See also 1catch
2catch ಕ್ಯಾಚ್‍
ನಾಮವಾಚಕ
  1. ಹಿಡಿತ; ಗ್ರಹಣ; ಹಿಡಿಯುವುದು.
  2. ಹಿಡಿದ ಮೀನು ಮೊದಲಾದವುಗಳ–ಮೊತ್ತ, ಗುಡ್ಡೆ, ಪ್ರಮಾಣ.
  3. (ಕ್ರಿಕೆಟ್‍ ಮೊದಲಾದವಲ್ಲಿ) ಕ್ಯಾಚು:
    1. ಬುತ್ತಿ; ಚೆಂಡನ್ನು ಹಿಡಿಯುವುದು.
    2. ಚೆಂಡನ್ನು ಹಿಡಿಯುವ ಅವಕಾಶ.
  4. ಕೂಟ ಪ್ರಶ್ನೆ; ಸಿಕ್ಕಿಸುವ ಯಾ ಸಿಕ್ಕಿ ಬೀಳಿಸುವ ಸಮಸ್ಯೆ; ಬುದ್ಧಿವಂತಿಕೆಯ ಯಾ ಮೋಸ ಹೋಗುವಂತೆ ಮಾಡುವ ಪ್ರಶ್ನೆ: does the teacher ever include catch questions in examination papers? ಪರೀಕ್ಷೆಯ ಪ್ರಶ್ನಪತ್ರಿಕೆಗಳಲ್ಲಿ ಉಪಾಧ್ಯಾಯರು ಎಂದಾದರೂ ಸಿಕ್ಕಿ ಬೀಳಿಸುವ ಪ್ರಶ್ನೆಗಳನ್ನು ಸೇರಿಸಿದ್ದಾರೆಯೇ?
  5. ಮೋಸ; ವಂಚನೆ.
  6. ಹಠಾತ್‍ ಘಟನೆ; ಅನಿರೀಕ್ಷಿತ ಘಟನೆ.
  7. ಅನಿರೀಕ್ಷಿತ–ಕಷ್ಟ, ತೊಂದರೆ, ತೊಡರು.
  8. ಅಗುಳಿ; ಚಿಲಕ; ಕೊಕ್ಕೆ; ಕೊಂಡಿ.
  9. (ಹಣ ಮೊದಲಾದವುಗಳ ದೃಷ್ಟಿಯಿಂದ, ಮುಖ್ಯವಾಗಿ ಮದುವೆಗಾಗಿ) ಹಿಡಿದ ಯಾ ಹಿಡಿಯಲು ಯೋಗ್ಯವಾದ ವಸ್ತು, ವ್ಯಕ್ತಿ.
  10. (ಸಂಗೀತ) ಕೆಲವೊಮ್ಮೆ ಹಾಸ್ಯವನ್ನೋ ಶ್ಲೇಷೆಯನ್ನೋ ಸೂಚಿಸಲು ರಚಿಸಿದ, ಎರಡು ಯಾ ಹೆಚ್ಚು ಸಂಖ್ಯೆಯ ಸಮಾನ ಕಂಠದ ವ್ಯಕ್ತಿಗಳು ಹಾಡಲು ಅನುಕೂಲವಾಗುವಂಥ–ಪಲ್ಲವಿ, ಚರಣ.
ಪದಗುಚ್ಛ
  1. a good catch (ಕ್ರಿಕೆಟ್‍ ಮೊದಲಾದವುಗಳಲ್ಲಿ) ಒಳ್ಳೆಯ ಕ್ಯಾಚುಗಾರ; ಕ್ಯಾಚುಪಟು; ಚೆನ್ನಾಗಿ ಬುತ್ತಿ ಹಿಡಿಯುವ ಆಟಗಾರ; ಬುತ್ತಿಪಟು; ದಕ್ಷ ಬುತ್ತಿಗಾರ.
  2. a safe catch = ಪದಗುಚ್ಛ \((1)\).
  3. no catch
    1. ನಷ್ಟವ್ಯಾಪಾರ.
    2. ಹಿತವಲ್ಲದ, ಬೇಡದ–ಪ್ರಾಪ್ತಿ.