See also 2log  3log
1log ಲಾಗ್‍
ನಾಮವಾಚಕ
  1. (ಕೆತ್ತಿ ಸಮಮಾಡದೆ ಬಿದ್ದಿರುವ, ಮುಖ್ಯವಾಗಿ ಸೌದೆಗಾಗಿ ಕಡಿದಿರುವ ಮರದ) ನಾಟ; ಮೋಪು; ಮರ; ಕೊರಡು; ದಿಂಡು; ದಿಮ್ಮಿ: in the log ಕೆತ್ತಿ ಸವರದಿರುವ; ಸಮ ಮಾಡದ; ಕೊರಡುಕೊರಡಾಗಿರುವ.
    1. ಹಡಗಿನ ವೇಗಮಾಪಕ; ಹಡಗಿನ ವೇಗವನ್ನಳೆಯಲು ಉರುಳೆಯೊಂದಕ್ಕೆ ಸುತ್ತಿದ ದಾರಕ್ಕೆ ಕಟ್ಟಿ ತೇಲಿಬಿಟ್ಟ ಹಗುರ ಮರದ ತುಂಡು, ತೇಲುವೆ: heave the log ಹಡಗಿನ ವೇಗಮಾಪಕವನ್ನು (ನೀರಿನ ಮೇಲಿನಿಂದ) ಎತ್ತಿಬಿಡು. throw the log ಹಡಗಿನ ವೇಗಮಾಪಕವನ್ನು (ನೀರಿನ ಮೇಲೆ) ಎಸೆ.
    2. ಅದೇ ಉದ್ದೇಶಕ್ಕಾಗಿ ಬಳಸುವ ಬೇರಾವುದೇ ಸಾಧನ.
  2. ಯಾನ ದಾಖಲೆ; (ವೇಗಮಾಪಕದಲ್ಲಿ ಸೂಚಿಸಿದಂತೆ ಹಡಗಿನ ಮುನ್ನಡೆಯೂ ಸೇರಿದಂತೆ) ಹಡಗಿನ ಯಾ ವಿಮಾನದ ಯಾನದಲ್ಲಿ ನಡೆಯುವ ಇಲ್ಲವೆ ಯಾನದ ಮೇಲೆ ಪ್ರಭಾವ ಬೀರುವ ಘಟನೆಗಳ ದಾಖಲೆ.
  3. ಕೆಲಸದ ಯಾ ಪ್ರಗತಿಯ (ವ್ಯವಸ್ಥಿತ) ದಾಖಲೆ.
  4. ಪ್ರಯಾಣಿಕನ, ಸಂಚಾರಿಯ, ಪ್ರವಾಸಿಯ – ದಿನಚರಿ ಪುಸ್ತಕ ಮೊದಲಾದವು.
  5. = logbook.
  6. (ಬ್ರಿಟಿಷ್‍ ಪ್ರಯೋಗ) ಹೊಲಿಗೆ ಕೋಷ್ಟಕ; ದರ್ಜಿ ಕೋಷ್ಟಕ; ಕೂಲಿ ದರ್ಜಿಯವನು ಮಾಡಿದ ಹೊಲಿಗೆ ಕೆಲಸದ ಕಾಲಾವಧಿಯ ಲೆಕ್ಕಮಾಡುವ ಕೋಷ್ಟಕ.
ಪದಗುಚ್ಛ
  1. fall like a log ಕೊರಡಿನಂತೆ ಬೀಳು; ಮರದ ದಿಮ್ಮಿಯಂತೆ ಜಡವಾಗಿ, ನಿಶ್ಚೇಷ್ಟವಾಗಿ – ಬಿದ್ದಿರು.
  2. float like a log ಕೊರಡಿನಂತೆ (ನಿಶ್ಚೇಷ್ಟವಾಗಿ ಯಾ ನಿಸ್ಸಹಾಯಕವಾಗಿ) ತೇಲು.
  3. lie like a log ಕೊರಡಿನಂತೆ, ದಿಮ್ಮಿಯಂತೆ (ಜಡವಾಗಿ, ನಿಸ್ಸಹಾಯಕವಾಗಿ) ಬಿದ್ದಿರು.
ನುಡಿಗಟ್ಟು
  1. King Log ನಿಷ್ಕ್ರಿಯ ದೊರೆ; ಅಲಸ ರಾಜ.
  2. roll my log and I’ll roll yours ‘ನನ್ನನ್ನು ನೀನು ಹೊಗಳು, ನಿನ್ನನ್ನು ನಾನು ಹೊಗಳುತ್ತೇನೆ’ ಎಂಬ ಮನೋವೃತ್ತಿ, ನಡವಳಿಕೆ; (ನೀತಿನಿಯಮವಿಲ್ಲದ ಸ್ವಾರ್ಥ ಸಾಧನೆಗಾಗಿ ಒಟ್ಟುಗೂಡಿರುವ, ತೀರ ಭಿನ್ನ ಭಿನ್ನ ಧ್ಯೇಯ ಧೋರಣೆಗಳುಳ್ಳ, ರಾಜಕೀಯ ಪಕ್ಷಗಳು, ಸಾಹಿತ್ಯ ವಿಮರ್ಶಕ, ಮೊದಲಾದವರು ಪರಸ್ಪರವಾಗಿ ಮಾಡುವ ಪ್ರಶಂಸೆ ಮೊದಲಾದ) ಅನ್ಯೋನ್ಯ ಸಹಾಯ; ಪರಸ್ಪರ ನೆರವು; ಅನ್ಯೋನ್ಯ ಬೆಂಬಲ.