See also 2tack  3tack  4tack
1tack ಟ್ಯಾಕ್‍
ನಾಮವಾಚಕ
  1. ತಟ್ಟು ಮೊಳೆ; ಗುಬ್ಬಿಮೊಳೆ; ಚಪ್ಪಟೆ ತಲೆಯ ಚಿಕ್ಕ ಮೊಳೆ.
  2. (ಅಮೆರಿಕನ್‍ ಪ್ರಯೋಗ) = drawing-pin.
  3. = thumbtack.
  4. = brass tacks.
  5. ಟಾಕು ಹೊಲಿಗೆ; ದಾಟು ಹೊಲಿಗೆ; ಹೊಲಿಗೆಯಲ್ಲಿ ತಾತ್ಕಾಲಿಕವಾಗಿ ಹಾಕುವ ದಾಟು ಹೊಲಿಗೆಗಳು.
  6. (ನೌಕಾಯಾನ)
    1. ಕೆಲವು ಹಾಯಿಗಳ ಮೂಲೆ (ಬಿಗಿಯುವ) ಹಗ್ಗ.
    2. ಹಾಯಿಯನ್ನು ಬಿಗಿಯುವ ಮೂಲೆ.
  7. (ಹಾಯಿಗಳ ಸ್ಥಾನ ಮತ್ತು ಗಾಳಿಯ ದಿಕ್ಕನ್ನು ಅವಲಂಬಿಸಿರುವ) ಹಡಗಿನ ಚಲನೆಯ ದಿಕ್ಕು.
  8. (ಹಡಗು ಚಲಿಸುವಾಗ ಪಕ್ಕ ಗಾಳಿ ಮೊದಲಾದವುಗಳ ಪ್ರಯೋಜನ ಪಡೆಯಲು, ಮುಖ್ಯವಾಗಿ ಎಡಕ್ಕೂ ಬಲಕ್ಕೂ ಪರ್ಯಾಯವಾಗಿ, ಮಾಡುವ ತಾತ್ಕಾಲಿಕ) ದಿಕ್ಕು ಬದಲಾವಣೆ.
  9. ಧೋರಣೆ; ಮಾರ್ಗ; ಕಾರ್ಯ–ರೀತಿ, ವಿಧಾನ, ನೀತಿ: we must change our tack ನಾವು ನಮ್ಮ ಕಾರ್ಯರೀತಿಯನ್ನು ಬದಲಾಯಿಸಬೇಕು.
  10. (ಬ್ರಿಟಿಷ್‍ ಪ್ರಯೋಗ) ಅನುಬಂಧ; ಪಾರ್ಲಿಮೆಂಟಿನಲ್ಲಿ ತರುವ ಮಸೂದೆಗೆ ಹೊಸದಾಗಿ ಸೇರಿಸುವ ಅಂಶ ಯಾ ಕಲಂ.
  11. ವಾರ್ನಿಷ್‍ ಮೊದಲಾದವುಗಳ ಅಂಟು ಗುಣ ಯಾ ಸ್ಥಿತಿ.
ಪದಗುಚ್ಛ
  1. port tack ಗಾಳಿ ಎಡಗಡೆ ಇದ್ದಾಗ ಹಡಗು ಚಲಿಸುವ ದಿಕ್ಕು.
  2. starboard tack ಗಾಳಿ ಬಲಗಡೆ ಇದ್ದಾಗ ಹಡಗು ಚಲಿಸುವ ದಿಕ್ಕು.