See also 1log  3log
2log ಲಾಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ logged, ವರ್ತಮಾನ ಕೃದಂತ logging).
    1. ಹಡಗಿನ ದಿನಚರಿ ಪುಸ್ತಕದಲ್ಲಿ (ಹಡಗು ಸಂಚರಿಸುವ ದೂರ ಮೊದಲಾದವನ್ನು) ದಾಖಲಿಸು, ಬರೆ ಯಾ ಬರೆದಿಡು.
    2. (ಒಬ್ಬ ವ್ಯಕ್ತಿ ಯಾ ಒಂದು ಘಟನೆಯ ಬಗ್ಗೆ) ದಾಖಲೆ ಪುಸ್ತಕದಲ್ಲಿ, ಲಾಗ್‍ ಬುಕ್‍ನಲ್ಲಿ ಬರೆ, ದಾಖಲೆ ಮಾಡು.
    3. (ಹಡಗಿನ ವಿಷಯದಲ್ಲಿ) ವೇಗ ಮಾಪಕದಿಂದ ತಿಳಿದುಬರುವಷ್ಟು ದೂರ – ಸಾಗಿರು, ಹೋಗಿರು, ಯಾನ ಮಾಡಿರು.
    1. (ಮಾಹಿತಿಯನ್ನು) ಕ್ರಮಬದ್ಧವಾದ ದಾಖಲೆ ಪುಸ್ತಕದಲ್ಲಿ ಬರೆ, ದಾಖಲು ಮಾಡು, ದಾಖಲಿಸು.
    2. (ಈ ರೀತಿ ಮಾಹಿತಿಯನ್ನು ದಾಖಲಿಸಿ ಒಟ್ಟು ಸಮಯ, ಅನುಭವ, ಮೊದಲಾದವನ್ನು) ಗಳಿಸು; ಪಡೆ: logged 50 hours on the computer ಕಂಪ್ಯೂಟರ್‍ನಲ್ಲಿ ಮಾಹಿತಿ ದಾಖಲೆಯಲ್ಲಿ 50 ಗಂಟೆಗಳ ಅನುಭವ ಪಡೆದ.
  1. (ಮರವನ್ನು) ದಿಮ್ಮಿಗಳಾಗಿ – ಕಡಿ, ತುಂಡರಿಸು.
  2. (ನಾವಿಕನ ಹೆಸರನ್ನೂ ಅವನ ತಪ್ಪಿತವನ್ನೂ) ಹಡಗಿನ ದಿನಚರಿ ಪುಸ್ತಕದಲ್ಲಿ – ಗುರುತಿಸು, ದಾಖಲು ಮಾಡು, ಬರೆದಿಡು.
  3. (ಅಪರಾಧಿಗೆ) ದಂಡ, ಜುಲ್ಮಾನೆ – ವಿಧಿಸು, ಹಾಕು.
ಪದಗುಚ್ಛ
  1. log in = ಪದಗುಚ್ಛ \((2)\).
  2. log off ಕಂಪ್ಯೂಟರ್‍ ಬಳಕೆಯನ್ನು ಮುಗಿಸಲು ಬೇಕಾದ ವಿಧಾನಗಳನ್ನು ಅನುಸರಿಸು.
  3. log on ಕಂಪ್ಯೂಟರನ್ನು ಬಳಸಲಾರಂಭಿಸಲು (ಪೂರ್ವಭಾವಿ) ವಿಧಾನಗಳನ್ನು ಅನುಸರಿಸು.