರೆ ಬಟ್ಟೆ ಹಾಕಿಕೊ.
ಪದಗುಚ್ಛ
  1. change down (ವಾಹನದಲ್ಲಿ) ಕೆಳಗಿನ ಗೇರು ಹಾಕು.
  2. change feet ಹೆಜ್ಜೆ ಬದಲಾಯಿಸು; (ಮುಖ್ಯವಾಗಿ ಕವಾಯತ್ತಿನಲ್ಲಿ) ನಡೆಯುತ್ತಿರುವಾಗ ಒಂದು ಹೆಜ್ಜೆ ಬೀಳುತ್ತಿದ್ದ ಕಾಲದಲ್ಲಿ ಬೇರೊಂದು ಹೆಜ್ಜೆ ಬೀಳುವಂತೆ ಕಾಲು ಹಾಕು.
  3. change foot = ಪದಗುಚ್ಛ \((2)\).
  4. change gear (ವಾಹನದಲ್ಲಿ) ಗೇರು ಬದಲಾಯಿಸು; ಬೇರೆ ಗೇರು ಹಾಕು.
  5. change step = ಪದಗುಚ್ಛ \((2)\).
  6. change up (ವಾಹನದಲ್ಲಿ) ಮೇಲಿನ ಗೇರು ಹಾಕು.
ನುಡಿಗಟ್ಟು
  1. change colour ಬಣ್ಣ ಬದಲಿಸು; ವಿವರ್ಣವಾಗು; ಮುಖ ಕೆಡು; ಬಣ್ಣಕೆಡು; ಬಿಳಿಚಿಕೊ; ನಿಸ್ತೇಜನಾಗು; (ನಾಚಿಕೆಯಿಂದ) ಕೆಂಪೇರು; ಪೆಚ್ಚಾಗು.
  2. change front (ವಾದ ಮೊದಲಾದವುಗಳಲ್ಲಿ) ಹೊಸ ನಿಲುವು ತಾಳು; ಹೊಸ ದಾರಿ ಹಿಡಿ; ನಿಲುವು ಬದಲಾಯಿಸು.
  3. change one’s condition ಮದುವೆಯಾಗು.
  4. change one’s feet (ಆಡುಮಾತು) ಜೋಡು ಬದಲಾಯಿಸು; ಬೇರೆ ಜೋಡು ಹಾಕಿಕೊ.
  5. change one’s mind ಮನಸ್ಸು ಬದಲಾಯಿಸು; ಹೊಸ ಅಭಿಪ್ರಾಯ ತಾಳು; ಹೊಸ ಹಂಚಿಕೆ ಅನುಸರಿಸು.
  6. change one’s note ದನಿ ಬದಲಾಯಿಸು; ರಾಗ ಬದಲಾಯಿಸು:
    1. ಇದ್ದಕ್ಕಿದ್ದಂತೆ ಅಭಿಪ್ರಾಯ ಬದಲಾಯಿಸಿಕೊ.
    2. (ಗರ್ವ, ಬಡಾಯಿ, ಮೊದಲಾದ ಮನೋವೃತ್ತಿಯನ್ನು ಬಿಟ್ಟು) ವರ್ತನೆ ಬದಲಾಯಿಸು; ಹೆಚ್ಚು ವಿನಯ, ದೈನ್ಯ, ದುಃಖ ಮೊದಲಾದವನ್ನು ತೋರು.
  7. change one’s tune = ನುಡಿಗಟ್ಟು \((6)\).
  8. change $^1$hands.
  9. change the $^3$subject.