See also 2work
1work ವರ್ಕ್‍
ನಾಮವಾಚಕ
  1. ಕೆಲಸ; ಕ್ರಿಯೆ; ಗೈಮೆ; ಮಾಟ; ಕಾರ್ಯ; ಕರ್ಮ; ಒಂದು ಉದ್ದೇಶಸಾಧನೆಗಾಗಿ ಮಾನಸಿಕ ಯಾ ದೈಹಿಕ ಶಕ್ತಿಯ ಪ್ರಯೋಗ.
  2. (ಕೈಗೊಳ್ಳಬೇಕಾದ) ಕಾರ್ಯ; ಕೆಲಸ; ಉದ್ಯಮ.
  3. (ಕೈಗೊಂಡ ಕೆಲಸಕ್ಕೆ ಬೇಕಾದ) ಸಾಧನಸಾಮಗ್ರಿ; ಕಾರ್ಯೋಪಕರಣಗಳು; ಸಾಧನಸಲಕರಣೆಗಳು.
  4. ನಿರ್ದಿಷ್ಟಾವಧಿಯ ಕೆಲಸ: the work of a moment ಕ್ಷಣದ ಕೆಲಸ.
  5. ಕೃತಿ; ಕೆಲಸದಿಂದ ಮಾಡಿದ್ದು ಯಾ ಸಾಧಿಸಿದ್ದು; ಸಾಧನೆ.
  6. (ವ್ಯಕ್ತಿಯ) ಉದ್ಯೋಗ; ನೌಕರಿ; ಜೀವನೋಪಾಯ; ಮುಖ್ಯವಾಗಿ ಆದಾಯ ಗಳಿಸಲು ಅವಲಂಬಿಸಿದ ಕೆಲಸ: looked for work ಕೆಲಸಕ್ಕಾಗಿ, ಉದ್ಯೋಗಕ್ಕಾಗಿ ಹುಡುಕಿದ. is out of work ಕೆಲಸವಿಲ್ಲದೆ ಇದ್ದಾನೆ; ನಿರುದ್ಯೋಗಿಯಾಗಿದ್ದಾನೆ.
    1. ಸಾಹಿತ್ಯದ ಯಾ ಸಂಗೀತದ ಕೃತಿ, ಗ್ರಂಥ: a learned work ಪಾಂಡಿತ್ಯದ ಕೃತಿ.
    2. (ಬಹುವಚನದಲ್ಲಿ) ಲೇಖಕ, ಸಂಗೀತರಚನೆಕಾರ, ಮೊದಲಾದವರ ಒಟ್ಟು ಕೃತಿಗಳು, ಸಮಗ್ರಗ್ರಂಥಗಳು: the works of Plato ಪ್ಲೇಟೋನ (ಸಮಗ್ರ)ಕೃತಿಗಳು.
  7. ನಿರ್ದಿಷ್ಟ ಬಗೆಯ ಕಾರ್ಯಗಳು ಯಾ ಅನುಭವಗಳು: good work ಒಳ್ಳೆಯ ಕೆಲಸ, ಸತ್ಕಾರ್ಯ. thirsty work ಬಾಯಾರಿಸುವ ಕೆಲಸ; ಬಾಯಾರಿಕೆ ಉಂಟುಮಾಡುವ ಕೆಲಸ.
  8. (ಬಹುವಚನದಲ್ಲಿ) ಯಂತ್ರದ – ಕಾರ್ಯಾಂಗಗಳು, ಕಾರ್ಯಭಾಗಗಳು.
  9. (ಬಹುವಚನದಲ್ಲಿ) (ಆಡುಮಾತು) ಸಕಲ; ಸರ್ವ; ಸಿಗುವ ಯಾ ಬೇಕಾಗಿರುವ ಎಲ್ಲವೂ.
  10. (ಬಹುವಚನದಲ್ಲಿ) ಕಟ್ಟಡ ಕೆಲಸ ಯಾ ಮರಾಮತ್ತು; ಕಾಮಗಾರಿ (ಕೆಲಸ): road works ರಸ್ತೆ ಕೆಲಸ ಯಾ ರಸ್ತೆ ಕಾಮಗಾರಿ.
  11. (ಬಹುವಚನದಲ್ಲಿ, ಸಾಮಾನ್ಯವಾಗಿ ಏಕವಚನವಾಗಿ ಪ್ರಯೋಗ) ಕಾರ್ಯಾಲಯ; ಕಾರ್ಖಾನೆ; ತಯಾರಿಕೆಯ ಜಾಗ: iron works ಕಬ್ಬಿಣದ ಕಾರ್ಖಾನೆ. the works are closed next week ಕಾರ್ಖಾನೆ ಮುಂದಿನವಾರ ಮುಚ್ಚಿರುತ್ತದೆ.
  12. (ಸಾಮಾನ್ಯವಾಗಿ ಬಹುವಚನದಲ್ಲಿ) (ದೇವತಾಶಾಸ್ತ್ರ) ಪುಣ್ಯಕಾರ್ಯ; ಸತ್ಕರ್ಮ.
  13. (ಸಾಮಾನ್ಯವಾಗಿ ಬಹುವಚನದಲ್ಲಿ ಯಾ ಸಂಯುಕ್ತಪದದಲ್ಲಿ) ದುರ್ಗ; ಕೋಟೆ; ರಕ್ಷಣಾತ್ಮಕ ಕಟ್ಟಡ: the works are impregnable ಕೋಟೆಕೊತ್ತಲಗಳು ಅಭೇದ್ಯವಾಗಿವೆ. earthworks ಮಣ್ಣಿನ ಕೋಟೆ.
  14. (ಪ್ರಾಚೀನ ಪ್ರಯೋಗ) = needlework.
  15. (ಭೌತವಿಜ್ಞಾನ) ಕ್ರಿಯೆ; ಕ್ರಿಯಾಶಕ್ತಿ; ಪ್ರತಿರೋಧವನ್ನು ನಿಭಾಯಿಸುವುದರಲ್ಲಿನ ಯಾ ಅಣುವ್ಯತ್ಯಾಸ ಮಾಡುವುದರಲ್ಲಿನ ಶಕ್ತಿಪ್ರಯೋಗ: convert heat into work ಉಷ್ಣವನ್ನು ಕ್ರಿಯಾಶಕ್ತಿಯಾಗಿ ಪರಿವರ್ತಿಸು.
ಪದಗುಚ್ಛ
  1. a good day’s work ದಿನಪೂರ್ತಿಯ, ದಿನಭರ್ತಿಯ – ಕೆಲಸ.
  2. all work and no play (ಕ್ರೀಡೆ, ಮನರಂಜನೆ, ಮೊದಲಾದವುಗಳು ಒಂದೂ ಇಲ್ಲದ) ಬರೀ ದುಡಿತ; ಏಕತಾನದ ಕೆಲಸ.
  3. at work ಕೆಲಸದಲ್ಲಿ ತೊಡಗಿ; ಕಾರ್ಯನಿರತವಾಗಿ.
  4. a work of art ಕಲಾಕೃತಿ; ಒಳ್ಳೆಯ ವರ್ಣಚಿತ್ರ, ಪದ್ಯ, ಕಟ್ಟಡ, ಮೊದಲಾದವು.
  5. beaten works ಬಡಿದು ತಯಾರಿಸಿದ ಸಾಮಾನು.
  6. embossed works ಉಬಉ ಕೆತ್ತನೆ ಸಾಮಾನು.
  7. give a person the works (ಆಡುಮಾತು)
    1. ವ್ಯಕ್ತಿಗೆ ಎಲ್ಲವನ್ನೂ ಕೊಡು ಯಾ ತಿಳಿಸು.
    2. ವ್ಯಕ್ತಿಯನ್ನು ಗೋಳು ಹೊಯ್ದುಕೊ, ಚಿತ್ರಹಿಂಸೆ ಮಾಡು.
    3. ವ್ಯಕ್ತಿಯನ್ನು – ಕೊಲ್ಲು, ಸಾಯಿಸು.
  8. have one’s work cut out ಕಠಿಣವಾದ ಯಾ ದೀರ್ಘಕಾಲದ ಕೆಲಸ ಹೊಂದಿರು.
  9. internal work (ಒಂದು ವಸ್ತುವಿನ ಅಣುಗಳ ಮೇಲೆ ಪ್ರಯೋಗವಾಗುವ) ಆಂತರಿಕ ಕ್ರಿಯಾಶಕ್ತಿ.
  10. many hands make light work ಜನವಿದ್ದಷ್ಟೂ ಕೆಲಸ ಹಗುರ (ಆಗುತ್ತದೆ).
  11. public works ಸರ್ಕಾರದ ಪರವಾಗಿ ನಡಸುವ ಕಟ್ಟಡದ ಯಾ ಮರಾಮತ್ತು ಕಾಮಗಾರಿ ಕೆಲಸ.
  12. works council (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಕರ್ಮಚಾರಿ ಮಂಡಲಿ; ಮಾಲೀಕರೊಡನೆ ಮಾತುಕತೆ ನಡಸುವ ಕಾರ್ಮಿಕರ ಮುಖಂಡರು.
  13. works of supererogation.