See also 2candle
1candle ಕ್ಯಾಂಡ್‍ಲ್‍
ನಾಮವಾಚಕ
  1. ಮೋಂಬತ್ತಿ; ಮೇಣದ ಬತ್ತಿ.
  2. ಕ್ಯಾಂಡಲು; ಪ್ರಕಾಶದ ತೀವ್ರತೆಯನ್ನು ಅಳೆಯುವ ಮಾನ.
ಪದಗುಚ್ಛ

Roman candle ಬಣ್ಣದ ಚೆಂಡುಗಳನ್ನು ಹಾರಿಸುವ ಮದ್ದು ತುಂಬಿದ ಕೊಳವೆ; ಬಣ್ಣದ ಬಾಣಬಿರುಸು.

ನುಡಿಗಟ್ಟು
  1. bell, book and candle.
  2. burn the candle at both ends:
    1. ದುಂದು ಮಾಡು; ಉಡಾಯಿಸು; ಎರಡು ಕೈಯಿಂದಲೂ ಖರ್ಚುಮಾಡು.
    2. ರಾತ್ರಿ ಹಗಲು ದುಡಿ; ಮಿತಿಮೀರಿ ಶ್ರಮಿಸು; ವಿಪರೀತ ದುಡಿದು ಶಕ್ತಿಯನ್ನೆಲ್ಲ ವ್ಯಯ ಮಾಡು; ಶಕ್ತಿಗೆ ಮೀರಿದ ಕೆಲಸವನ್ನು ಯಾ ಜವಾಬ್ದಾರಿಯನ್ನು ಹೊತ್ತುಕೊಂಡು ದುಡಿ.
  3. can’t hold a candle to (ಒಬ್ಬನೊಡನೆ ಯಾ ಒಂದರೊಡನೆ) ಹೋಲಿಕೆಗೆ ನಿಲ್ಲದ; ಆ ಮಟ್ಟದ್ದಲ್ಲದ; ಆ ಮಟ್ಟಕ್ಕೆ ಬರಲಾಗದ; ಅದಕ್ಕಿಂತ ಬಹಳ–ಕೆಳಗಿನ, ಕೀಳಾದ, ಕೆಳಮಟ್ಟದ.
  4. not worth the candle ಕಷ್ಟಕ್ಕೆ ತಕ್ಕ ಫಲವಿಲ್ಲದ; ಶ್ರಮಕ್ಕೆ ತಕ್ಕ ಲಾಭವಿಲ್ಲದ; ದುಡಿಮೆಗೆ ತಕ್ಕ ಪ್ರತಿಫಲವಿಲ್ಲದ.
  5. hide candle under a bushel ಗುಣಗಳನ್ನು ಬಚ್ಚಿಡು, ಮರೆಯಲ್ಲಿರಿಸು.
  6. is not fit to hold a candle to = ನುಡಿಗಟ್ಟು \((3)\).
  7. sell by inch of candle (ಚರಿತ್ರೆ) ಹರಾಜು ಹಾಕು; ಉಳಿದಿರುವ ಮೋಂಬತ್ತಿಯ ತುಂಡು ಉರಿದು ಹೋಗುವ ಮುನ್ನ ಕೊನೆಯ ಸವಾಲು ಕೂಗಿ ಮಾರು.