See also 2sit
1sit ಸಿಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ sat ಉಚ್ಚಾರಣೆ ಸ್ಯಾಟ್‍; ವರ್ತಮಾನ ಕೃದಂತ sitting).
ಸಕರ್ಮಕ ಕ್ರಿಯಾಪದ
  1. (ಕುದುರೆ ಮೊದಲಾದವಾಹನದ ಮೇಲೆ) ಸರಿಯಾಗಿ ಕೂರು; ಭದ್ರವಾಗಿ ಕುಳಿತುಕೊ: he could not sit his horse ಅವನು ತನ್ನ ಕುದುರೆಯ ಮೇಲೆ ಭದ್ರವಾಗಿ ಕೂರಲಾರದೆ ಹೋದ.
  2. (ಬ್ರಿಟಿಷ್‍ ಪ್ರಯೋಗ) (ಪರೀ ಮೊದಲಾದವಕ್ಕೆ) ಕೂರು; ಉತ್ತರ ಬರೆ: he could not sit his examination ಅವನು ತನ್ನ ಪರೀಯಲ್ಲಿ ಉತ್ತರ ಬರೆಯಲಾರದೆ ಹೋದ.
  3. ಕುಳ್ಳಿರಿಸು; ಕೂರಿಸು; ಕೂರುವಂತೆ ಮಾಡು: sit them there ಅವರನ್ನು ಅಲ್ಲಿ ಕೂರಿಸು. sit yourself here ನೀನು ಇಲ್ಲಿ ಕುಳಿತುಕೊ.
ಅಕರ್ಮಕ ಕ್ರಿಯಾಪದ
  1. ಕುಳಿತುಕೊ; ಕೂತುಕೊ; ಕುಳ್ಳಿರು; ಕೂರು; ಕೂಡು. . ಕುಳಿತು – ಮಾಡು, ನಡೆಸು, ನಿರ್ವಹಿಸು; ಸಾಮಾನ್ಯವಾಗಿ ಕುಳಿತುಕೊಂಡೇ ನಡೆಸಬೇಕಾದ ಯಾವುದೇ ಕಾರ್ಯದಲ್ಲಿ ತೊಡಗಿರು, ಉದ್ಯುಕ್ತನಾಗಿರು.
  2. (ಚಿತ್ರಕಾರ, ಶಿಲ್ಪಿ, ಮೊದಲಾದ ಕಲಾವಿದರ ಮುಂದೆ ತನ್ನ ಭಾವಚಿತ್ರ, ಪ್ರತಿಮೆ, ಮೊದಲಾದವನ್ನು ರಚಿಸಲು ನೆರವಾಗಿ) ಕೂರು; ಭಾವಚಿತ್ರಕ್ಕಾಗಿ, ಪ್ರತಿಮೆಗಾಗಿ ಕೂರು: sit for a portrait to a painter ಭಾವಚಿತ್ರಕ್ಕಾಗಿ ಚಿತ್ರಕಾರನ ಎದುರಿಗೆ ಕೂರು.
  3. (ಬ್ರಿಟಿಷ್‍ ಪ್ರಯೋಗ) ಪರೀಗಾಗಿ ಕೂರು; ಪರೀಕ್ಷಾರ್ಥಿ ಯಾಗಿ (ಪ್ರಶ್ನಪತ್ರಿಕೆಗಳಿಗೆ) ಉತ್ತರ ಬರೆ: he could not sit for his examination ಅವನು ಪರೀಗೆ ಕೂರಲಾಗಲಿಲ್ಲ.
  4. (ತನ್ನ ಚುನಾವಣಾ ತ್ರದ ಪ್ರತಿನಿಧಿಯಾಗಿ) ಪಾರ್ಲಿಮೆಂಟಿನಲ್ಲಿ ಕೂರು; ಪಾರ್ಲಿಮೆಂಟಿನ ಸದಸ್ಯನಾಗಿರು.
  5. ಕೂಸು ಕಾವಲುಗಾರ್ತಿಯಾಗಿ, ಶಿಶುಪಾಲಕಿಯಾಗಿ – ವರ್ತಿಸು; ತಾಯಿತಂದೆ ಮನೆಯಲ್ಲಿಲ್ಲದಿದ್ದಾಗ ಕೂಸನ್ನು ನೋಡಿಕೊ.
  6. (ಪಾರ್ಲಿಮೆಂಟು, ನ್ಯಾಯಾಲಯಗಳು, ಸಮಿತಿ, ಮೊದಲಾದವುಗಳ ವಿಷಯದಲ್ಲಿ) ಅಧಿವೇಶನ ಸೇರಿರು; ಕಾರ್ಯ ಕಲಾಪದಲ್ಲಿ ತೊಡಗಿರು.
  7. (ಹಕ್ಕಿಗಳ ವಿಷಯದಲ್ಲಿ, ರೆಂಬೆ, ನೆಲ, ಪಂಜರದ ಸಲಾಕಿ, ಮೊದಲಾದವುಗಳ ಮೇಲೆ) ಕುಳಿತುಕೊ; ಕೂರು; ಕುಳಿತಿರು.
  8. (ಕೆಲವು ಪ್ರಾಣಿಗಳ ವಿಷಯದಲ್ಲಿ) (ಹಿಂಗಾಲುಗಳನ್ನು ಮಡಿಸಿಕೊಂಡು ಮುಂಗಾಲುಗಳ ಮೇಲೆ ಊರಿಕೊಂಡು) ಕುಳಿತುಕೊ; ಕೂರು.
  9. (ಹಕ್ಕಿಗಳ ವಿಷಯದಲ್ಲಿ) ಕಾವಿಗೆ ಕೂರು; ಕಾವು ಕೊಟ್ಟು ಮರಿ ಮಾಡಲು ಮೊಟ್ಟೆಗಳ ಮೇಲೆ ಕೂರು.
  10. ಇದ್ದಲ್ಲೇ ಇರು; ಕದಲದಿರು; ಅಳ್ಳಾಡದಿರು; ಯಾವ ಕೆಲಸವನ್ನೂ ಮಾಡದೆ ಯಾ ಯಾವ ಕೆಲಸಕ್ಕೂ ಬಾರದೆ, ಸುಮ್ಮನೆ ಬಿದ್ದಿರು.
  11. (ಸಾಮಾನ್ಯವಾಗಿ sit before) (ಸೇನೆಯ ವಿಷಯದಲ್ಲಿ) (ಒಂದು ನಗರದ ಹೊರಗೆ) ಅದನ್ನು ಮುತ್ತಿಗೆ ಹಾಕಲು ಒಂದು ಸ್ಥಾನವನ್ನು – ಹಿಡಿ, ಆಕ್ರಮಿಸಿ ಕೂರು. ೧
  12. (ವ್ಯಕ್ತಿಯ ವಿಷಯದಲ್ಲಿ) ಸ್ಥಾನವಹಿಸು; ಯಾವುದೇ ಸ್ಥಾನ, ಕರ್ತವ್ಯ, ಅಧಿಕಾರ – ನಿರ್ವಹಿಸಲು ಹಕ್ಕು ಪಡೆದಿರು: sat as a magistrate ನ್ಯಾಯಾಧಿಪತಿಯ ಸ್ಥಾನ ವಹಿಸಿದ, ನಿರ್ವಹಿಸಿದ.
  13. (ಉಡುಪು ಮೊದಲಾದವುಗಳ ವಿಷಯದಲ್ಲಿ) (ನಿರ್ದಿಷ್ಟ ರೀತಿಯಲ್ಲಿ) ಕೂರು; ಹೊಂದಿಕೊ.
ಪದಗುಚ್ಛ
  1. make a person sit up (ಆಡುಮಾತು).
    1. (ವ್ಯಕ್ತಿಯನ್ನು) ಬೆರಗುಗೊಳಿಸು; ಚಕಿತಗೊಳಿಸು.
    2. ಆಸಕ್ತಿ ಹುಟ್ಟಿಸು; ಎಚ್ಚತ್ತು ಆಸಕ್ತಿ ವಹಿಸುವಂತೆ ಮಾಡು.
  2. sit at a person’s feet (ಒಬ್ಬನ) ಶಿಷ್ಯನಾಗಿರು; ಪಾದತಲದಲ್ಲಿ – ಕೂರು, ಕುಳಿತು ಕಲಿ.
  3. sit at home ಮನೆಯಲ್ಲಿ (ತೆಪ್ಪಗೆ) ಕುಳಿತುಕೊ; ನಿಷ್ಕ್ರಿಯನಾಗಿರು; ಏನೂ ಕೆಲಸ ಮಾಡದಿರು; ಸೋಮಾರಿಯಾಗಿರು ಯಾ ಯಾವ ಕೆಲಸವೂ ಉದ್ಯೋಗವೂ ಇಲ್ಲದಿರು.
  4. sit back ಪ್ರಯತ್ನಗಳನ್ನು ಹಗುರ ಮಾಡು; ಪ್ರಯತ್ನಗಳ ವೇಗವನ್ನು ಕಡಿಮೆ ಮಾಡು: be sitting pretty ನೆಮ್ಮದಿಯಿಂದ, ಹಾಯಾಗಿ ಯಾ ಅನುಕೂಲಕರವಾದ ಪರಿಸ್ಥಿತಿಯಲ್ಲಿ ಇರು.
  5. sit by (ನಡುವೆ ಪ್ರವೇಶಿಸದೆ, ಜಗಳ, ಅನ್ಯಾಯ, ಮೊದಲಾದವನ್ನು) ನೋಡುತ್ತ ಕುಳಿತಿರು; ತಟಸ್ಥನಾಗಿರು.
  6. sit down
    1. (ಸ್ವಲ್ಪ ಹೊತ್ತು ನಿಂತಾದ ಮೇಲೆ) ಕುಳಿತುಕೊ.
    2. ಕೂರಿಸು: sit them down ಅವರನ್ನು ಕೂರಿಸು.
    3. (ಆತ್ಮಾರ್ಥಕ) ಕುಳಿತುಕೊ: sit yourself down (ನೀನು) ಕುಳಿತುಕೊ.
    4. (ಸೈನ್ಯದ ವಿಷಯದಲ್ಲಿ) ಮುತ್ತಿಗೆಗಾಗಿ ಸುತ್ತಲೂ ಬೀಡು ಬಿಡು.
  7. sit down under (ಅಪಮಾನ ಮೊದಲಾದವುಗಳನ್ನು) ತೆಪ್ಪನೆ ಸಹಿಸಿಕೊ; ಸಹಿಸಿಕೊಂಡು ಸುಮ್ಮನೆ ಕೂರು.
  8. sit heavy on the stomach (ಆಹಾರದ ವಿಷಯದಲ್ಲಿ) ಹೊಟ್ಟೆಯಲ್ಲಿ ಭಾರವಾಗಿ ಕೂತಿದೆ; ಸುಲಭವಾಗಿ ಅರಗದೆ ಇದೆ.
  9. sit ill (awkwardly etc.) on a person (ಯಾವುದೇ ವ್ಯಕ್ತಿಗೆ) ಒಪ್ಪದಿರು; ಶೋಭಿಸದಿರು; ವಿಕಾರವಾಗಿ ಕಾಣು: his new dignities sit awkwardly on him ಅವನ ಹೊಸ ಘನತೆಗೌರವಗಳು ಅವನಿಗೆ ವಿಕಾರವಾಗಿ ಕಾಣುತ್ತವೆ.
  10. sit in
    1. (ಕಾರ್ಮಿಕರು, ವಿದ್ಯಾರ್ಥಿಗಳು, ಮೊದಲಾದವರ ವಿಷಯದಲ್ಲಿ) ಧರಣಿ ಕುಳಿತುಕೊ; (ಯಾವುದೇ ಸಂಸ್ಥೆಯ ಕಟ್ಟಡವನ್ನು ಯಾ ಅದರ ಒಂದು ಭಾಗವನ್ನು, ಆಕ್ರಮಿಸಿಕೊಂಡು ತಮ್ಮ ಗೋಳನ್ನೋ ದೂರನ್ನೋ ಪರಿಶೀಲಿಸಿ ಇತ್ಯರ್ಥಪಡಿಸುವವರೆಗೂ ಯಾ ತಮ್ಮನ್ನೇ ಅಲ್ಲಿಂದ ಹೊರ ದೂಡುವವರೆಗೂ ಅಲ್ಲೇ) ಕುಳಿತು, ಇದ್ದು – ಪ್ರತಿಭಟಿಸು, ಪ್ರತಿಭಟನಾತ್ಮಕ ಪ್ರದರ್ಶನ ನಡೆಸು.
    2. ಪ್ರತಿಭಟನೆ ತೋರಿಸಲು ಒಂದು ಸ್ಥಳವನ್ನು ಆಕ್ರಮಿಸಿ ಕೂರು.
  11. sit in for (ಒಂದರ) ಸ್ಥಾನ ವಹಿಸು; ಜಾಗ ತೆಗೆದುಕೊ; (ಒಂದಕ್ಕೆ) ಪರ್ಯಾಯವಾಗಿರು, ಬದಲಿಯಾಗಿ ವರ್ತಿಸು, ಕಾರ್ಯಮಾಡು.
  12. sit in judgement (ಇತರರ ಮೇಲೆ) ವಿಮರ್ಶೆಗೆ ಕೂರು; (ಇತರರನ್ನು, ಇತರರ ಗುಣದೋಷಗಳನ್ನು) ಟೀಕಿಸು; ದೂಷಿಸು; ಇತರರ ಯೋಗ್ಯತೆ, ನಡತೆ, ಮೊದಲಾದವುಗಳನ್ನು ನಿರ್ಣಯಿಸಿ ತೀರ್ಪು ಕೊಡುವ ಅಧಿಕಾರವನ್ನು ವಹಿಸು.
  13. sit in on (ಸಭೆ, ಸಭೆಯ ಕಾರ್ಯಕಲಾಪ, ಚರ್ಚೆ, ಮೊದಲಾದವುಗಳಲ್ಲಿ ಪಾತ್ರ ವಹಿಸದೆ) ಅತಿಥಿಯಾಗಿ, ಆಹ್ವಾನಿತನಾಗಿ – ಕುಳಿತು ನೋಡುತ್ತಿರು; ವೀಕ್ಷಕನಾಗಿ ವರ್ತಿಸು.
  14. sit loosely on a person
    1. (ಒಬ್ಬನ ತತ್ತ್ವಗಳು, ಧ್ಯೇಯಗಳು, ಮೊದಲಾದವುಗಳ ವಿಷಯದಲ್ಲಿ) (ಯಾವುದೇ ವ್ಯಕ್ತಿಯನ್ನು) (ಅಷ್ಟೇನೂ) ಕಟ್ಟಿ ಹಾಕದಿರು; ಬಂಧಿಸದಿರು: his principles sit loosely on him ಅವನ ತತ್ತ್ವಗಳು ಅವನನ್ನು ಅಷ್ಟೇನೂ ಬಂಧಿಸುವುದಿಲ್ಲ.
    2. (ಉಡುಪಿನ ವಿಷಯದಲ್ಲಿ) ಅಳ್ಳಕವಾಗಿರು; ಸಡಿಲವಾಗಿರು.
  15. sit on
    1. (ಏನೂ ಮಾಡದೆ ಯಾ ಕೆಲಸವೇ ಮಾಡದೆ) ಸುಮ್ಮನೆ ಕುಳಿತಿರು; ಕೆಲಸವನ್ನು, ನಿರ್ಣಯವನ್ನು ತಡಮಾಡು.
    2. (ನ್ಯಾಯದರ್ಶಿಮಂಡಲಿ, ಸಮಿತಿ, ನ್ಯಾಯಮೂರ್ತಿ, ಮೊದಲಾದವರ ವಿಷಯದಲ್ಲಿ) (i) ವಿಚಾರಣೆ, ಅಧಿವೇಶನ – ನಡೆಸು; ಮೊಕದ್ದಮೆ, ವ್ಯಾಜ್ಯ ಯಾ ಬೇರಾವುದೇ ವಿಷಯವನ್ನು – ವಿಚಾರಣೆ ಮಾಡು, ಪರಿಶೀಲಿಸು, ತನಿಖೆ ಮಾಡು. (ii) (ನ್ಯಾಯದರ್ಶಿ ಮಂಡಲಿ, ಸಮಿತಿ, ಮೊದಲಾದವುಗಳ) ಸದಸ್ಯನಾಗಿ ವರ್ತಿಸು. (iii) (ಆಡುಮಾತು) (ಯಾವುದೇ ವಿಷಯದಲ್ಲಿ ಯಾವ ಕ್ರಮವನ್ನೂ ಕೈಗೊಳ್ಳದೆ) ಸುಮ್ಮನೆ ಕುಳಿತಿರು; ವಿಳಂಬ ಮಾಡುತ್ತಿರು: Government has been sitting on the report ಸರ್ಕಾರವು ಆ ವರದಿಯ ಮೇಲೆ ಏನೂ ಕ್ರಮ ಕೈಗೊಳ್ಳದೆ ಸುಮ್ಮನೆ ಕೂತಿದೆ, ವಿಳಂಬ ಮಾಡುತ್ತಿದೆ.
    3. (ಆಡುಮಾತು) ತುಳಿದು ಹಾಕು; ದಮನ ಮಾಡು; ಅದುಮಿಡು; ಅಡಗಿಸು ಯಾ ಛೀಮಾರಿ, ವಾಗ್ದಂಡನೆ ಮಾಡು ಯಾ ತೇಜೋಭಂಗ ಮಾಡು: felt rather sat on ಸ್ವಲ್ಪ ತುಳಿದಿಟ್ಟಂತೆ ಅನಿಸಿತು.
  16. sit on one’s hands ಕೈಕಟ್ಟಿಕೊಂಡು ಕುಳಿತಿರು:
    1. ಅಗತ್ಯ ಕಾರ್ಯಕ್ರಮವನ್ನು, ಸೂಕ್ತ ಕ್ರಮವನ್ನು – ಕೈಗೊಳ್ಳದಿರು, ತೆಗೆದುಕೊಳ್ಳದಿರು.
    2. (ಮೆಚ್ಚಿಕೊಳ್ಳಬೇಕಾದುದನ್ನು) ಪ್ರಶಂಸಿಸದೆ, ಶ್ಲಾಘಿಸದೆ ಸುಮ್ಮನೆ ಕೂತಿರು.
  17. sit on the $^1$fence.
  18. sit out
    1. ಮನೆಯ ಹೊರಗೆ ಕೂರು, ಕುಳಿತಿರು.
    2. (ಯಾವುದೇ ಕಾರ್ಯಕ್ರಮದಲ್ಲಿ) (ಮುಖ್ಯವಾಗಿ ನೃತ್ಯ ಸರದಿಯೊಂದರಲ್ಲಿ) ಸೇರದಿರು; ಪಾತ್ರ ವಹಿಸದಿರು; ಹೊರಚ್ಚಾಗಿರು: he decided to sit out (of the programme) ಅವನು ಕಾರ್ಯಕ್ರಮದಲ್ಲಿ ಪಾತ್ರ ವಹಿಸದಿರಬೇಕೆಂದು ನಿಶ್ಚಯಿಸಿದ. she sat out the next dance ಆಕೆ ಮುಂದಿನ ನೃತ್ಯದಲ್ಲಿ ಸೇರಲಿಲ್ಲ.
    3. (ಯಾವುದೇ ಕಾರ್ಯಕ್ರಮಕ್ಕಾಗಿ ಬಂದಿದ್ದ) ಎಲ್ಲ ಅತಿಥಿಗಳಿಗಿಂತಲೂ ಹೆಚ್ಚು ಕಾಲ ಇರು.
    4. (ಯಾವುದೇ ಪ್ರದರ್ಶನ, ಸಹನೆಯನ್ನೇ ಪರೀಕ್ಷಿಸುವಂಥ ಅನುಭವ, ಮೊದಲಾದವುಗಳ ವಿಷಯದಲ್ಲಿ) ಕಡೆಯವರೆಗೂ ಸಹಿಸಿಕೊಂಡು ಇದ್ದುಬಿಡು.
  19. sit over
    1. (ಇಸ್ಪೀಟು) ಆಟ ಹೇಳಿರುವವನ ಎಡಕ್ಕೆ (ಅನುಕೂಲಕರ ಸ್ಥಾನದಲ್ಲಿ) ಇರು.
    2. (ಓದು ಮೊದಲಾದ ಯಾವುದೇ ವಿಷಯದಲ್ಲಿ) ಮಗ್ನನಾಗಿರು; ಮುಳುಗಿರು.
  20. sit s the wind there? ಗಾಳಿ ಆ ಕಡೆಗೆ ಬೀಸುತ್ತಿದೆಯೆ? ಪರಿಸ್ಥಿತಿ ಹಾಗಿದೆಯೆ?
  21. sit tight (ಆಡುಮಾತು)
    1. ತನ್ನ ಸ್ಥಳದಲ್ಲಿ ಭದ್ರವಾಗಿ ಕುಳಿತುಕೊ; ಕದಲದೆ ಕೂತುಕೊ.
    2. (ಮನಸ್ಸನ್ನು ದಿಕ್ಕಾಪಾಲಾಗಿ ಸೆಳೆಯುವ ವಿಷಯಗಳಿಗೆ ಮನ ಸೋಲದೆ) ಸ್ಥಿರವಾಗಿರು; ಅಚಲವಾಗಿರು; ವಿಚಲಿತವಾಗದಿರು.
  22. sit under
    1. (ಯಾರದೇ) ಶಿಷ್ಯನಾಗಿರು; ವಿದ್ಯಾರ್ಥಿಯಾಗಿರು.
    2. (ಇಸ್ಪೀಟು) ಆಟ ಹೇಳಿರುವವನ ಬಲಕ್ಕೆ (ಅನನುಕೂಲವಾದ ಸ್ಥಾನದಲ್ಲಿ) ಇರು.
  23. sit up
    1. (ಮಲಗಿದ್ದ ಸ್ಥಿತಿಯಿಂದ) ಎದ್ದು ಕೂರು.
    2. (ರೋಗಿಯ ಶುಶ್ರೂಷೆ ಮೊದಲಾದವನ್ನು ಮಾಡುತ್ತಾ) ಮಲಗುವ ಹೊತ್ತಿಗೆ ಮಲಗದೆ ಇರು, ಎದ್ದಿರು.
    3. (ಸೋಮಾರಿಯಾಗಿ ಒರಗಿಕೊಂಡಿರದೆ) ನೆಟ್ಟಗೆ ಕುಳಿತುಕೊ.
    4. ಆಸಕ್ತನಾಗು; ಎಚ್ಚರಗೊಳ್ಳು.
  24. sit up and take notice (ಆಡುಮಾತು) (ಯಾವುದೇ ವಿಷಯದಲ್ಲಿ) ಇದ್ದಕ್ಕಿದ್ದಂತೆ ಎಚ್ಚರಹೊಂದಿ ಆಸಕ್ತಿ ವಹಿಸು, ತಳೆ.
  25. sit upon = ಪದಗುಚ್ಛ\((15)\).
  26. sit well ಸವಾರಿಯಲ್ಲಿ ಸರಿಯಾಗಿ, ಭದ್ರವಾಗಿ ಕುಳಿತುಕೊ.
  27. sit well on a person (ಉಡಿಗೆ ತೊಡಿಗೆ, ಯಾವುದೇ ಗುಣ, ನಡವಳಿಕೆ, ಮೊದಲಾದವುಗಳ ವಿಷಯದಲ್ಲಿ), ಯಾವುದೇ ವ್ಯಕ್ತಿಗೆ – ಒಪ್ಪು; ಸರಿಯಾಗಿರು; ಸರಿ ಹೊಂದು; ಶೋಭಿಸು; ಭೂಷಣವಾಗಿರು: her dress sits well on her ಆಕೆಯ ಉಡಿಗೆ ತೊಡಿಗೆ ಆಕೆಗೆ ಚೆನ್ನಾಗಿ ಒಪ್ಪುತ್ತದೆ. her imperiousness sits well on her ಆಕೆಯ ದರ್ಪ ಆಕೆಗೆ ಚೆನ್ನಾಗಿ ಹೊಂದುತ್ತದೆ.