See also 1dot  3dot
2dot ಡಾಟ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ dotting ಭೂತರೂಪ ಮತ್ತು ಭೂತಕೃದಂತ dotted).
  1. ಚುಕ್ಕೆ ಇಡು; ಚುಕ್ಕೆ ಹಾಕು; ಬೊಟ್ಟಿಡು.
  2. (i ಮೊದಲಾದ ಅಕ್ಷರದ ಮೇಲೆ) ಚುಕ್ಕೆಹಾಕು.
  3. ಚುಕ್ಕೆಚುಕ್ಕೆ ಮಾಡು; ಚುಕ್ಕಿಗಳನಿಟ್ಟಂತೆ ವೈವಿಧ್ಯ ಉಂಟುಮಾಡು: sea dotted with ships ಹಡಗುಗಳಿಂದ ಚುಕ್ಕೆಚುಕ್ಕೆಯಾಗಿರುವ ಸಮುದ್ರ.
  4. (ಚುಕ್ಕೆ ಹೊಯ್ದಂತೆ) ಹರಡು; ಚೆಲ್ಲು: a field dotted with cattle ದನ ಹರಡಿದ ಜಈನು.
  5. (ಅಶಿಷ್ಟ) ಹೊಡೆ; ಏಟುಕೊಡು: dotted him one in the eye ಅವನ ಕಣ್ಣಿಗೆ ಒಂದು ಏಟುಕೊಟ್ಟೆ.
  6. (ಸಂಗೀತ) ಸ್ವರ ಯಾ ವಿರಾಮ ಅರ್ಧಕಾಲದಷ್ಟು ಹೆಚ್ಚಾಗಿರುವುದನ್ನು ಸೂಚಿಸಲು ಚುಕ್ಕೆಹಾಕು.
ಪದಗುಚ್ಛ
  1. dot and carry (one) ಚುಕ್ಕೆ ಇಟ್ಟು ಮುಂದಕ್ಕೆ ಒಂದನ್ನು ತೆಗೆದುಕೊ (ಕೂಡುವ ಲೆಕ್ಕದಲ್ಲಿ ಮುಂದಿನ ಸಾಲಿಗೆ ಅಂಕಿಯನ್ನು ಸೇರಿಸಲು ನೆನಪಿಡುವಂತೆ ಮಕ್ಕಳಿಗೆ ಹೇಳಿಕೊಡುವ ಸೂತ್ರ).
  2. dotted line ಚುಕ್ಕೆಸಾಲು; ದಾಖಲೆ ಮೊದಲಾದವುಗಳ ಮೇಲೆ ಸಹಿ ಮಾಡಬೇಕಾದ ಸ್ಥಳವನ್ನು ಸೂಚಿಸಲು ಹಾಕಿರುವ ಚುಕ್ಕೆಗಳ ಸಾಲು.
ನುಡಿಗಟ್ಟು
  1. dot and go (one) (ಹಾಸ್ಯ ಪ್ರಯೋಗ)
    1. ನಾಮವಾಚಕ ಕುಂಟುಹೆಜ್ಜೆ.
    2. ಕುಂಟುಹೆಜ್ಜೆ ಇಡುವವ.
    3. ಗುಣವಾಚಕ ಕುಂಟುಹೆಜ್ಜೆಯ.
    4. ಕ್ರಿಯಾವಿಶೇಷಣ ಕುಂಟುತ್ತ; ಕುಂಟುನಡಗೆಯಲ್ಲಿ.
  2. dot the i’s and cross the t’s
    1. ವಿವರಗಳನ್ನು ಭರ್ತಿಮಾಡು.
    2. (ವಿಷಯವನ್ನು) ಸ್ಪಷ್ಟಪಡಿಸು; ನಿಷ್ಕೃಷ್ಟಗೊಳಿಸು.
    3. ವಿವರಗಳಲ್ಲಿ ಸರಿಯಾಗಿರು; ಕರಾರುವಾಕ್ಕಾಗಿರು; ನಿಷ್ಕೃಷ್ಟವಾಗಿರು.
  3. sign on the dotted line
    1. ವಿಧ್ಯುಕ್ತ – ಒಪ್ಪಿಗೆಕೊಡು, ಸಮ್ಮತಿ ನೀಡು.
    2. ತೆಪ್ಪಗೆ ಒಪ್ಪಿಕೊ; ಹಿಂದುಮುಂದು ನೋಡದೆ ಯಾ ಪ್ರತಿಭಟಿಸದೆ ಸಮ್ಮತಿಸು.
  4. dot and carry (one)
    1. ಕೂಡುವ ಲೆಕ್ಕದಲ್ಲಿ ಮುಂದಕ್ಕೆ ತೆಗೆದುಕೊಳ್ಳುವುದನ್ನು ನೆನಪಿನಲ್ಲಿಡಲು ಮಕ್ಕಳು ಹೇಳಿಕೊಳ್ಳುವ ಸೂತ್ರ.
    2. = ನುಡಿಗಟ್ಟು \((1)\).