poor ಪುಅರ್‍
ಗುಣವಾಚಕ
  1. ಬಡವನಾದ; ಬಡತನದ; ದರಿದ್ರ; ರಕ್ತ; ಗರೀಬ; ಹಾಯಾಗಿ ಬದುಕಲು ಸಾಕಷ್ಟು ಹಣವಾಗಲಿ ಅನುಕೂಲಗಳಾಗಲಿ ಇಲ್ಲದ.
  2. (ಆಸ್ತಿಪಾಸ್ತಿ, ಗುಣ, ಮೊದಲಾದವು) ಸಾಕಷ್ಟಿಲ್ಲದ; ಕೊರತೆಯುಳ್ಳ; ನ್ಯೂನ; ನ್ಯೂನತೆಯುಳ್ಳ: poor in spirit ಚೈತನ್ಯ ಸಾಲದ.
  3. (ನೆಲ, ಮಣ್ಣು – ಇವುಗಳ ವಿಷಯದಲ್ಲಿ) ಫಲವತ್ತಲ್ಲದ; ಸಾರ ಕಡಮೆಯಾದ.
  4. ಸಾಮಾನ್ಯ; ಸಾಧಾರಣ; ಉತ್ತಮವಲ್ಲದ; ನಿರೀಕ್ಷಿಸಿದ್ದಕ್ಕಿಂತ ಕಡಮೆಯಾದ: poor crop ಸಾಮಾನ್ಯ ಬೆಳೆ. poor health ಸಾಧಾರಣ ಆರೋಗ್ಯ.
  5. (ದೃಶ್ಯತೆಯ ವಿಷಯದಲ್ಲಿ) ಮಸುಕಾದ; ಮಬ್ಬುಮಬ್ಬಾದ: poor visibility ಮಸುಕಾಗಿ ಕಾಣುವಿಕೆ.
  6. ಕೆಲಸಕ್ಕೆ ಬಾರದ; ಲೆಕ್ಕಕ್ಕೆ ಬಾರದ; ತೀರ ಅಲ್ಪ: a poor consolation ಅದು ಕೆಲಸಕ್ಕೆ ಬಾರದ ಸಮಾಧಾನ.
  7. ಹುಮ್ಮಸ್ಸಿಲ್ಲದ; ಉತ್ಸಾಹಶೂನ್ಯ; ನಿಸ್ಸತ್ವ; ಸತ್ವಹೀನ; ತಿರಸ್ಕರಣೀಯ: he is a poor creature ಅವನೊಬ್ಬ ಸತ್ವಹೀನ ಪ್ರಾಣಿ.
  8. (ಹಲವೊಮ್ಮೆ ವ್ಯಂಗ್ಯ ಯಾ ಹಾಸ್ಯ ಪ್ರಯೋಗ) ನಮ್ರ; ಅಲ್ಪ; ವಿನಮ್ರ: in my poor opinion ನನ್ನ ನಮ್ರ ಅಭಿಪ್ರಾಯದಲ್ಲಿ.
  9. ನಿಕೃಷ್ಟ; ತುಚ್ಛ; ಕಳಪೆ: poor condition ನಿಕೃಷ್ಟ ಪರಿಸ್ಥಿತಿ. came a poor third ತುಚ್ಛವಾದ ಮೂರನೇ ಸ್ಥಾನದಲ್ಲಿ ಬಂದ.
  10. ಬಡಪಾಯಿಯಾದ; ಬಡ; ನತದೃಷ್ಟ; ಭಾಗ್ಯಹೀನ; ನಿರ್ಭಾಗ್ಯ; ಕನಿಕರ ಯಾ ಅನುಪಾತಗಳಿಗೆ ಅರ್ಹವಾದ: poor fellow ಬಡಪಾಯಿ; ಪಾಪ, ನಿರ್ಭಾಗ್ಯಶಾಲಿ; ನತದೃಷ್ಟ.
  11. (ಸತ್ತ ವ್ಯಕ್ತಿಯ ಬಗ್ಗೆ ಹೇಳುವಾಗ) as my poor father used to say ಪಾಪ ದಿವಂಗತನಾದ ನಮ್ಮ ಅಪ್ಪ ಹೇಳುತ್ತಿದ್ದಂತೆ.
ಪದಗುಚ್ಛ
  1. poor man’s ಬಡವನ; (ಯಾವುದೋ ಒಂದರ) ಅಗ್ಗದ: poor man’s almond ಬಡವರ ಬಾದಾಮಿ; ಕಡಲೆಕಾಯಿ.
  2. poor man’s weather-glass = pimpernel.
  3. take a poor view of ಅನಾದರದಿಂದ ಯಾ ಅಪ್ರೀತಿಯಿಂದ ಯಾ ನಿರಾಶಾಭಾವದಿಂದ – ಕಾಣು, ಪರಿಗಣಿಸು.
  4. the poor ಬಡವರು; ದರಿದ್ರರು; (ಮುಖ್ಯವಾಗಿ ಒಂದು ಪ್ಯಾರಿಷ್‍ ಯಾ ಧರ್ಮಸತ್ರದ) ನೆರವಿನಿಂದ ಬದುಕುವವರು.