See also 1check  2check  4check  5check  6check
3check ಚೆಕ್‍
ಸಕರ್ಮಕ ಕ್ರಿಯಾಪದ
  1. (ಚದುರಂಗದಲ್ಲಿ) ಎದುರಾಳಿಯ ದೊರೆಗೆ ಶಹಾಕೊಡು.
  2. ಚಲನೆಯನ್ನು ಥಟ್ಟನೆ, ಚಕ್ಕನೆ–ನಿಲ್ಲಿಸು, ಸ್ಥಗಿತಗೊಳಿಸು.
  3. ತಡೆ; ನಿಲ್ಲಿಸು; ತಡೆ ಹಿಡಿ; ತಡೆಗಟ್ಟು.
  4. ಹದ್ದಿನಲ್ಲಿಡು; ನಿಯಂತ್ರಿಸು; ಅಂಕೆಯಲ್ಲಿಡು.
  5. (ಆಡುಮಾತು) (ಮೇಲಧಿಕಾರಿ) ತಪ್ಪು ಹಿಡಿ; ಆಕ್ಷೇಪಿಸು; ಗದರು; ಛೀಮಾರಿ ಹಾಕು.
  6. (ಪಟ್ಟಿ, ಲೆಕ್ಕ, ಅಂಕಿ, ನೌಕರರು ಮೊದಲಾದವನ್ನು) ತಾಳೆ ನೋಡು.
  7. (ಯಾವುದೇ ಒಂದರ ನಿಷ್ಕೃಷ್ಟತೆ, ಪರಿಶುದ್ಧತೆ ಯಾ ಪರಿಸ್ಥಿತಿಯನ್ನು) ತಪಾಸಣೆ ಮಾಡು; ಪರಿಶೀಲಿಸು; ಪರೀಕ್ಷಿಸು.
  8. ರೈಟ್‍ ಮಾರ್ಕು ಹಾಕು; ತಾಳೆಗುರುತು ಹಾಕು; ಸರಿಗುರುತು ಎಳೆ.
  9. ಚೌಕಳಿ ಮಾಡು; ಚೌಕಳಿ ಗುರುತು ಹಾಕು: to check fabric ಬಟ್ಟೆಗೆ ಚೌಕಳಿ ಮಾಡು.
  10. (ರಸೀತಿ ಪಡೆದು ಸಾಮಾನುಗಳನ್ನು) ಇಡು: check your hat and coat at the theatre ಚಿತ್ರಮಂದಿರದಲ್ಲಿ ನಿಮ್ಮ ಟೋಪಿ ಮತ್ತು ಕೋಟುಗಳನ್ನು ಇಡಿ.
ಅಕರ್ಮಕ ಕ್ರಿಯಾಪದ
  1. (ಬೇಟೆ ನಾಯಿಯ ವಿಷಯದಲ್ಲಿ) ವಾಸನೆ ತಪ್ಪಿ ಯಾ ವಾಸನೆ ಹಿಡಿಯಲು–ನಿಲ್ಲು, ನಿಂತುಬಿಡು.
  2. (ಅಮೆರಿಕನ್‍ ಪ್ರಯೋಗ) ತಾಳೆಯಾಗು; ಸರಿತೂಗು.
  3. (ಅಮೆರಿಕನ್‍ ಪ್ರಯೋಗ) ಪರಿಶೀಲಿಸು; ತನಿಖೆ ಮಾಡು; ಪರೀಕ್ಷಿಸು.
  4. (ಅಮೆರಿಕನ್‍ ಪ್ರಯೋಗ) ಒಪ್ಪಿಗೆ ಯಾ ಸಮ್ಮತಿಯನ್ನು ತಿಳಿಯಪಡಿಸು.
ನುಡಿಗಟ್ಟು
  1. check in
    1. (ಹೋಟೆಲ್‍ ಯಾ ಕಾರ್ಖಾನೆಗೆ) ಬರು; ಪ್ರವೇಶಿಸು; ತಲುಪು.
    2. ದಾಖಲಾಗು; ವಿಮಾನದಲ್ಲಿ ಹಾರುವುದಕ್ಕೆ ಮುಂಚೆ ವಿಮಾನ ನಿಲ್ದಾಣದಲ್ಲಿ, ಯಾ ಒಂದು ಸ್ಥಳ, ಸಮಾರಂಭ ಮೊದಲಾದವುಗಳಲ್ಲಿ ಆಗಮನ ಯಾ ಹಾಜರಾತಿಯನ್ನು, ಸಾಮಾನ್ಯವಾಗಿ ದಾಖಲೆ ಪುಸ್ತಕದಲ್ಲಿ ಸಹಿ ಮಾಡುವುದರ ಮೂಲಕ, ಸೂಚಿಸು.
    3. (ಹೋಟೆಲ್‍ ಯಾ ಕಾರ್ಖಾನೆಗೆ) ಬಂದದ್ದನ್ನು ದಾಖಲೆ ಮಾಡು; ಪ್ರವೇಶದಾಖಲೆ ಮಾಡು.
  2. check out (ಅಮೆರಿಕನ್‍ ಪ್ರಯೋಗ)
    1. (ಕಾರ್ಖಾನೆಯನ್ನು, ಹೋಟೆಲನ್ನು) ಬಿಡು.
    2. (ಕಾರ್ಖಾನೆ ಯಾ ಹೋಟೆಲನ್ನು) ಬಿಡುವುದನ್ನು ದಾಖಲೆ ಮಾಡು; ನಿರ್ಗಮನ ದಾಖಲೆ ಮಾಡು.
    3. (ಅಶಿಷ್ಟ) ಸಾಯು.
    4. ತಾಳೆ ನೋಡು; ತಾಳೆಗೆ ಒಳಗಾಗು.
  3. check off (ಅಮೆರಿಕನ್‍ ಪ್ರಯೋಗ) = 3check(8).
  4. check over through (ಅನುಕ್ರಮದಲ್ಲಿ ಬಾಬುಗಳನ್ನು) ಪರೀಕ್ಷಿಸು; ತನಿಖೆಮಾಡು; ತಾಳೆನೋಡು.