See also 2cross  3cross
1cross ಕ್ರಾಸ್‍
ನಾಮವಾಚಕ
  1. ಕತ್ತರಿ ಗುರುತು.
  2. ಶಿಲುಬೆ; ಕ್ರೂಶೆ; ಸಿಲುಬೆ; ಹಿಂದೆ ತಪ್ಪಿತಸ್ಥರನ್ನು (ಸಾಮಾನ್ಯವಾಗಿ ಅಡ್ಡಮರ ಹಾಕಿದ) ಉದ್ದ ದಸಿಗೆ ಮೊಳೆ ಹೊಡೆದು ಬಂಧಿಸಿ ಸಾಯಿಸುತ್ತಿದ್ದ (ಕ್ರಿಸ್ತನನ್ನು ಸಾಯಿಸಲು ಬಳಸಿದಂಥ) ಸಲಕರಣೆ.
  3. ಏಸುವಿನ ಶಿಲುಬೆ; ಏಸು ಕೈಗೊಂಡ ವಿಮೋಚನಾ ಕಾರ್ಯದ ಅಂತಿಮ ಘಟ್ಟವಾಗಿ ಏಸುವನ್ನು ಶಿಲುಬೆಗೇರಿಸಿದ್ದು.
  4. ಶಿಲುಬೆಯಾಕೃತಿ; ಕ್ರೈಸ್ತಮತದ ಲಾಂಛನವಾದ ಶಿಲುಬೆ. Figure: crosses-4
  5. (ಕ್ರೈಸ್ತ ಕರ್ಮಾನುಷ್ಠಾನದಲ್ಲಿ) ಶಿಲುಬೆ ಮುದ್ರೆ; ಬಲಗೈಯಿಂದ ಮಾಡುವ ಶಿಲುಬೆ ಆಕಾರದ ಕರನ್ಯಾಸ.
  6. (ಕ್ರೈಸ್ತ ಮೆರವಣಿಗೆಗಳಲ್ಲಿ ಯಾ ಆರ್ಚ್‍ ಬಿಷಪ್ಪಿನ ಮುಂದುಗಡೆ ಹಿಡಿದುಕೊಂಡು ಹೋಗುವ) ಶಿಲುಬೆ–ಕೋಲು, ದಂಡ.
  7. (ಮುಖ್ಯವಾಗಿ ನಗರದ ಮಧ್ಯದಲ್ಲಿರುವ) ಶಿಲುಬೆಯಾಕಾರದ ಸ್ಮಾರಕ.
  8. (Cross) ಕ್ರೈಸ್ತ–ಮತ, ಧರ್ಮ.
  9. ಏಸುವಿಗಾಗಿ ಅನುಭವಿಸುವ ಕಷ್ಟ, ನೋವು.
  10. (ರೂಪಕವಾಗಿ) ಬಾಧೆ; ಕಷ್ಟ; ಕ್ಲೇಶ; ಸಂಕಟ; ದುಃಖ; ಕಾಟ; ಕಿರಿಕಿರಿ; ಉಪದ್ರವ.
  11. ಕಷ್ಟಕ್ಕೆ–ಮೂಲ, ಕಾರಣವಾದದ್ದು.
  12. ಶಿಲುಬೆ ಆಕಾರದ ವಸ್ತು ಯಾ ಗುರುತು.
  13. ಶಿಲುಬೆ ಪದಕ; ನೈಟ್‍ಹುಡ್‍ ಪದವಿಯ ಭೂಷಣವಾಗಿ ಧರಿಸುವ ಶಿಲುಬೆಯಾಕಾರದ ಪದಕ.
  14. ವ್ಯಕ್ತಿಗಳ ಪರಾಕ್ರಮಕ್ಕಾಗಿ ಕೊಡುವ, ಶಿಲುಬೆಯ ಆಕಾರದ ಪದಕ: Distinguished Service Cross, Military Cross, Distinguished Flying Cross ಮೊದಲಾದವು.
  15. (ಪ್ರಾಣಿ, ಸಸ್ಯಗಳ ವಿಷಯದಲ್ಲಿ) ತಳಿಗಳ–ಬೆರಕೆ, ಮಿಶ್ರಣ.
  16. ಬೆರಕೆ; ಮಿಶ್ರ–ತಳಿ, ಜಾತಿ; ಸಂಕರದಿಂದ ಹುಟ್ಟಿದ ಪ್ರಾಣಿ ಯಾ ಸಸ್ಯ.
  17. ಎರಡು ವಸ್ತುಗಳ ಮಿಶ್ರಣ ಯಾ ಸಮನ್ವಯ.
  18. ಅಡ್ಡ–ಕ್ರಮಣ, ಚಲನೆ; ಅಡ್ಡಹಾಯುವಿಕೆ; ರಂಗಮಂಟಪದಲ್ಲಿ ನಟ, ಹುಟ್‍ಬಾಲ್‍ ಆಟದಲ್ಲಿ ಆಟಗಾರ ಮೊದಲಾದವರು ರಂಗ, ಮೈದಾನ ಮೊದಲಾದವುಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದು, ಹಾಯುವುದು.
  19. (ಮುಷ್ಟಿಕಾಳಗದಲ್ಲಿ) ಮಲ್ಲನ ಮುಷ್ಟಿಯ ಅಡ್ಡಚಲನೆ.
  20. ಚೌಕ; ರಸ್ತೆಗಳು ಒಂದಕ್ಕೊಂದು ಅಡ್ಡಹಾಯುವ ಸ್ಥಳ.
  21. ಅಡ್ಡಿ; ವಿರೋಧ; ಪ್ರತಿಭಟನೆ.
  22. ಮಧ್ಯವರ್ತಿ ಗುಣದವನು; ಎರಡು ಗುಣಗಳಿಗೆ ಮಧ್ಯಸ್ಥವಾದ ಗುಣಗಳುಳ್ಳವನು.
  23. ಕತ್ತರಿಗುರುತು; ಕಾಟು; ಬರಹ ಬರದವರು ರುಜುವಿಗೆ ಬದಲು ಮಾಡುವ ಗುರುತು.
  24. ಶಿಲುಬೆ–ಕಡ್ಡಿ, ಕೋಲು; ಮೋಜಣಿಯವರು ಬಳಸುವ, ಶಿಲುಬೆಯಾಕಾರದ ಅಳತೆಯ ಕೋಲು.
  25. (ಅಶಿಷ್ಟ) ಮೋಸ; ವಂಚನೆ.
  26. (Cross) ಶಿಲುಬೆ (ನಕ್ಷತ್ರ) ಪುಂಜ; ನಾಲ್ಕು ಉಜ್ಜ್ವಲ ನಕ್ಷತ್ರಗಳು ಸ್ವಲ್ಪ ಹೆಚ್ಚು ಕಡಿಮೆ ಶಿಲುಬೆಯಾಕಾರದಲ್ಲಿ ದಕ್ಷಿಣ ದಿಕ್ಕಿನಲ್ಲಿರುವ ತ್ರಿಶಂಕು ನಕ್ಷತ್ರಪುಂಜ.
ಪದಗುಚ್ಛ
  1. Grand cross ಮಹಾಶಿಲುಬೆ; ನೈಟ್‍ವರ್ಗದ ಅತ್ಯುಚ್ಚ ಪದವಿಯ ಲಾಂಛನವಾದ ಶಿಲುಬೆ.
  2. Southern cross = 1cross(26).
  3. the Cross
    1. ಕ್ರಿಸ್ತನನ್ನು ಸಾಯಿಸಲು ಬಳಸಿದ ಸಿಲುಬೆ.
    2. ಕ್ರೈಸ್ತ–ಧರ್ಮ, ಮತ.
ನುಡಿಗಟ್ಟು
  1. bear one’s cross (ತನ್ನ ಪಾಲಿಗೆ ಒದಗಿದ) ಕಷ್ಟಗಳನ್ನು ತಾಳ್ಮೆಯಿಂದ ಸಹಿಸಿಕೊ.
  2. make one’s cross ಕತ್ತರಿಗುರುತು ಹಾಕು; ರುಜುವಿಗೆ ಬದಲಾಗಿ ಶಿಲುಬೆಯ ಗುರುತುಮಾಡು.
  3. on the cross
    1. ಮೂಲೆಯಿಂದ ಮೂಲೆಗೆ; ವಿಕರ್ಣವಾಗಿ; ಕರ್ಣರೇಖೆಯಾಗಿ.
    2. (ಅಶಿಷ್ಟ) ಮೋಸದಿಂದ; ಅಪ್ರಾಮಾಣಿಕತೆಯಿಂದ.