ಹೆಚ್ಚು; ಅಧಿಕ: waiting the better part of an hour ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯುತ್ತ.
ಉನ್ನತ; ಉತ್ತಮ; (ಯಾವುದೇ ಒಂದಕ್ಕಿಂತ) ಒಳ್ಳೆಯ; ಮೇಲಾದ; ಲೇಸಾದ; ಚೆನ್ನಾದ: better type of car (ಯಾವುದೋ ಒಂದಕ್ಕಿಂತ) ಮೇಲು ದರ್ಜೆಯ ಕಾರು.
ಆರೋಗ್ಯ ಉತ್ತಮಗೊಂಡ; ದೇಹಸ್ಥಿತಿ ಯಾ ಮನಃಸ್ಥಿತಿ ಸುಧಾರಿಸಿದ; ಕಾಯಿಲೆಯಿಂದ ಸ್ವಲ್ಪ ಯಾ ಪೂರ್ತಿ ಚೇತರಿಸಿಕೊಂಡ; (ರೋಗ) ಸ್ವಲ್ಪ ಯಾ ಪೂರ್ತಿ ವಾಸಿಯಾದ: the patient is better to-day ರೋಗಿ ಇವತ್ತು ವಾಸಿ.
ಪದಗುಚ್ಛ
better part ಹೆಚ್ಚು ಪಾಲು; ಅಧಿಕಾಂಶ; ಬಹುಭಾಗ.
better than (ಸಂಖ್ಯೆ ಮೊದಲಾದವುಗಳಲ್ಲಿ) – ಇಂತ ಹೆಚ್ಚಿನ, ಅಧಿಕ.
for better (or) for worse (ಪರಿಣಾಮ) ಏನಾದರೂ ಆಗಿಕೊಂಡು ಹೋಗಲಿ; ಎನೇ ಆಗಲಿ; ಯಾವುದೇ ಸ್ಥಿತಿಯಲ್ಲೂ; ಒಳ್ಳೆಯದೇ ಆಗಲಿ ಕೆಟ್ಟದ್ದೇ ಆಗಲಿ (ಒಪ್ಪಿಕೊಂಡು).
no better than ವಾಸ್ತವವಾಗಿ ಅದೇ; ಅಷ್ಟೇನು ವ್ಯತ್ಯಾಸವಿರದೆ; ಅದಕ್ಕಿಂತ ಉತ್ತಮವಾಗಿರದೆ; ಹೆಚ್ಚು ಕಡಮೆ ಒಂದೇ ಆಗಿ: he’s no better than a beggar ಅವನು ಹೆಚ್ಚು ಕಡಮೆ ಭಿಕ್ಷುಕನೇ (ಅವನು ನೋಡುವುದಕ್ಕೆ ಅನುಕೂಲಸ್ಥನ ಹಾಗಿದ್ದರೂ ನಿಜವಾಗಿ ಅವನು ಭಿಕ್ಷುಕನೇ). no better than she should be ಅಯೋಗ್ಯಳಾಗಿ; ನೀತಿಗೆಟ್ಟು; ನಡತೆಗೆಟ್ಟು.