See also 2zone
1zone ಸೋನ್‍
ನಾಮವಾಚಕ
  1. ವಲಯ:
    1. ಪಟ್ಟೆ; ಹೆಚ್ಚುಕಡಮೆ ಪಟ್ಟಿಯಂತಿರುವ ಯಾವುದೇ ನಿರ್ದಿಷ್ಟ ಪ್ರದೇಶ.
    2. ಎರಡು ಹೆಚ್ಚುಕಡಮೆ ಏಕಕೇಂದ್ರೀಯ ವೃತ್ತಗಳ ನಡುವಣ ಪ್ರದೇಶ.
    3. ಗೋಲದ ಮೈಮೇಲೆ ಎರಡು ಸಮಾಂತರ ರೇಖೆಗಳಿಂದ ಆವೃತವಾದ ಪ್ರದೇಶ.
    4. ಶಂಕು ಯಾ ಸಿಲಿಂಡರಿನ ಅಕ್ಷಕ್ಕೆ ಲಂಬವಾಗಿರುವ ಎರಡು ವೃತ್ತಗಳ ನಡುವಣ ಪ್ರದೇಶ.
    5. ಏಕಕಾಲಮಾನ ವಲಯ; (ಭೂಮಿಯ ಮೇಲೆ) ಪ್ರಮಾಣದ ಯಾ ಒಂದೇ ಕಾಲಮಾನವನ್ನು ನಿಗದಿಮಾಡಲು ಆಯ್ದುಕೊಂಡ ಎರಡು ರೇಖಾಂಶಗಳ ನಡುವಣ ಪ್ರದೇಶ, ವ್ಯಾಪ್ತಿ.
    6. (ಭೂವಿಜ್ಞಾನ) ವಿಶಿಷ್ಟ ಹಾಸಿಲ್‍ಗಳ ಆಧಾರದ ಮೇಲೆ ಭೂಮಿಯ ಆಳದಲ್ಲಿ ಯಾ ಪರ್ವತಗಳ ಮೇಲೆ ವಿಂಗಡಿಸಲಾದ ಸ್ತರ ಪ್ರದೇಶ.
    7. (ಭೂಗೋಳಶಾಸ್ತ್ರ) ಭೂಗೋಳದ ಮೈಮೇಲೆ ವಿಷುವದ್‍ ವೃತ್ತಕ್ಕೆ ಸಮಾಂತರವಾಗಿ ಎಳೆದ ವೃತ್ತಗಳ ನೆರವಿನಿಂದ ವಿಂಗಡಿಸಲಾಗಿರುವ ಒಂದು ಉಷ್ಣವಲಯ, ಎರಡು ಸಮಶೀತೋಷ್ಣ ವಲಯಗಳು ಮತ್ತು ಎರಡು ಶೀತವಲಯಗಳು ಎಂಬ ಐದು ವಲಯಗಳಲ್ಲಿ ಒಂದು. Figure: zone
    8. ಕಾಯ ಒಂದನ್ನು ಸುತ್ತುವರಿದಿರುವ ಒಂದೇ ಬಣ್ಣದ ಯಾ ಬೇರಾವುದೇ ಗುಣದ ನೆರವಿನಿಂದ ಗುರುತಿಸಬಹುದಾದ ಸುತ್ತುಪಟ್ಟಿ.
    9. ವಿಶಿಷ್ಟ ಗುಣಲಕ್ಷಣಗಳುಳ್ಳ, ವಿಶಿಷ್ಟ ಉದ್ದೇಶ, ಪ್ರಯೋಜನಗಳಿರುವ – ಪ್ರದೇಶ, ಪರಿಧಿ: danger zone ಅಪಾಯ ವಲಯ, ಕ್ಷೇತ್ರ.
  2. (ಪ್ರಾಚೀನ ಪ್ರಯೋಗ) ನಡುಪಟ್ಟಿ; ‘ಬೆಲ್ಟು’; ಡಾಬು.
ಪದಗುಚ್ಛ
  1. demilitarized zone ನಿಸ್ಸೈನೀಕೃತ ಪ್ರದೇಶ; ಸೈನ್ಯಗಳಿಲ್ಲದಿರುವ, ಸೈನ್ಯಗಳಿಂದ ಮುಕ್ತವಾದ ಪ್ರದೇಶ.
  2. erogenous zone (ದೇಹದ) ಕಾಮೋದ್ದೀಪಕ ಯಾ ಕಾಮಪ್ರಚೋದಕ – ಭಾಗ, ಸ್ಥಾನ.
  3. time zone = 1zone(1e).