See also 2narrow  3narrow
1narrow ನ್ಯಾರೋ
ಗುಣವಾಚಕ
( ತರರೂಪ narrower, ತಮರೂಪ narrowest).
  1. ಕಡಮೆಯಗಲದ; ಅಗಲ ಕಡಮೆಯಾದ; (ಉದ್ದಕ್ಕೆ ತಕ್ಕಂತೆ) ಆಗಲ ಸಾಲದ.
  2. (ವ್ಯಾಕರಣ) (ಸ್ವರದ ವಿಷಯದಲ್ಲಿ) ನಾಲಗೆ ಕಿರುನಾಲಗೆಗಳನ್ನು ಬಿಗುಮಾಡಿ ಉಚ್ಚರಿಸುವ; ಸಂಕುಚಿತ; ಸಂವೃತ.
  3. ಕಿರಿದಾದ; ಇಕ್ಕಟ್ಟಾದ; ಕಿಷ್ಕಿಂದದ: within narrow bounds ಕಿರಿದಾದ ಪರಿಮಿತಿಯೊಳಗೆ.
  4. ಸಂಕುಚಿತ; ಪರಿಮಿತ: in the narrowest sense ತೀರಾ ಸಂಕುಚಿತ ಅರ್ಥದಲ್ಲಿ.
  5. ಕಡಿಮೆಯಾಗಿರುವ; ಅಲ್ಪ ಪ್ರಮಾಣದ; ಸ್ವಲ್ಪ ಅಂತರದ: a narrow majority ಅತ್ಯಲ್ಪ ಅಂತರದ ಬಹುಮತ.
  6. ದೃಷ್ಟಿವೈಶಾಲ್ಯವಿಲ್ಲದ.
  7. ಅನುಕಂಪವಿಲ್ಲದ.
  8. ಔದಾರ್ಯವಿಲ್ಲದ; ಸಣ್ಣ ಮನಸ್ಸಿನ; ಅನುದಾರ.
  9. ದುರಾಗ್ರಹದ.
  10. ಪ್ರತ್ಯೇಕತೆಯ.
  11. ಸ್ವಾರ್ಥದ; ಸ್ವವಿಚಾರ ಮಗ್ನ.
  12. ಕಣ್ಣಲ್ಲಿ ಕಣ್ಣಿಟ್ಟು ನೋಡುವ; ಸೂಕ್ಷ್ಮವಾದ; ಕಟ್ಟು ನಿಟ್ಟಾದ; ಕರಾರುವಾಕ್ಕಾದ: after a narrow examination ಸೂಕ್ಷ್ಮ ಪರೀಕ್ಷೆಯ ನಂತರ.
ಪದಗುಚ್ಛ
  1. a narrow escape ಸ್ವಲ್ಪದರಲ್ಲಿ ತಪ್ಪಿಸಿಕೊಂಡದ್ದು; ಕೂದಲೆಳೆಯಷ್ಟರಲ್ಲಿ ಪಾರಾದದ್ದು.
  2. narrow bed ಸಮಾಧಿ; ಗೋರಿ.
  3. narrow cell = ಪದಗುಚ್ಛ\((2)\).
  4. narrow house = ಪದಗುಚ್ಛ\((2)\).
  5. narrow circumstances ಬಡತನ; ದಾರಿದ್ರ.
  6. narrow squeak
    1. ಸ್ವಲ್ಪದರಲ್ಲಿ ತಪ್ಪಿಸಿಕೊಂಡದ್ದು; ಕೂದಲೆಳೆಯಲ್ಲಿ ಪಾರಾದದ್ದು.
    2. ಸಾಕಷ್ಟು ಅನುಕೂಲಗಳಿಲ್ಲದಿದ್ದರೂ ಪಡೆದ ಗೆಲವು, ಯಶಸ್ಸು; ಕೂದಲೆಳೆಯ ಗೆಲವು, ಜಯ.
  7. narrow way ಧರ್ಮಮಾರ್ಗ; ಸದಾಚಾರಮಾರ್ಗ.