ಸೊಗಸುಗಾರ; ಮೋಜುಗಾರ; ಷೋಕಿಲಾಲ; ನೀಟುಗಾರ; ಶೃಂಗಾರಗಾರ; ಅಲಂಕಾರಪ್ರಿಯ: young blood ಯುವ ಷೋಕಿಲಾಲ.
(ಯಾವುದರದೇ) ಜೀವ; ಪ್ರಾಣ; ಸತ್ತ್ವ; ರಸ; ಅಂತಸ್ಸತ್ತ್ವ.
ಸಸ್ಯರಸ; ಸಸ್ಯದ ಜೀವರಸ.
(ಬ್ರಿಟಿಷ್ ಪ್ರಯೋಗ) (ಮುಖ್ಯವಾಗಿ ಬಹುವಚನದಲ್ಲಿ) ರೋಮಾಂಚಕಾರಿ ಕಥೆ; ಸಾಹಸಕಥೆ; ಆಸಕ್ತಿ ಕೆರಳಿಸುವ, ಸಾಹಸಗಳಿಂದ ಕೂಡಿದ ಕಥೆ.
ಜನ; ವ್ಯಕ್ತಿ; ಮುಖ್ಯವಾಗಿ ಹೊಸಶಕ್ತಿ, ಚೈತನ್ಯ ಯಾ ಹುರುಪಿನ ಮೂಲವಾಗಿ ಯುವಕರು: new blood in the party ಪಕ್ಷದಲ್ಲಿಯ ಯುವಕರು.
(ಯಾವುದೇ) ಕೆಂಪಗಿರುವ ರಸ.
(ಮಾನವನ) ಭೋಗಪ್ರಕೃತಿ; ವಿಷಯಲೋಲುಪ ಸ್ವಭಾವ; ದೈಹಿಕ ಯಾ ಐಂದ್ರಿಯಕ ಕಾಮನೆಗಳಲ್ಲಿ ಆಸಕ್ತಿ.
ಪದಗುಚ್ಛ
a bit of blood ಜಾತಿ ಕುದುರೆ; ಜಾತ್ಯಶ್ವ; ಯುದ್ಧದ ಯಾ ಪಂದ್ಯದ, ಉತ್ತಮಜಾತಿಯ ಕುದುರೆ.
blood ally ಕೆಂಗೀರುಗೋಲಿ; ಕೆಂಪುಗೀರಿನ ಗೋಲಿ.
let blood (ಶಸ್ತ್ರಚಿಕಿತ್ಸೆಯಿಂದ) ರಕ್ತ – ತೆಗೆ, ಹರಿಸು.
prince etc., of the blood ರಾಜವಂಶಕ್ಕೆ ಸೇರಿದ, ರಾಜಮನೆತನದ, ರಾಜವಂಶೀಯ, ಅರಸುಕುಲದ – ರಾಜಪುತ್ರ ಮೊದಲಾದವರು.
young blood
ಸೊಗಸುಗಾರ; ಷೋಕಿಲಾಲ; ಅಲಂಕಾರಪ್ರಿಯ.
(ಸಂಘ ಮೊದಲಾದವುಗಳ) ತರುಣ, ಕಿರಿಯ – ಸದಸ್ಯರು; ಯುವಸದಸ್ಯರು.
ನುಡಿಗಟ್ಟು
bad blood ಹಗೆತನ; ವೈರ; ದ್ವೇಷ; ಮನಸ್ತಾಪ; ವೈಮನಸ್ಯ.
blood and iron (ಮುಖ್ಯವಾಗಿ ಬಿಸ್ಮಾರ್ಕನ ರಾಜ್ಯತಂತ್ರವಾಗಿದ್ದ) ದಮನನೀತಿ; ನಿರ್ದಯವಾದ ಸೈನಿಕಶಕ್ತಿಯ ಪ್ರಯೋಗ.
blood is thicker than water ನೀರಿನ ಅಂಟಿಗಿಂತ ನಂಟಿನ ಅಂಟು ಗಟ್ಟಿ; ಕೆಳೆಗಿಂತ ಕರುಳು ಹೆಚ್ಚು; ರಕ್ತಸಂಬಂಧವು ಉಳಿದೆಲ್ಲ ಸಂಬಂಧಗಳಿಗಿಂತ ಬಲ; ಎಲ್ಲಕ್ಕಿಂತ ಬಾಂಧವ್ಯ ಪ್ರಬಲ.
blood out of (or from) a stone ಕಲ್ಲಿನಿಂದ ರಕ್ತ – ಹೊರಡಿಸು, ಬರಿಸು, ತೆಗೆ: can one get blood out of a stone? ಕಲ್ಲಿನಿಂದ ರಕ್ತ ತೆಗೆಯಲಾದೀತೆ? ಕಲ್ಲೆದೆಯವನಿಂದ ಕರುಣೆಯನ್ನು ನಿರೀಕ್ಷಿಸಲಾದೀತೆ? ಲೋಭಿಯಿಂದ ಹಣ ಪಡೆಯಲಾದೀತೆ?
blue blood ಉನ್ನತ ಕುಲ; ವರಿಷ್ಠ ವಂಶ.
first blood
(ಮುಷ್ಠಿಕಾಳಗದಲ್ಲಿ) ಪ್ರಥಮ ರಕ್ತಪಾತ; ಮೊದಲೇಟು; ಮೊದಲಬಾರಿಗೆ ರಕ್ತ – ಹರಿಸುವುದು, ಚೆಲ್ಲುವುದು.
(ರೂಪಕವಾಗಿ) ಮೊದಲ ಜಯ; ಮೊದಲ ಸೂಳಿನ ಜಯ.
fresh blood ಹೊಸರಕ್ತ; (ಕುಟುಂಬ, ಸಂಘ, ಸಂಸ್ಥೆ, ಮೊದಲಾದವಕ್ಕೆ ಸೇರಿದ) ಹೊಸಬರು; ಹೊಸ ವ್ಯಕ್ತಿಗಳು; ತರುಣರು.
half blood
ಮಲ ಸೋದರ ಸೋದರಿಯರು; ಒಬ್ಬಳೇ ತಾಯಿಯ ಹೊಟ್ಟೆಯಲ್ಲಿ ಬೇರೆ ಬೇರೆ ತಂದೆಗಳಿಂದ ಯಾ ಒಬ್ಬನೇ ತಂದೆಯಿಂದ ಬೇರೆ ಬೇರೆ ತಾಯಿಯರ ಗರ್ಭದಲ್ಲಿ ಹುಟ್ಟಿದ ಸೋದರ ಸೋದರಿಯರು.
ಬೆರಕೆ(ಜಾತಿ); ಬೆರಕೆ – ರಕ್ತ, ಹುಟ್ಟು; ಮಿಶ್ರ, ಸಂಕರ – ಜಾತಿ; ಮಿಶ್ರಸಂತಾನ; ಬೇರೆ ಬೇರೆ ಜನಾಂಗ, ಧರ್ಮ, ಬಣ್ಣ, ಮೊದಲಾದವರ ಬೆರಕೆ ವಿವಾಹ ಸಂಬಂಧದಿಂದ ಹುಟ್ಟಿದ ಮಕ್ಕಳು.
in cold blood (ಕೊಲೆ ಮೊದಲಾದವುಗಳ ವಿಷಯದಲ್ಲಿ) ಉದ್ದೇಶಪೂರ್ವಕವಾಗಿ; ಪೂರ್ವಯೋಜಿತವಾಗಿ; ಎಲ್ಲ ವಿವರಗಳನ್ನೂ ಮೊದಲೇ ಯೋಜಿಸಿ ಪೂರ್ವಸಿದ್ಧತೆ ಮಾಡಿಕೊಂಡು; ಆ ಕ್ಷಣದಲ್ಲಿ ಹುಟ್ಟಿದ ಕ್ರೋಧಾವೇಶದಿಂದ ಆಗಿರದೆ.
in hot blood ಕೋಪದಿಂದ; ರೇಗಿ; ರೋಷಾವೇಶದಿಂದ.
in one’s blood (ವ್ಯಕ್ತಿಯ) ರಕ್ತದಲ್ಲಿಯೇ; ಹುಟ್ಟಿನಿಂದಲೇ; ಸ್ವಭಾವದಲ್ಲಿಯೇ; ಭೌತಿಕವಾಗಿ, ಸಾಂಸ್ಕೃತಿಕವಾಗಿ ಯಾ ವಂಶಪಾರಂಪರ್ಯವಾಗಿ ಬಂದ: generosity is in his blood ಔದಾರ್ಯ ಅವನ ರಕ್ತದಲ್ಲಿಯೇ ಇದೆ, ಹರಿಯುತ್ತಿದೆ, ಹುಟ್ಟಿನಿಂದಲೇ ಯಾ ಮನೆತನದಿಂದಲೇ ಬಂದಿದೆ.
make one’s blood boil ನೆತ್ತರು ಕುದಿಸು; ರೋಷ ಹುಟ್ಟಿಸು; ಕೋಪ ಬರಿಸು.
make one’s blood run cold ಭೀತಿ, ಹೆದರಿಕೆ – ಹುಟ್ಟಿಸು.