See also 1taste
2taste ಟೇಸ್ಟ್‍
ನಾಮವಾಚಕ
  1. ರುಚಿ; ಸ್ವಾದ; ಸವಿ: I cannot endure the taste of onions ನನಗೆ ಈರುಳ್ಳಿ ರುಚಿ ಆಗದು. white of egg has no taste ಮೊಟ್ಟೆಯ ಲೋಳೆಯಲ್ಲಿ ಯಾವ ರುಚಿಯೂ ಇರುವುದಿಲ್ಲ.
  2. ರಸಗ್ರಹಣ; ರಸನಶಕ್ತಿ.
  3. (ಆಹಾರ, ಪಾನೀಯ, ಮೊದಲಾದವುಗಳ) (ನಮೂನೆ ಪರೀಕ್ಷಿಸಲು) ತೆಗೆದುಕೊಂಡ ಸ್ವಲ್ಪ ಭಾಗ, ಮಾದರಿ ಪ್ರಮಾಣ.
  4. (ರೂಪಕವಾಗಿ) (ಯಾವುದಾದರೂ ಅನುಭವದ) ರುಚಿ; ಸವಿ; ಕೊಂಚ ಅನುಭವ: a taste of the whip ಚಾವಟಿ (ಏಟಿನ) ರುಚಿ, ಸವಿ.
  5. ಇಷ್ಟ; ಒಲವು; ಪಕ್ಷಪಾತ: has no taste for sweet things ಸಿಹಿ ಪದಾರ್ಥಗಳು ಇಷ್ಟವಿಲ್ಲ. a taste for drawing ಚಿತ್ರಲೇಖನದಲ್ಲಿ ಒಲವು. it is not to my taste ನನಗೆ ಅದು ಹಿಡಿಸದು, ಇಷ್ಟವಾಗುವುದಿಲ್ಲ. tastes differ ಒಬ್ಬೊಬ್ಬರ ರುಚಿ ಒಂದೊಂದು ತರಹವಾಗಿರುತ್ತದೆ (ಲೋಕೋ ಭಿನ್ನರುಚಿಃ). there is no accounting for tastes ಒಬ್ಬರ ರುಚಿ ಯಾಕೆ ಹೀಗೆ ಎಂದು ಹೇಳುವುದು ಕಷ್ಟ.
  6. (ಕಲೆ, ಸಾಹಿತ್ಯ, ವರ್ತನೆ, ಮೊದಲಾದವುಗಳಲ್ಲಿ ಮುಖ್ಯವಾಗಿ ವಿಶಿಷ್ಟವಾದ) ಅಭಿಜ್ಞತೆ; ಅಭಿರುಚಿ; ರಸಜ್ಞತೆ: a man of good taste ಒಳ್ಳೆಯ ರಸಜ್ಞ; (ಕಲೆ ಮೊದಲಾದವುಗಳಲ್ಲಿ) ಸದಭಿರುಚಿಯುಳ್ಳವನು. a man of bad taste ಕೆಟ್ಟ ಅಭಿರುಚಿಯುಳ್ಳವನು; ಅಷ್ಟೇನೂ ಒಳ್ಳೆಯದಲ್ಲದುದನ್ನು ಆಶಿಸುವವನು, ಇಷ್ಟಪಡುವವನು.
  7. ರುಚಿವಿವೇಕ; ಔಚಿತ್ಯ ವಿವೇಕ; ರಸವಿವೇಚನೆ: composed in admirable taste ಶ್ಲಾಘನೀಯ ರಸೌಚಿತ್ಯದಿಂದ ರಚಿಸಲಾಗಿದೆ. the remark was in bad taste (ಅವನು ಹೇಳಿದ) ಮಾತಿನಲ್ಲಿ ರಸವಿವೇಚನೆ ಇಲ್ಲ (ಸಂಸ್ಕೃತಿ ಸಾಲದು); ಅವನ ಮಾತು ಕೆಟ್ಟ ಅಭಿರುಚಿಯದಾಗಿತ್ತು.
ಪದಗುಚ್ಛ
  1. add pepper to taste ರುಚಿಗಾಗಿ ತಕ್ಕಷ್ಟು ಮೆಣಸು ಹಾಕು. add sugar to taste ರುಚಿಗೆ ಬೇಕಾದಷ್ಟು ಸಕ್ಕರೆ ಸೇರಿಸು.
  2. bad (or bitter) taste in the mouth
    1. ಏನನ್ನೋ ತಿಂದಮೇಲೆ ಬಾಯಿಯಲ್ಲಿ ಕೆಟ್ಟರುಚಿ ಉಳಿದಿರು.
    2. ಕಟುನೆನಪು ಉಳಿದಿರು; ಯಾವುದೋ ಅನಪೇಕ್ಷಣೀಯ ಅನುಭವದ ಕಿರಿಕಿರಿ ಉಳಿದಿರು.