See also 1kick  3kick
2kick ಕಿಕ್‍
ಸಕರ್ಮಕ ಕ್ರಿಯಾಪದ
  1. (ಕಾಲಿನಿಂದ) ಯಾವುದನ್ನೇ ಒದೆ; ಲತ್ತೆಕೊಡು: kicked him ಅವನನ್ನು ಒದೆದ.
  2. ಒದೆದೊದೆದು ಮುಂದೂಡು; ಒದೆಯುತ್ತಾ ತಳ್ಳು.
  3. (ಹುಟ್‍ಬಾಲ್‍) ಒದೆತದಿಂದ ಗೋಲ್‍ ಹೊಡೆ.
  4. (ಜೋರಾಗಿ ಮತ್ತು ತಿರಸ್ಕಾರದಿಂದ) ಒದ್ದು ದೂಡು: kick him out ಅವನನ್ನು ಒದ್ದೋಡಿಸು. kicked him downstairs ಅವನನ್ನು ಒದ್ದು ಮಹಡಿಯಿಂದ ಕೆಳಕ್ಕೆ ತಳ್ಳಿದೆ.
  5. (ಅಶಿಷ್ಟ) (ಅಭ್ಯಾಸ ಯಾ ಚಾಳಿಯನ್ನು) ತೊರೆ; ಬಿಡು; ತ್ಯಜಿಸು.
ಅಕರ್ಮಕ ಕ್ರಿಯಾಪದ
  1. ಒದೆ; ಲತ್ತೆಕೊಡು.
  2. (ಸೂಚನೆ, ಸಲಹೆ, ತನಗೆ ದೊರೆತ ಅನಾದರ, ಮೊದಲಾದವುಗಳ ವಿಷಯದಲ್ಲಿ) ಕಿರಿಕಿರಿ, ಅಸಮಾಧಾನ, ಅಸಂತೋಷ – ತೋರು: kick at the proposal ಸಲಹೆಯ ವಿಷಯದಲ್ಲಿ ಅಸಮಾಧಾನ ತೋರು. kick against the treatment ತನ್ನನ್ನು ನಡೆಸಿಕೊಂಡ, ತನ್ನೊಡನೆ ನಡೆದುಕೊಂಡ, ರೀತಿಯ ವಿಷಯದಲ್ಲಿ ಕಿರಿಕಿರಿ ಪಡು, ಅಸಂತೋಷ ಪಡು.
  3. (ಬೌಲ್‍ ಮಾಡಿದ ಕ್ರಿಕೆಟ್‍ ಚೆಂಡಿನ ವಿಷಯದಲ್ಲಿ) ನೆಲಕ್ಕೆ ತಗುಲಿ ಪುಟವೇಳು; ನೆಲದಿಂದ ನೆಗೆ.
ಪದಗುಚ್ಛ
  1. $^2$alive and kicking ಚಟುವಟಿಕೆಯಿಂದ ಕೂಡಿ.
  2. kick off
    1. (ಜೋಡು ಮೊದಲಾದವನ್ನು) ಕಾಲೊದರಿ ಬಿಸಾಡು.
    2. (ಚೆಂಡನ್ನು ಒದೆದು) ಹುಟ್‍ಬಾಲ್‍ ಆಟ ಪ್ರಾರಂಭಿಸು.
    3. (ಆಡುಮಾತು) (ಯಾವುದನ್ನೇ) ಆರಂಭಿಸು; ಶುರು ಮಾಡು.
ನುಡಿಗಟ್ಟು
  1. kick about (or around)
    1. (ಒಬ್ಬನನ್ನು) ಒರಟೊರಟಾಗಿ ಯಾ ತಿರಸ್ಕಾರದಿಂದ ಕಾಣು.
    2. (ವಿಷಯವನ್ನು) ಅಡ್ಡಾದಿಡ್ಡಿಯಾಗಿ ಚರ್ಚಿಸು; ಕ್ರಮವಿಲ್ಲದೆ, ವ್ಯವಸ್ಥೆಯಿಲ್ಲದೆ ಚರ್ಚಿಸು.
    3. (ಕೆಲಸವಿಲ್ಲದೆ) ಅಲ್ಲಿ ಇಲ್ಲಿ ಅಲೆದಾಡುತ್ತಿರು; ಇಲ್ಲಿಂದಲ್ಲಿಗೆ ಸುತ್ತುತ್ತಿರು.
    4. ಬಳಕೆಯಿಲ್ಲದಿರು; ಬಳಸದೆ ಬಿದ್ದಿರು.
    5. ಬೇಡದ್ದಾಗಿರು; ಅನಪೇಕ್ಷಿತವಾಗಿರು.
  2. kick against the pricks (ತನ್ನ ವರ್ತನೆಯಿಂದ ತನಗೇ ಕೆಡಕು ಉಂಟಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ನಿರರ್ಥಕವಾದ ಮೊಂಡುತನದಿಂದ) ಮೇಲಿನವರಿಗೆ ಎದುರುಬಿದ್ದು ತೊಂದರೆ ಹೆಚ್ಚಿಸಿಕೊ.
  3. kick a person upstairs (ಬಿರುದು, ಮೇಲಿನ ಪದವಿ, ಮೊದಲಾದವನ್ನು ಕೊಟ್ಟು) ಒಬ್ಬನನ್ನು ಏರಿಸಿ ಮೂಲೆಗೆ ಕೂರಿಸು; ಬಡ್ತಿ ಕೊಟ್ಟು ನಿರ್ವೀರ್ಯಗೊಳಿಸು.
  4. kick one’s $^1$heels ಕಾಯುವಂತಾಗು; ಕಾಯುತ್ತ ನಿಂತಿರು: do not keep me hear kicking my heels ನಾನು ಇಲ್ಲಿ ಸುಮ್ಮನೆ ಕಾಯುತ್ತಾ ನಿಂತಿರುವಂತೆ ಮಾಡಬೇಡ.
  5. kick over the $^3$traces ತುಂಟಾಟ ಮಾಡು; ಅವಿಧೇಯತೆ ತೋರಿಸು.
  6. kick the $^1$bucket (ಅಶಿಷ್ಟ) ಕಂತೆ ಒಗೆ; ಸಾಯು.
  7. kick up.
  8. kick up a fuss. = ನುಡಿಗಟ್ಟು \((9)\).
  9. kick up dust
    1. ಧೂಳೆಬ್ಬಿಸು.
    2. ರಂಪ ಮಾಡು; ಗಲಾಟೆ, ಗೊಂದಲ ಎಬ್ಬಿಸು.
  10. kick up its heels (ಕುದುರೆಯ ವಿಷಯದಲ್ಲಿ) ಕ್ರೀಡೆಯಲ್ಲಿ ಯಾ ಚೇಷ್ಟೆಯಲ್ಲಿ ಹಿಂಗಾಲೆತ್ತಿ ಒಗೆ.