See also 1work
2work ವರ್ಕ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ worked.).
ಸಕರ್ಮಕ ಕ್ರಿಯಾಪದ
  1. (ಯಂತ್ರ ಮೊದಲಾದವನ್ನು) ನಡಸು; ಕೆಲಸ ಮಾಡಿಸು; ಚಾಲೂ ಮಾಡು: it is worked by electricity ವಿದ್ಯುತ್ತಿನಿಂದ (ಯಂತ್ರ) ನಡೆಯುತ್ತದೆ.
  2. ಕೆಲಸ ಮಾಡಿಸು; ದುಡಿಸು; ಕಾರ್ಯಾಚರಣೆಯಲ್ಲಿರುವಂತೆ, ನಡೆಯುತ್ತಿರುವಂತೆ ಮಾಡು: this mine is no longer worked ಈ ಗಣಿ ಕೆಲಸ ಮಾಡುತ್ತಿಲ್ಲ.
  3. ನಡಸು; ನಿರ್ವಹಿಸು; ನಿಯಂತ್ರಿಸು: cannot work the machine ಯಂತ್ರವನ್ನು ನಡೆಸಲಾಗುವುದಿಲ್ಲ.
  4. (ಭೂಮಿಯನ್ನು) ಉಳು; ಕೃಷಿಮಾಡು; ಸಾಗುವಳಿ ಮಾಡು.
  5. ಉಂಟುಮಾಡು; ಸಾಧಿಸು; ಪರಿಣಾಮವಾಗಿ ತರು: worked miracles ಪವಾಡಗಳನ್ನು ಮಾಡಿದ. works wonders ಅದ್ಭುತವಾಗಿ ಕೆಲಸ ಮಾಡುತ್ತದೆ.
  6. ಬೇಕಾದ ಹದಕ್ಕೆ, ರೂಪಕ್ಕೆ, ಮಾಟಕ್ಕೆ – ತರು, ನಾದು, ಬಡಿ: work dough ಹಿಟ್ಟನ್ನು ನಾದು. work butter thoroughly ಬೆಣ್ಣೆಯನ್ನು ಒಳ್ಳೆಯ ಹದಕ್ಕೆ ಕಡೆ.
  7. ಕಸೂತಿ ಹಾಕು; ಕಸೂತಿ ಕೆಲಸ ಮಾಡು: she is working a shawl ಅವಳು ಶಾಲಿಗೆ ಕಸೂತಿ ಹಾಕುತ್ತಿದ್ದಾಳೆ.
  8. (ನಿರ್ದಿಷ್ಟ ರೀತಿಯಲ್ಲಿ, ಕಷ್ಟದಿಂದ ಯಾ ಕ್ರಮೇಣ) ನುಗ್ಗಿಸು; ಹೊಗಿಸು; ದಾರಿಮಾಡಿ ಕೊಂಡು ಹೋಗುವಂತೆ ಮಾಡು: worked our way through the crowd ಗುಂಪಿನ ನಡುವೆ ನುಗ್ಗಿ ದಾರಿಮಾಡಿಕೊಂಡು ಸಾಗಿದೆವು, ಹೋದೆವು. worked the peg into the hole ಬೆಣೆಯನ್ನು ತೂತಿನೊಳಕ್ಕೆ ಹೊಗಿಸಿದೆವು.
  9. ಕೃತಕವಾಗಿ ಉದ್ರೇಕಿಸು, ಕೆರಳಿಸು: worked themselves into a rage ಕೋಪ – ಕೆರಳಿಸಿಕೊಂಡರು, ಬರಿಸಿಕೊಂಡರು.
  10. (ಗಣಿತದ ಪ್ರಶ್ನೆಯನ್ನು) ಬಿಡಿಸು; ಬಗೆಹರಿಸು; ಉತ್ತರ ಕಂಡುಹಿಡಿ.
    1. (ಹಣಕ್ಕೆ ಬದಲಾಗಿ) ದುಡಿದು, ದುಡಿಮೆಯ ಮೂಲಕ – ಕೊಂಡುಕೊ, ಸಂಪಾದಿಸು: work one’s passage ತನ್ನ ಪ್ರಯಾಣದ ಖರ್ಚನ್ನು ಕೆಲಸದ ಮೂಲಕ ಸಲ್ಲಿಸಿದ.
    2. ವೆಚ್ಚದ ಹಣವನ್ನು ದುಡಿಮೆಯ ಮೂಲಕ – ಗಳಿಸು, ಪಡೆದುಕೊ: work one’s way through the university ವಿಶ್ವವಿದ್ಯಾನಿಲಯದ ಓದಿನ ಹಣವನ್ನು ದುಡಿದು ಗಳಿಸು.
ಅಕರ್ಮಕ ಕ್ರಿಯಾಪದ
  1. ಕೆಲಸ, ಕಾರ್ಯ – ಮಾಡು; ಶ್ರಮಿಸು; ದುಡಿ; ಶಾರೀರಕ ಯಾ ಮಾನಸಿಕ ಕೆಲಸದಲ್ಲಿ ನಿರತನಾಗು.
  2. (ಯಾವುದೇ) ಉದ್ಯೋಗದಲ್ಲಿ, ಕೆಲಸದಲ್ಲಿ ನೇಮಕ ಪಡೆದಿರು: works in industry ಕೈಗಾರಿಕೋದ್ಯಮದಲ್ಲಿ ಉದ್ಯೋಗ ಮಾಡುತ್ತಾನೆ. work as a secretary ಕಾರ್ಯದರ್ಶಿಯಾಗಿ ಕೆಲಸ ಮಾಡು.
  3. ಶ್ರಮಿಸು; ಪ್ರಯತ್ನಮಾಡು; ಕಾರ್ಯಾಚರಣೆ, ಚಳವಳಿ ನಡೆಸು: works for peace ಶಾಂತಿಗಾಗಿ ಶ್ರಮಿಸುತ್ತಾನೆ.
  4. (ವಿಶಿಷ್ಟ ಪದಾರ್ಥದಲ್ಲಿ) ಕೆಲಸ ಮಾಡು; ಕುಶಲಕರ್ಮಿಯಾಗಿರು: works in brass ಹಿತ್ತಾಳೆ ಕೆಲಸ ಮಾಡುತ್ತಾನೆ.
  5. (ಮುಖ್ಯವಾಗಿ ಪರಿಣಾಮಕಾರಿಯಾಗಿ) ಕೆಲಸ – ಮಾಡು, ನಡೆಸು: how does the machine work ? ಯಂತ್ರ ಹೇಗೆ ಕೆಲಸ ಮಾಡುತ್ತದೆ? your idea does not work ನಿನ್ನ ಅಭಿಪ್ರಾಯ ಕಾರ್ಯಕಾರಿಯಾಗಿಲ್ಲ.
  6. (ಯಂತ್ರಭಾಗದ ವಿಷಯದಲ್ಲಿ) ಓಡು; ಆಡು; ನಡೆ; ತಿರುಗು; ಕೆಲಸ ಮಾಡು: wheel works freely ಚಕ್ರ ಸರಾಗವಾಗಿ ತಿರುಗುತ್ತದೆ.
  7. ಕಷ್ಟದಿಂದ ಯಾ ನಿಧಾನವಾಗಿ – ಚಲಿಸು, ಸಾಗು, ಮುಂದುವರೆ: work upstream ನದಿಯ ಮೇಲುಮುಖವಾಗಿ ಹೋಗು.
  8. (ಸತತ ಚಲನೆಯಿಂದ) ಕ್ರಮೇಣ ಸಡಿಲ, ಅಳ್ಳಕ, ಮೊದಲಾದವು ಆಗು
  9. ಕ್ಷುಬ್ಧವಾಗು (ರೂಪಕವಾಗಿ ಸಹ): face worked violently ಮುಖ ತೀವ್ರವಾಗಿ ಪ್ರಕ್ಷುಬ್ಧವಾಯಿತು.
  10. (ನೌಕೆಯ ವಿಷಯದಲ್ಲಿ) ಗಾಳಿಗೆ ವಿರುದ್ಧವಾಗಿ, ಎದುರಾಗಿ – ಸಾಗು, ಹೋಗು.
ಪದಗುಚ್ಛ
  1. set to work
    1. ಕೆಲಸಕ್ಕೆ ಕೈಹಚ್ಚು, ತೊಡಗು; ಕೆಲಸ ಪ್ರಾರಂಭಿಸು.
    2. ಕೆಲಸಕ್ಕೆ ಹಚ್ಚು, ತೊಡಗಿಸು; ಕೆಲಸ ಪ್ರಾರಂಭ ಮಾಡುವಂತೆ ಮಾಡು.
  2. work an idea to death (ಯಾವುದಾದರೂ ವಿಚಾರ ಮೊದಲಾದವನ್ನು) ಅತಿಯಾಗಿ, ಸವಕಲಾಗುವಂತೆ ಬಳಸು.
  3. work away (or on) (ಬಿಡದೆ) ಕೆಲಸ – ಮಾಡುತ್ತಿರು, ಮುಂದುವರೆಸು.
  4. work in (ನಿದರ್ಶನ, ಸಂಗತಿ, ಮೊದಲಾದವನ್ನು) ಹೇಗೋ ಒಳಕ್ಕೆ ತೂರಿಸು; ಸ್ಥಳ ಮಾಡಿ, ಅವಕಾಶ ಕಲ್ಪಿಸಿ, ಒಳಕ್ಕೆ – ಹೆಣೆ, ನೇಯಿ, ಸೇರಿಸು.
  5. work one’s fingers to the $^1$bone.
  6. work one’s $^1$passage.
  7. work it (ಆಡುಮಾತು) ಸಾಧಿಸು; ಉಂಟುಮಾಡು; ಉದ್ದಿಷ್ಟ ಫಲಿತಾಂಶ ಪಡೆ.
  8. work off
    1. ಕೆಲಸ ಮಾಡಿ – ನಿವಾರಿಸಿಕೊ, ಪರಿಹರಿಸಿಕೊ, ತೀರಿಸಿಕೊ, ಕಳೆದುಕೊ, ಕಡಮೆ ಮಾಡಿಕೊ: works his bad temper on his servants ತನ್ನ ಕೋಪವನ್ನು ಆಳುಗಳ ಮೇಲೆ ತೀರಿಸಿಕೊಳ್ಳುತ್ತಾನೆ, ಆಳುಗಳ ಮೇಲೆ ಕೋಪ ತೋರಿಸಿ ನಿವಾರಿಸಿಕೊಳ್ಳುತ್ತಾನೆ. worked off his debt ದುಡಿದು ತನ್ನ ಸಾಲ ತೀರಿಸಿಕೊಂಡ. work off excess of weight ಅತಿಯಾದ ತೂಕವನ್ನು ಕಳೆದುಕೊ, ಕಡಮೆ ಮಾಡಿಕೊ.
    2. (ವಸ್ತುಗಳಿಗೆ ಗಿರಾಕಿ ಮೊದಲಾದವರನ್ನು ಹೊಂದಿಸಿ) ಮಾರಿಹಾಕು; ವಿಲೇವಾರಿ ಮಾಡು: worked off 3000 copies ಮೂರುಸಾವಿರ ಪ್ರತಿಗಳನ್ನು ಮಾರಿಹಾಕಿದ.
  9. work one’s will (ಆಡುಮಾತು) ತನ್ನ ಉದ್ದೇಶ ಸಾಧಿಸಿಕೊ, ಈಡೇರಿಸಿಕೊ.
  10. work out
    1. (ಗಣಿತದ) ಲೆಕ್ಕಮಾಡು; ಲೆಕ್ಕಕ್ಕೆ ಉತ್ತರ ಕಂಡುಹಿಡಿ; ಲೆಕ್ಕದ ಪ್ರಶ್ನೆ ಬಿಡಿಸು.
    2. ಮೊತ್ತ ಕಂಡುಹಿಡಿ; ಎಣಿಸು.
    3. ಮೊತ್ತ ಆಗು: the total works out at Rs. 2000 ಲೆಕ್ಕಾಚಾರದಲ್ಲಿ, ಮೊತ್ತದಲ್ಲಿ ಅದು 2000 ರೂಪಾಯಿಗಳಾಗುತ್ತದೆ.
    4. (ಲೆಕ್ಕದ ವಿಷಯದಲ್ಲಿ) ಮಾಡಲಾಗು; ಮಾಡಬರು; ನಿರ್ದಿಷ್ಟ ಫಲಿತಾಂಶ ನೀಡು: this sum will not work out ಈ ಲೆಕ್ಕವನ್ನು ಮಾಡಲಾಗುವುದಿಲ್ಲ.
    5. ವಿಶಿಷ್ಟ ಫಲಿತಾಂಶ ಹೊಂದಿರು: the plan worked out well ಯೋಜನೆ ಸಫಲವಾಯಿತು.
    6. ವಿವರಗಳನ್ನು ಅಣಿಗೊಳಿಸು; ಕೂಲಂಕಷವಾಗಿ ಯೋಜಿಸು: has worked out a scheme ಯೋಜನೆಯೊಂದನ್ನು ತಯಾರಿಸಿದ್ದಾನೆ.
    7. ಪ್ರಯತ್ನಪಟ್ಟು, ಕಷ್ಟಪಟ್ಟು – ಸಾಧಿಸು, ಗಳಿಸು, ಪಡೆ: worked out one’s salavation ಪ್ರಯತ್ನ ಮಾಡಿ ತನ್ನ ಮುಕ್ತಿ ಸಾಧಿಸಿಕೊಂಡ.
    8. ಕೆಲಸದಿಂದ – ಬರಿದಾಗು, ಖಾಲಿಯಾಗು: the mine is worked out ತೋಡಿತೋಡಿ ಗಣಿ ಖಾಲಿಯಾಗಿದೆ.
    9. ಕೆಲಸದಿಂದ – ಸುಸ್ತಾಗು, ಬಳಲು, ಆಯಾಸ ಹೊಂದು: the person is worked out ಅವನು ದುಡಿದು ಸುಸ್ತಾಗಿದ್ದಾನೆ.
    10. ದೈಹಿಕ ವ್ಯಾಯಾಮದಲ್ಲಿ ತೊಡಗು
  11. work over
    1. ಪೂರ್ತಿ, ಆದ್ಯಂತವಾಗಿ – ಪರೀಕ್ಷಿಸು, ತನಿಖೆ ಮಾಡು.
    2. (ಆಡುಮಾತು) ಕೈಮಾಡು; ಬಡಿ; ಚಚ್ಚು.
  12. work to rule (ಮುಖ್ಯವಾಗಿ ಕೈಗಾರಿಕಾ ಕ್ೇತ್ರದಲ್ಲಿ ಉತ್ಪನ್ನ ಮತ್ತು ದಕ್ಷತೆ ತಗ್ಗಿಸಲು ಪ್ರತಿಭಟನೆಯ ವಿಧಾನವಾಗಿ) ನಿಯಮಪ್ರಕಾರದಷ್ಟೇ, ನಿಯಮ ಪ್ರಕಾರದಷ್ಟು ಮಾತ್ರವೇ – ಕೆಲಸ ಮಾಡು.
  13. work up
    1. ಕ್ರಮೇಣ, ನಿಧಾನವಾಗಿ – ಸಮರ್ಥ ಸ್ಥಿತಿಗೆ ತರು.
    2. ಕ್ರಮೇಣ, ನಿಧಾನವಾಗಿ ಪರಮಾವಧಿಯ ಮಟ್ಟಕ್ಕೆ, ಸ್ಥಿತಿಗೆ – ಬರು, ಸಾಗು, ಸರಿ; ಕ್ರಮೇಣ – ಶಿಖರ ಮುಟ್ಟು, ಪರಾಕಾಷ್ಠೆ ತಲುಪು.
    3. ಕ್ರಮೇಣ ವಿಸ್ತಾರವಾಗಿ – ನಿರೂಪಿಸು, ವಿಸ್ತರಿಸು.
    4. ಕ್ರಮೇಣ (ವ್ಯಕ್ತಿ, ಭಾವ, ಭಾವನೆಗಳನ್ನು) ಎಬ್ಬಿಸು; ಉದ್ರೇಕಗೊಳಿಸು.
    5. (ಪರಿಕರ ಪದಾರ್ಥಗಳನ್ನು) ಚೆನ್ನಾಗಿ ಬೆರಸು; ಸಮ್ಮಿಶ್ರಮಾಡು; ಸಮ್ಮಿಳನಗೊಳಿಸು.
    6. (ವಿಷಯವನ್ನು) ವ್ಯಾಸಂಗಮಾಡು; ಓದು.
  14. work with a person ಒಬ್ಬನ ಜೊತೆ ಕೆಲಸ ಮಾಡು, ಸಹೋದ್ಯೋಗಿಯಾಗಿರು.
  15. yeast began to work up ಮಂಡ, ಕಿಣ್ವ – ಹುದುಗೇಳತೊಡಗಿತು.