See also 2kick  3kick
1kick ಕಿಕ್‍
ನಾಮವಾಚಕ
  1. ಒದೆ; ಒದೆತ; ಲತ್ತೆ; ಒದೆಯುವುದು ಯ ಒದೆಯುವ ಪ್ರವೃತ್ತಿ.
  2. (ಆಡುಮಾತು)
    1. ಚೇತರಿಕೆ ಶಕ್ತಿ; ಪುನಶ್ಚೈತನ್ಯಬಲ; ದುಃಖ, ಆಘಾತ, ನಷ್ಟ, ಮೊದಲಾದವುಗಳಿಂದ ಚೇತರಿಸಿಕೊಂಡು ಮತ್ತೆ ಮೊದಲಿನಂತಾಗುವ ಶಕ್ತಿ: no kick left ಚೇತರಿಸಿಕೊಳ್ಳುವ ಶಕ್ತಿ ಉಳಿದಿಲ್ಲ.
    2. ಶಕ್ತಿ; ಜೋರು; ಸತ್ತ್ವ.
    3. ಚುರುಕು; ತೀವ್ರತೆ; ತೀವ್ರವಾಗಿ ಉತ್ತೇಜಿಸುವ ಗುಣ, ಶಕ್ತಿ: this whisky has quite a kick ಈ ವಿಸ್ಕಿಗೆ ಒಳ್ಳೆಯ ಚುರುಕು(ಗೊಳಿಸುವ ಶಕ್ತಿ) ಇದೆ.
    4. ಆಕ್ಷೇಪ ಯಾ ಆಕ್ಷೇಪಣೆ.
    5. ರೋಮಾಂಚಕ ಆನಂದ ಯಾ ಆಹ್ಲಾದ: did it for its kicks ಅದರ ರೋಮಾಂಚಕ ಆಹ್ಲಾದಕ್ಕಾಗಿ ಮಾಡಿದ.
    6. ತಾತ್ಕಾಲಿಕ ಆಸಕ್ತಿ ಯಾ ಉತ್ಸಾಹ; ಗಳಿಗೆಯ ಹುರುಪು, ಉಮೇದು: on a health-food kick ಆರೋಗ್ಯಕರ ಆಹಾರದ ಗಳಿಗೆಯ ಹುರುಪಿನಲ್ಲಿ.
  3. ಬಂದೂಕದ – ಹಿಂಬಡಿತ, ಹಿನ್ನೆಗೆತ, ಹಿಂದೊದೆತ; ಬಂದೂಕು ಹಾರುವಾಗ ಅದು ಹಿಂದಕ್ಕೆ ಒದೆಯುವುದು.
  4. (ಬ್ರಿಟಿಷ್‍ ಪ್ರಯೋಗ) (ಹುಟ್‍ಬಾಲ್‍ ಆಟ)
    1. ಒದೆಗಾರ; (ಚೆಂಡನ್ನು) ಒದೆಯುವವನು: good kick ಒಳ್ಳೆಯ ಒದೆಗಾರ. bad kick ಕೆಟ್ಟ ಯಾ ಅಸಮರ್ಥ ಒದೆಗಾರ.
    2. ಒದೆತ; ಚೆಂಡನ್ನು ಒದೆಯುವುದು ಯಾ ಒದೆಯುವ ಒಂದು ಅವಕಾಶ.
    3. ಒದ್ದ ಚೆಂಡು.
    4. ಒದ್ದ ದೂರ; ಒದ್ದ ಚೆಂಡು ಕ್ರಮಿಸಿದ ದೂರ.
    5. ಒದೆತ; ಒದೆಯುವ – ರೀತಿ, ವಿಧಾನ: place kick ಚೆಂಡನ್ನು ನೆಲದ ಮೇಲಿಟ್ಟು ಒದೆಯುವುದು.
ನುಡಿಗಟ್ಟು
  1. kick in the pants (or teeth) (ಆಡುಮಾತು) ಅವಮಾನಕರ – ಹಿನ್ನಡೆ, ವೈಫಲ್ಯ.
  2. more kicks than halfpence ಕಾಸಿಗಿಂತ ಹೆಚ್ಚಿನ ಕಿರುಕುಳ; ಕಾಸಿಗಿಂತ ಹೆಚ್ಚಿನ ಕಾಟ; ದಯೆಗಿಂತ ಹೆಚ್ಚಿನ ದೊಣ್ಣೆಯೇಟು; ಕರುಣೆಗಿಂತ ಹೆಚ್ಚಿನ ಕಾಠಿನ್ಯ ಯಾ ಕ್ರೌರ್ಯ; ದಯೆಗಿಂತ ಹೆಚ್ಚಿನ ನಿಷ್ಠುರತೆ.