See also 1tack  3tack  4tack
2tack ಟ್ಯಾಕ್‍
ಸಕರ್ಮಕ ಕ್ರಿಯಾಪದ
  1. (ಮಖಾನ, ಹೆಸರುಪಟ್ಟಿ, ಗುಡಾರ, ಮೊದಲಾದವುಗಳನ್ನು) ತಟ್ಟುಮೊಳೆಯಿಂದ–ಭದ್ರಪಡಿಸು, ಬಿಗಿ, ಕಚ್ಚಿಸು.
  2. (ಬಟ್ಟೆಯ ತುಂಡು ಯಾ ಭಾಗಗಳನ್ನು) ಕೂಡಿಸಿ ಟಾಕು ಹಾಕು, ಉದ್ದ ಹೊಲಿಗೆಯಿಂದ ಸೇರಿಸು.
  3. ಅನುಬಂಧಿಸು:
    1. ಜೊತೆಗೆ ಅನುಬಂಧವಾಗಿ ಸೇರಿಸು.
    2. (ಬ್ರಿಟಿಷ್‍ ಪ್ರಯೋಗ) ಮಸೂದೆ ಮೊದಲಾದವಕ್ಕೆ (ಹೊಸ ಕಲಂ) ಸೇರಿಸು.
ಅಕರ್ಮಕ ಕ್ರಿಯಾಪದ
    1. (ಗಾಳಿಯ ಕಡೆಗೆ ಹಡಗಿನ ಮೂತಿಯನ್ನು ತಿರುಗಿಸುವುದರಿಂದ) ಹಡಗಿನ ದಿಕ್ಕು ಬದಲಾಯಿಸು.
    2. (ಚುಕ್ಕಾಣಿಯನ್ನು ಗಾಳಿಮರೆಯ ಪಕ್ಕಕ್ಕೆ ತಿರುಗಿಸಿ ಯಾ ಹಾಯಿಗಳ ಸ್ಥಾನ ಬದಲಾಯಿಸಿ) ಪುನಃ ಪುನಃ ಹಡಗಿನ ದಿಕ್ಕನ್ನು ಬದಲಾಯಿಸು.
  1. ದಾರಿ ಬದಲಾಯಿಸು; ವರ್ತನೆ, ರೀತಿನೀತಿಗಳನ್ನು ಬದಲಾಯಿಸು.