See also 2taste
1taste ಟೇಸ್ಟ್‍
ಸಕರ್ಮಕ ಕ್ರಿಯಾಪದ
  1. ತಿಂದು ನೋಡು; ರುಚಿ ನೋಡು; ಸವಿದು ನೋಡು; ಆಸ್ವಾದಿಸು: do taste this cheese ಈ ಗಿಣ್ಣನ್ನು ತಿಂದಾದರೂ ನೋಡು.
  2. (ಚಹ, ದ್ರಾಕ್ಷಾಮದ್ಯ, ಮೊದಲಾದವುಗಳ) ರುಚಿ ಪರೀಕ್ಷೇಮಾಡು; ರುಚಿ ನಿರ್ಧರಿಸು.
  3. ಕೊಂಚ ತಿನ್ನು, ಕುಡಿ (ಮುಖ್ಯವಾಗಿ ನಿಷೇಧಾರ್ಥಗಳಲ್ಲಿ): has not tasted food for days ದಿನಗಟ್ಟಲೆ ಅವಳು(ನು) ಆಹಾರ ಮುಟ್ಟಿಲ್ಲ (ಸ್ವಲ್ಪವೂ ತಿಂದಿಲ್ಲ).
  4. ರುಚಿ–ಹಿಡಿ, ಗ್ರಹಿಸು; (ಬಾಯಿಗೆ) ರುಚಿ ತೋರು; ರುಚಿಸು ( ಅಕರ್ಮಕ ಕ್ರಿಯಾಪದ ಸಹ): could taste the lemon ನಿಂಬೆಹಣ್ಣಿನ ರುಚಿ ಗ್ರಹಿಸಬಲ್ಲವನಾಗಿದ್ದ. ನಿಂಬೆಹಣ್ಣನ್ನು ಸವಿಯಬಲ್ಲವನಾಗಿದ್ದ. cannot taste with a cold ನೆಗಡಿಯಾದಾಗ ರುಚಿ ಗೊತ್ತಾಗುವುದಿಲ್ಲ.
  5. (ಪ್ರಾಚೀನ ಪ್ರಯೋಗ) ಇಷ್ಟಪಡು; ಇಷ್ಟವಾಗು; ರುಚಿಸು: cannot taste a joke against himself ತನ್ನ ಬಗ್ಗೆ ಹಾಸ್ಯೋಕ್ತಿ ಅವನಿಗೆ ಇಷ್ಟವಾಗದು (ತನ್ನನ್ನು ಕುರಿತ ಹಾಸ್ಯ ಅವನಿಗೆ ರುಚಿಸುವುದಿಲ್ಲ).
  6. ಅನುಭವಿಸು; ಅನುಭವವಿರು: shall not taste death ಸಾಯುವುದಿಲ್ಲ; ಸಾವನ್ನು ಅನುಭವಿಸುವುದಿಲ್ಲ. has not tasted success ಗೆದ್ದಿಲ್ಲ: ಗೆಲವನ್ನು ಅನುಭವಿಸಿಲ್ಲ.
ಅಕರ್ಮಕ ಕ್ರಿಯಾಪದ
  1. (ಆಹಾರ ಮೊದಲಾದವುಗಳ ವಿಷಯದಲ್ಲಿ ಯಾ (ರೂಪಕವಾಗಿ) ಯಾವುದೋ ಒಂದರ) ರುಚಿ ಇರು; ರುಚಿ ತೋರು; ಛಾಯೆ ಇರು; ಲಕ್ಷಣ ಕಾಣಿಸಿಕೊ: tastes sour ಹುಳಿಯಾಗಿದೆ (ಹುಳಿ ರುಚಿ ಇದೆ). tastes of mint ಇದರಲ್ಲಿ ಪುದೀನ ಸೊಪ್ಪಿನ ರುಚಿ ಇದೆ. this bread tastes of mold ಈ ರೊಟ್ಟಿಗೆ ಬಊಷ್ಟು ವಾಸನೆ ಬಂದಿದೆ.
  2. (ಪ್ರಾಚೀನ ಪ್ರಯೋಗ) ಸ್ವಲ್ಪ, ರವಷ್ಟು–ರುಚಿನೋಡು, ತಿನ್ನು: she tasted of the cake ಅವಳು ‘ಕೇಕ್‍’ ಅನ್ನು ರವಷ್ಟು ತಿಂದು ನೋಡಿದಳು.
ಪದಗುಚ್ಛ

taste $^1$blood.