See also 2half  3half
1half ಹಾಹ್‍
ನಾಮವಾಚಕ
(ಬಹುವಚನ halves ಉಚ್ಚಾರಣೆ ಹಾವ್ಸ್‍).
  1. ಅರೆ; ಅಡ್ಡ; ಅರ್ಧ; ವಿಭಾಗಿಸಿದ ಒಂದು ವಸ್ತುವಿನ ಎರಡೂ ಸಮವಾದ ಯಾ ಅನುರೂಪವಾದ ಭಾಗಗಳಲ್ಲೊಂದು: the half of 10 is 5 ಹತ್ತರ ಅರ್ಧ ಐದು. your half is bigger than mine ನಿನ್ನ (ಭಾಗದ) ಅರ್ಧ ನನ್ನದಕ್ಕಿಂತ ದೊಡ್ಡದು.
  2. (ಆಡುಮಾತು) ಅರೆ; ಅರ್ಧ:
    1. ಅರ್ಧ ಪೈಂಟು (pint).
    2. (ಹುಟ್‍ ಬಾಲ್‍ ಮೊದಲಾದವುಗಳಲ್ಲಿ) ಹಾಹ್‍ಬ್ಯಾಕ್‍.
    3. ಅರ್ಧರಜ: ಅರೆರಜ; ಅರೆದಿನದ ರಜ.
  3. (ಬ್ರಿಟಿಷ್‍ ಪ್ರಯೋಗ) (ಶಾಲೆಯ) ಅವಧಿ; ಟರ್ಮು; ವರ್ಷದ ಎರಡು ಅರ್ಧ ಭಾಗಗಳಲ್ಲಿ ಒಂದು.
  4. ಹುಟ್‍ಬಾಲ್‍ ಮೊದಲಾದ ಕ್ರೀಡೆಗಳಲ್ಲಿ ಪಂದ್ಯದ ಒಂದರ್ಧ; ಅರೆಗಾಲದ ಆಟ; ಅರ್ಧ ಕಾಲದ ಆಟ.
  5. (ಗಾಲ್‍ ಆಟದಲ್ಲಿ) ಸಮಬದ್ದು; (ಆಟಗಾರರು) ಸರಿಸಮನಾದ ಹೊಡೆತಗಳಲ್ಲಿ ತಲುಪಿದ ಬದ್ದು ಯಾ ಬದ್ದಿನ ಸ್ಥಿತಿ.
  6. ಅರೆ ಟಿಕೆಟ್ಟು; ಅರ್ಧ (ಬೆಲೆಯ) ಟಿಕೆಟ್ಟು.
ನುಡಿಗಟ್ಟು
  1. and a half (ಆಡುಮಾತು) ಅಸಾಧಾರಣವಾದದದ್ದು; ತುಂಬ ಉತ್ತಮವಾದ್ದ: that was a game and a half ಅದು ತುಂಬ ಉತ್ತಮವಾದ ಆಟವಾಗಿತ್ತು.
  2. $^1$better half.
  3. cry halves ಸಮಪಾಲನ್ನು (ಹಕ್ಕಾಗಿ) ಕೇಳು.
  4. do a thing by halves ಅರೆಗೆಲಸಮಾಡು; ಅರೆಕೊರೆಯಾಗಿ, ಅಸಮರ್ಪಕವಾಗಿ ಮಾಡು; ಅರ್ಧಮರ್ಧ ಮಾಡು.
  5. go half and half (ವ್ಯಕ್ತಿಯೊಡನೆ ವಸ್ತುವನ್ನು) ಸಮ ಸಮನಾಗಿ ಹಂಚಿಕೊ; ಸರಿಸಮನಾಗಿ ಪಾಲು ಮಾಡಿಕೊ.
  6. go half (with person in thing) = ನುಡಿಗಟ್ಟು \((5)\).
  7. how the other half lives ಇತರ ಜನರು ಬದುಕುವ ರೀತಿ; ಇತರ ಜನರ ಜೀವನ ವಿಧಾನ.
  8. the half of it (ಸಾಮಾನ್ಯವಾಗಿ ನಿಷೇಧವಾಚಕದೊಡನೆ ಪ್ರಯೋಗ) ಹೆಚ್ಚು ಮುಖ್ಯವಾದ ಭಾಗ.
  9. too clever etcby half ಅತಿ ಜಾಣ, ಬುದ್ದಿವಂತ, ಮೊದಲಾದವು.