1gun
ಗನ್
ನಾಮವಾಚಕ
- ಗನ್ನು; ಬಂದೂಕು; ಕೋವಿ; ಮದ್ದು ಯಾ ಬೇರೆ ಸ್ಫೋಟಕದಿಂದ ಗುಂಡು ಮೊದಲಾದ ಕ್ಷಿಪಣಿಗಳನ್ನು ಹಾರಿಸುವ ಲೋಹ ಕೊಳವೆ.
- ಗನ್ನು; ಫಿರಂಗಿ;ತೋಪು; ಬಂದೂಕು; ತುಪಾಕಿ; ಕೋವಿ; ರೈಹಲ್ಲು.
- (ಅಮೆರಿಕನ್ ಪ್ರಯೋಗ) ರಿವಾಲ್ವರು.
- (ಪಂದ್ಯಗಳನ್ನು) ಪ್ರಾರಂಭಿಸುವ ಪಿಸ್ತೂಲು.
- ಪಿಚಕಾರಿ; ಸಿಂಪಣಿ; ಕೀಟನಾಶಕ, ಗ್ರೀಸ್, ಇಲೆಕ್ಟ್ರಾನ್ಗಳು, ಮೊದಲಾದವನ್ನು ನಿರ್ದಿಷ್ಟ ದಿಕ್ಕಿನಲ್ಲಿ ಸಿಂಪಡಿಸುವ ಸಾಧನ.
- ಷಿಕಾರಿ ತಂಡದವನು; ಕೋವಿ ಬೇಟೆಗಾರರ ತಂಡದವನು.
- (ಅಮೆರಿಕನ್ ಪ್ರಯೋಗ) = gunman.
- (ಬಹುವಚನ ದಲ್ಲಿ) (ನೌಕಾ ಅಶಿಷ್ಟ) ಫಿರಂಗಿ (ಹಾರಿಸುವ) ಅಧಿಕಾರಿ.
ನುಡಿಗಟ್ಟು
- at gun point ಕೋವಿ ತೋರಿಸಿ; ಬಂದೂಕು ಬೆದರಿಕೆಯಿಂದ; ಬಂದೂಕಿನಿಂದ ಕೊಲ್ಲುವುದಾಗಿ ಹೆದರಿಸಿ.
- beat (or jump) the gun
- ಸಂಕೇತ, ಸೂಚನೆ ಕೊಡುವುದಕ್ಕಿಂತ ಮುಂಚೆಯೇ ಹೊರಡು.
- (ನಿಗದಿತ) ಕಾಲಕ್ಕೆ ಮೊದಲೇ (ಕಾರ್ಯ) ಪ್ರಾರಂಭಿಸು.
- big gun (ಅಶಿಷ್ಟ) ದೊಡ್ಡಮನುಷ್ಯ; ಪ್ರಮುಖ ವ್ಯಕ್ತಿ; ಗಣ್ಯ.
- blow great guns (ಬಿರುಗಾಳಿಯ ವಿಷಯದಲ್ಲಿ) ರಭಸದಿಂದ, ಪ್ರಚಂಡವಾಗಿ – ಬೀಸು.
- give engine, motor vehicle the gun (ಆಡುಮಾತು) ಎಂಜಿನು, ಮೋಟಾರು ವಾಹನಗಳಿಗೆ ವೇಗ ಕೊಡು, ಅವುಗಳ ವೇಗ ಹೆಚ್ಚಿಸು.
- going great guns ವಿಜಯದತ್ತ, ಗೆಲುವಿನತ್ತ – ಭರದಿಂದ ಸಾಗುತ್ತಿರು.
- son of a gun (ಆಡುಮಾತು) ಕ್ಷುದ್ರ; ನೀಚ; ತಿರಸ್ಕಾರಾರ್ಹ ವ್ಯಕ್ತಿ.
- stand (or stick) one’s guns ತನ್ನ ನಿಲುವನ್ನು ಬಿಡದಿರು; ಪಟ್ಟು ಹಿಡಿದು ಸಾಧಿಸು.
- sure as a gun (ಬಂದೂಕಿನಂತೆ) ಗುರಿತಪ್ಪದೆ; ಖಂಡಿತ; ನಿಸ್ಸಂದೇಹವಾಗಿ.