See also 1view
2view ವ್ಯೂ
ಸಕರ್ಮಕ ಕ್ರಿಯಾಪದ
  1. ಕಣ್ಣಿಂದ ನೋಡು; ವೀಕ್ಷಿಸು; ದರ್ಶಿಸು; ಕಾಣು.
  2. ಕಾಣು; ನೋಡು; ಪರಿಗಣಿಸು; ಅಭಿಪ್ರಾಯ ತಳೆ: the subject may be viewed in different ways ಈ ವಿಷಯವನ್ನು ಬೇರೆಬೇರೆ ರೀತಿಯಲ್ಲಿ ಕಾಬಹುದು, ಬೇರೆಬೇರೆ ದೃಷ್ಟಿಯಿಂದ ಪರಿಗಣಿಸಬಹುದು; ಈ ವಿಷಯದಲ್ಲಿ ಬೇರೆಬೇರೆ ಅಭಿಪ್ರಾಯಗಳನ್ನು ತಳೆಯಬಹುದು. he does not view the matter in the same light ಅವನು ಈ ವಿಷಯವನ್ನು ಅದೇ ದೃಷ್ಟಿಯಿಂದ ನೋಡುವುದಿಲ್ಲ; ಈ ವಿಷಯದಲ್ಲಿ ಅವನ ಅಭಿಪ್ರಾಯ ಬೇರೆ.
  3. (ಮನೆ ಮೊದಲಾದವನ್ನು) ನೋಡು; ಕಣ್ಣಿನಿಂದ ಪರೀಕ್ಷಿಸು; ನೋಡಿಕೊಂಡು ಬರು: we are going to view the house ನಾವು ಮನೆಯನ್ನು ನೋಡಲು, ನೋಡಿಕೊಂಡು ಬರಲು ಹೋಗುತ್ತಿದ್ದೇವೆ.
  4. (ಮಾನಸಿಕವಾಗಿ) ನೋಡು; ಅವಲೋಕಿಸು; ಪರಿಶೀಲಿಸು; ಸಮೀಕ್ಷೆ ಮಾಡು: different ways of viewing a subject ವಿಷಯವೊಂದನ್ನು ಪರಿಶೀಲಿಸುವ ವಿಭಿನ್ನ ವಿಧಾನಗಳು, ಮಾರ್ಗಗಳು.
  5. (ನರಿಯು) ಮರಸನ್ನು ಬಿಟ್ಟು ಹೊರಟದ್ದನ್ನು ಕಾಣು.
ಅಕರ್ಮಕ ಕ್ರಿಯಾಪದ

ದೂರದರ್ಶನವನ್ನು ನೋಡು.