See also 1tail  3tail  4tail
2tail ಟೇಲ್‍
ಸಕರ್ಮಕ ಕ್ರಿಯಾಪದ
  1. ಬಾಲ–ಕಟ್ಟು, ಅಂಟಿಸು.
  2. (ಹಣ್ಣಿನ) ಕೊನೆಯನ್ನು ಯಾ ತೊಟ್ಟನ್ನು–ಕೀಳು, ಕಿತ್ತುಹಾಕು, ತೆಗೆ.
  3. (ಕುರಿ ಮೊದಲಾದವುಗಳ) ಬಾಲ ಕತ್ತರಿಸು.
  4. (ಆಡುಮಾತು) ರಹಸ್ಯವಾಗಿ, ಗೊತ್ತಾಗದಂತೆ–ಹಿಂಬಾಲಿಸು, ಬೆನ್ನುಹತ್ತು ( ಅಕರ್ಮಕ ಕ್ರಿಯಾಪದ ಸಹ).
  5. (ಒಂದಕ್ಕೆ) ಯಾವುದಾದರೂ ಇನ್ನೊಂದನ್ನು ಸೇರಿಸು, ಲಗತ್ತಿಸು, ಅಂಟಿಸು.
ಪದಗುಚ್ಛ
  1. tail after ಎಡೆಬಿಡದೆ, ಎಚ್ಚರಿಕೆಯಿಂದ–ಹಿಂಬಾಲಿಸು.
  2. tail away (or off)
    1. ಚೆದುರಿ–ಹಿಂದೆಬೀಳು, ಎತ್ತೆತ್ತಲೋ ಹೋಗಿಬಿಡು.
    2. ವಿರಳವಾಗುತ್ತಾ, ಚಿಕ್ಕದಾಗುತ್ತಾ, ಕಿರಿದಾಗುತ್ತಾ, ಕಡಿಮೆಯಾಗುತ್ತಾ–ಹೋಗು
  3. tail back (ವಾಹನಸಂಚಾರ ಯಾ ಜನಸಂಚಾರದ ವಿಷಯದಲ್ಲಿ) (ಅಡಚಣೆಯಿಂದ ಮುಂದಕ್ಕೆ ಚಲಿಸಲಾಗದೆ) ಉದ್ದಸಾಲುಗಟ್ಟು; ಉದ್ದಸಾಲು ರಚಿಸು.
  4. tail in (ತೊಲೆ ಮೊದಲಾದವುಗಳ ಒಂದು ತುದಿಯನ್ನು) ಗೋಡೆ ಮೊದಲಾದವುಗಳ ಒಳಕ್ಕೆ– ತೂರಿಸು, ಕೂರಿಸು, ನೆಡು.
  5. tail on to = tail ( sakamaRka kirxyApada ೫).