See also 2fence
1fence ಹೆನ್ಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಕತ್ತಿವರಿಸೆ; ಖಡ್ಗವಿದ್ಯೆ.
  2. (ಪ್ರಾಚೀನ ಪ್ರಯೋಗ) ಕೊತ್ತಳ; ಬುರುಜು.
  3. (ಪ್ರಾಚೀನ ಪ್ರಯೋಗ) ರಕ್ಷಣಾವಿಧಾನ.
  4. (ಹೊಲ ಮೊದಲಾದವಕ್ಕೆ ನುಗ್ಗಲಾಗದಂತೆ ಹಾಕುವ) ಬೇಲಿ, ಸುತ್ತುಗೋಡೆ, ಕಟಕಟೆ, ಆವರಣ, ಮೊದಲಾದವು.
  5. (ಅನೇಕ ಯಂತ್ರಗಳಲ್ಲಿ) ತಡೆ; ಕಾಪು ನಿಯಂತ್ರಕ.
  6. ಕಳವುಮಾಲನ್ನು ತೆಗೆದುಕೊಳ್ಳುವವನು ಯಾ ತೆಗೆದುಕೊಳ್ಳುವ ಮನೆ.
  7. (ಸಾಮಾನ್ಯವಾಗಿ ಬಹುವಚನದಲ್ಲಿ) ರಾಜಕೀಯ ಬೆಂಬಲ; ಚುನಾವಣೆಯಲ್ಲಿ ಬೆಂಬಲ ನೀಡುವ ರಾಜಕೀಯ ಹಿತಾಸಕ್ತಿಗಳು: building his fences for election ಚುನಾವಣೆಯಲ್ಲಿ ತನ್ನ ಬೆಂಬಲಕ್ಕೆ ರಾಜಕೀಯ ಹಿತಾಸಕ್ತಿಗಳನ್ನು ರಚಿಸುತ್ತಾ.
  8. (ಕುದುರೆ ಮೊದಲಾದವು) (ಹಾರಬೇಕಾದ) ಅಡ್ಡಿ; ತಡೆ.
ಪದಗುಚ್ಛ
  1. master of fence
    1. ಕತ್ತಿವರಿಸೆ ನಿಪುಣ.
    2. (ರೂಪಕವಾಗಿ) ಚರ್ಚಾಪಟು; ವಾದಕುಶಲ; ಚರ್ಚೆ, ವಾದಗಳಲ್ಲಿ ನಿಪುಣ.
  2. put horse at fence ಕುದುರೆಯನ್ನು ಬೇಲಿ ಹಾರಲು ಬಿಡು.
  3. sunk fence ಹಳ್ಳಬೇಲಿ; ಮೇಲಕ್ಕೆ ಕಾಣದಂತೆ ಒಳಗೆ ನೆಟ್ಟಿರುವ ಕಟಕಟೆ.
ನುಡಿಗಟ್ಟು
  1. come down on right side of fence ಗೆದ್ದವರ ಕಡೆ ಸೇರು; ಗೆದ್ದೆತ್ತಿನ ಬಾಲಹಿಡಿ; ವಿಜಯಪಕ್ಷ ಸೇರು.
  2. mending one’s fences
    1. ರಾಜಿ ಯಾ ಸಂಧಾನದ ಮೂಲಕ ತನ್ನ ಸ್ಥಾನವನ್ನು ಭದ್ರಮಾಡಿಕೊಳ್ಳುವುದು.
    2. ಒಬ್ಬನೊಡನೆ ಮತ್ತೆ ಸ್ನೇಹ ಬೆಳಸುವುದು.
  3. sit on the fence ಅಡ್ಡಗೋಡೆ ಮೇಲೆ ದೀಪ ಇಡು; ವ್ಯಾಜ್ಯದಲ್ಲಿ ಯಾವ ಪಕ್ಷಕ್ಕೂ ಸೇರದೆ ತಟಸ್ಥನಾಗಿರು; ಯಾವ ಕಡೆ ಇದ್ದರೆ ಲಾಭ ಎನ್ನುವುದನ್ನು ಕಂಡುಹಿಡಿಯಲು ಕಾಯು.