See also 2view
1view ವ್ಯೂ
ನಾಮವಾಚಕ
  1. ನೋಟ; ವೀಕ್ಷಣ; ದರ್ಶನ; ಅವಲೋಕನ.
  2. (ನ್ಯಾಯಶಾಸ್ತ್ರ) (ನ್ಯಾಯದರ್ಶಿ ಮಂಡಲಿಯು ಮೊಕದ್ದಮೆಗೆ ಸಂಬಂಧಿಸಿದ ಸ್ಥಳ, ಆಸ್ತಿ, ಮೊದಲಾದವನ್ನು ಯಾ ಮೃತದೇಹವನ್ನು) ನೋಡುವುದು; ಪರಿಶೀಲನೆ; ಪರೀಕ್ಷಣ.
  3. ದೃಷ್ಟಿ; ನೋಟ; ನೋಟದ, ಕಣ್ಣಿನ – ವ್ಯಾಪ್ತಿ: in full view of the crowd ಗುಂಪಿನ ಕಣ್ಣೆದುರಿನಲ್ಲೇ. the bird came into view ಆ ಪಕ್ಷಿ ನೋಟದ ವ್ಯಾಪ್ತಿಗೆ ಬಂತು. the ship passed from our view ಆ ಹಡಗು ನಮ್ಮ ದೃಷ್ಟಿಯಿಂದ ಸರಿಯಿತು, ಕಣ್ಮರೆಯಾಯಿತು.
  4. ನೋಟ; ದೃಶ್ಯ; ನಿರ್ದಿಷ್ಟ ಸ್ಥಾನದಿಂದ ನೋಡಲ್ಪಟ್ಟದ್ದು: the house has a view of the sea ಆ ಮನೆಯಿಂದ ಸಮುದ್ರದ ನೋಟ ಸಿಗುತ್ತದೆ, ಸಮುದ್ರ ಕಾಣುತ್ತದೆ. a superb view ಅದ್ಭುತವಾದ ಒಂದು ನೋಟ, ಭವ್ಯದೃಶ್ಯ.
  5. ದೃಶ್ಯಚಿತ್ರ; ಯಾವುದೇ ವಸ್ತು ಮೊದಲಾದವುಗಳ ನೋಟವನ್ನು ಒಳಗೊಂಡಿರುವ ಚಿತ್ರ.
  6. ದೃಷ್ಟಿ; ಅಭಿಪ್ರಾಯ; ಭಾವನೆ; ಯಾವುದೇ ವಿಷಯವನ್ನು – ನೋಡುವ ಬಗೆ, ಕುರಿತ ಮನೋಭಾವ: he takes a different view ಅವನು ಬೇರೆ ಅಭಿಪ್ರಾಯವನ್ನು ತಳೆದಿದ್ದಾನೆ. his view is that we are aggressors ನಾವು ಆಕ್ರಮಣಕಾರರೆಂಬಉದು ಅವನ ಭಾವನೆ. that is his view of her conduct ಅವಳ ನಡವಳಿಕೆಯ ವಿಷಯದಲ್ಲಿ ಅವನ ದೃಷ್ಟಿ ಅದು. he holds extreme views (in politics etc. ) (ರಾಜಕೀಯ ಮೊದಲಾದವುಗಳಲ್ಲಿ) ಅವನು ತೀವ್ರಗಾಮಿ ಅಭಿಪ್ರಾಯಗಳನ್ನು ಹೊಂದಿದ್ದಾನೆ. took a favourable view of the matter ವಿಷಯದ ಬಗ್ಗೆ ಅನುಕೂಲಕರ ಅಭಿಪ್ರಾಯ ತಳೆದ.
  7. ಉದ್ದೇಶ; ಆಶಯ; ಎಣಿಕೆ: will this meet your views? ಇದು ನಿಮ್ಮ ಉದ್ದೇಶಗಳಿಗೆ ಸರಿಹೊಂದುತ್ತದೆಯೆ?
  8. ವೀಕ್ಷಣ; ಅವಲೋಕನ; ಪರೀಕ್ಷಣ; ಸಮೀಕ್ಷಣ; ಚಾಕ್ಷುಷ ಯಾ ಮಾನಸಿಕ ಸಮೀಕ್ಷೆ; ಕಣ್ಣಿನಿಂದ ಯಾ ಮಾನಸಿಕವಾಗಿ ಪರೀಕ್ಷಿಸುವುದು, ತನಿಖೆ ಮಾಡುವುದು.
  9. ವೀಕ್ಷಣ; ವೀಕ್ಷಣಾವಕಾಶ: a view of the exhibition ಪ್ರದರ್ಶನದ ವೀಕ್ಷಣೆ, ನೋಟ.
ಪದಗುಚ್ಛ
  1. have in view
    1. (ಯಾವುದನ್ನೇ) ಗುರಿಯನ್ನಾಗಿ, ಉದ್ದೇಶವನ್ನಾಗಿ ಹೊಂದಿರು.
    2. (ತೀರ್ಮಾನಿಸುವಾಗ, ಯಾವುದೇ ಅಂಶವನ್ನು) ಗಮನದಲ್ಲಿ, ದೃಷ್ಟಿಯಲ್ಲಿ – ಇಟ್ಟುಕೊಂಡಿರು.
  2. in view of
    1. ದೃಷ್ಟಿಪಥದಲ್ಲಿ ಯಾ ಪಥಕ್ಕೆ; ಕಣ್ಣಿಗೆ ಬೀಳುವ ಸ್ಥಾನದಲ್ಲಿ: we came in view of the church ಆ ಚರ್ಚು ಕಣ್ಣಿಗೆ ಬೀಳುವ ಸ್ಥಾನಕ್ಕೆ ಬಂದೆವು. he stood in view of the audience ಅವನು ಪ್ರೇಕ್ಷಕರ ದೃಷ್ಟಿಪಥದಲ್ಲಿ ನಿಂತ.
    2. ದೃಷ್ಟಿಯಿಂದ; ನೋಡಿದರೆ; ನೋಡಿದಲ್ಲಿ; ಗಮನಿಸಿದರೆ; ಪರಿಗಣಿಸಿದರೆ; ಕಾರಣದಿಂದ: in view of the recent developments, we do not think this step advisable ಇತ್ತೀಚಿನ ಘಟನೆಗಳನ್ನು ನೋಡಿದರೆ, ಪರಿಗಣಿಸಿದರೆ, ಈ ಹೆಜ್ಜೆ (ಕಾರ್ಯಕ್ರಮ) ವಿಹಿತವಾದದ್ದೆಂದು ನಮಗೆ ತೋರುವುದಿಲ್ಲ.
    3. (ಪ್ರಾಚೀನ ಪ್ರಯೋಗ) (ಮುಂದೆ ಆಗುವುದನ್ನು ನಿರೀಕ್ಷಿಸುತ್ತಾ ಅದಕ್ಕೆ) ಪೂರ್ವಭಾವಿಯಾಗಿ.
  3. on view ನೋಡುವುದಕ್ಕಾಗಿ, ಪರೀಕ್ಷೆಗಾಗಿ, ಪರಿಶೀಲನೆಗಾಗಿ, ಅವಲೋಕನಕ್ಕಾಗಿ – ಪ್ರದರ್ಶಿಸಿದ.
  4. private view (ಚಿತ್ರ ಪ್ರದರ್ಶನದ ವಿಷಯದಲ್ಲಿ) (ಸ್ನೇಹಿತರು, ವಿಮರ್ಶಕರು, ಮೊದಲಾದ) ಆಪ್ತವರ್ಗಕ್ಕೆ ಮಾತ್ರ ಪ್ರದರ್ಶನ; ಖಾಸಗಿ ಪ್ರದರ್ಶನ.
  5. take a $^1$dim view of.
  6. take a poor view of.
  7. take the long-term view of (ಯಾವುದೇ ವಿಷಯದಲ್ಲಿ) ದೂರಾಲೋಚನೆ ಮಾಡು; ಭವಿಷ್ಯವನ್ನು ಚಿಂತಿಸು.
  8. to the view ಬಹಿರಂಗವಾಗಿ; ಪ್ರತ್ಯಕ್ಷವಾಗಿ; ಪ್ರಕಟವಾಗಿ; ಎಲ್ಲರಿಗೂ ಕಾಣುವಂತೆ.
  9. with a view to
    1. ಉದ್ದೇಶದಿಂದ ಯಾ ನಿರೀಕ್ಷೆಯಿಂದ; ಗುರಿಯತ್ತ ಒಂದು ಹೆಜ್ಜೆಯಾಗಿ.
    2. (ಯಾವುದನ್ನೇ) ಪಡೆಯುವುದಕ್ಕಾಗಿ; (ಮೇಲೆ) ಕಣ್ಣಿಟ್ಟು; ಪಡೆಯುವುದಕ್ಕೋಸ್ಕರ; ಪಡೆಯುವ ಸಲುವಾಗಿ: with a view to marriage ಮದುವೆಯ ಸಲುವಾಗಿ, ದೃಷ್ಟಿಯಿಂದ.