See also 2tail  3tail  4tail
1tail ಟೇಲ್‍
ನಾಮವಾಚಕ
  1. ಬಾಲ; ಲಾಂಗೂಲ; ಪುಚ್ಛ; ತೋಕೆ.
  2. ಬಾಲ; ಲಾಂಗೂಲ; ಪುಚ್ಛ:
    1. ಆಕಾರದಲ್ಲಿ ಯಾ ಸ್ಥಾನದಲ್ಲಿ, ಯಾವುದೇ ವಸ್ತುವಿನ ಬಾಲದಂಥ ಭಾಗ, ಉದ್ದನೆಯ ಹಿಂಭಾಗದ ಚಾಚು; ಮುಖ್ಯವಾಗಿ ತುದಿಯಲ್ಲಿ ಕೆಳಕ್ಕೆ ಯಾ ಹೊರಕ್ಕೆ ಚಾಚಿಕೊಂಡಿರುವ ಯಾವುದೇ ವಸ್ತು: tail of the eye ಕಣ್ಣಿನ ಹೊರಮೂಲೆ; ಕಡೆಗಣ್ಣು. tail of a page ಪುಟದ ಅಡಿ, ಕೆಳಭಾಗ.
    2. ಯಾವುದೇ ಒಂದರ (ಉದಾಹರಣೆಗೆ ಮೆರವಣಿಗೆಯ) ಹಿಂತುದಿ; ಅಂತ್ಯಭಾಗ; ಕೊನೆ(ಯ) ಭಾಗ.
    3. ಜನರು, ವಾಹನಗಳು, ಮೊದಲಾದವುಗಳ ಉದ್ದಸಾಲು, ದೀರ್ಘಪಂಕ್ತಿ.
    1. (ವಾಯುಫಲಕ, ಚುಕ್ಕಾಣಿ ಹಲಗೆ, ಮೊದಲಾದವುಗಳನ್ನೊಳಗೊಂಡ) ವಿಮಾನದ ಯಾ ರಾಕೆಟ್‍ನ ಹಿಂಭಾಗ.
    2. ಮೋಟಾರು ವಾಹನದ ಹಿಂಭಾಗ, ಹಿಂತುದಿಯ ಭಾಗ.
  3. ಧೂಮಕೇತುವಿನ ಬಾಲ; ಧೂಮಕೇತುವಿನ ಹಿಂಭಾಗದಲ್ಲಿರುವ ಹೊಳೆಯುವ ಕಣಗಳ ಬಾಲದಂಥ ರಾಶಿ.
    1. (ಮುಖ್ಯವಾಗಿ ಒಂದು ಶ್ರೇಣಿ ಯಾ ಸರಣಿಯಲ್ಲಿನ) ಹಿಂತುದಿ; ಕಡೆಯ, ಅಂತ್ಯ–ಭಾಗ; ಕೆಳಮಟ್ಟದ ಯಾ ದುರ್ಬಲ ಭಾಗ.
    2. (ಕ್ರಿಕೆಟ್‍) ಕೊನೆಯ ಬ್ಯಾಟುಗಾರರು; ಬ್ಯಾಟುಗಾರರ ತಂಡದಲ್ಲಿ ತೀರಾ ಕೊನೆಯಲ್ಲಿ ಆಡುವ ಸಾಮಾನ್ಯ, ದುರ್ಬಲ ಬ್ಯಾಟುಗಾರರು.
    1. ಷರ್ಟಿನ–ಬಾಲ, ಸೊಂಟದಿಂದ ಕೆಳಗಿನ ಭಾಗ.
    2. (ಬಾಲದಂತೆ ಜೋಲಾಡುವ) ಕೋಟಿನ ಹಿಂಭಾಗ.
  4. (ಬಹುವಚನದಲ್ಲಿ) (ಆಡುಮಾತು)
    1. = tailcoat.
    2. ಟೇಲ್‍ಕೋಟನ್ನು ಒಳಗೊಂಡ ಸಂಜೆಯುಡುಪು.
  5. (ಬಹುವಚನದಲ್ಲಿ) (ಆಯ್ಕೆ ಮೊದಲಾದವನ್ನು ನಿರ್ಧರಿಸಲು ಮೇಲಕ್ಕೆ ಚಿಮ್ಮುವ) ನಾಣ್ಯದ ಹಿಮ್ಮುಖ; ತಲೆಯ ಚಿತ್ರವಿಲ್ಲದ ಹಿಂಪಕ್ಕ.
  6. (ಆಡುಮಾತು) ಹಿಂಬಾಲಕ:
    1. ಅನುಚರ; ಹಿಂದೆ ಬರುವವನು.
    2. ಗುಮಾನಿಯಿಂದ ಒಬ್ಬ ವ್ಯಕ್ತಿಯನ್ನು ಬಾಲದಂತೆ ಹಿಂಬಾಲಿಸುವ ಯಾ ಬೆನ್ನುಹತ್ತುವ ಇನ್ನೊಬ್ಬ ವ್ಯಕ್ತಿ.
  7. ಗಾಳಿಪಟದ ಬಾಲಂಗೋಚಿ; ಬಾಲಂಗ(ಕ)ಚ್ಚೆ.
  8. (ಸಂಗೀತ ರೇಖಾವಳಿಯಲ್ಲಿ) ಸಂಗೀತ ಸ್ವರ(ಸೂಚಕ) ಚಿಹ್ನೆಯ ಲಂಬಗೆರೆ.
  9. y ಮೊದಲಾದ ಅಕ್ಷರಗಳ–ಕೆಳಗೀಟು, ತೋಕೆ.
    1. (ಚಾವಣಿಯಲ್ಲಿ ಹೊದಿಸಿರುವ) ಸ್ಲೇಟುಹಲಗೆಯ ಯಾ ಹೆಂಚಿನ ಹೊರ(ಕಾಣುವ) ತುದಿ.
    2. (ಗೋಡೆಯಲ್ಲಿ) ಒಳತುದಿ; ಇಟ್ಟಿಗೆಯ ಯಾ ಕಲ್ಲಿನ ಹೊರಕಾಣಿಸದ, ಒಳತೂರಿಸಿದ–ತುದಿ.
  10. ಚಿಟ್ಟೆಯ ರೆಕ್ಕೆಯ ತೆಳು ಹಿಂಚಾಚು, ತೋಕೆ.
  11. ಬಿರುಗಾಳಿಯ ಅಂತ್ಯಭಾಗ; ಕೊನೆಯಲ್ಲಿನ ತಕ್ಕಮಟ್ಟಿನ ಶಾಂತಭಾಗ.
  12. ನದೀಪುಚ್ಫ; ತೊರೆಯ ಬಾಲ; ನದಿಯಲ್ಲಿ ಬಿರುಸಿನ ಪ್ರವಾಹದ, ಬಿರುಸು ಹರಿವಿನ ಹಿಂಗಡೆಯ ಶಾಂತಭಾಗ.
ಪದಗುಚ್ಛ
  1. on a person’s tail ಬಾಲದಂತೆ (ವ್ಯಕ್ತಿಯನ್ನು) ಹಿಂಬಾಲಿಸುತ್ತ; ಬೆನ್ನು ಹತ್ತಿ; ಬಾಲಕಚ್ಚಿ; ಜಾಡುಹಿಡಿದು.
  2. turn tail ಬೆನ್ನು ತಿರುಗಿಸಿ ಓಡು; ಹೆದರಿ ಹಿಮ್ಮೆಟ್ಟಿ ಓಟ ಕೀಳು.
  3. with one’s tail between one’s legs ಬಾಲ ಮುದುರಿ ಕೊಂಡು; ಅಪಾಯಕ್ಕೆ ಹೆದರಿ, ಉತ್ಸಾಹ ಕಳೆದುಕೊಂಡು ಯಾ ಅವಮಾನಕ್ಕೆ ಒಳಗಾಗಿ.
  4. with one’s tail up (ವ್ಯಕ್ತಿಯ ವಿಷಯದಲ್ಲಿ, ರೂಪಕವಾಗಿ) ಹುರುಪಿನಿಂದ; ಒಳ್ಳೆಯ ಉಮೇದಿನಲ್ಲಿ; ಬಹಳ ಲವಲವಿಕೆಯಿಂದ.