rule of three (ಗಣಿತ) ತ್ರೈರಾಶಿ; ತ್ರಯರಾಶಿ; ಎರಡೂ ಮೊತ್ತಗಳಿಗಿರುವ ನಿಷ್ಪತ್ತಿ ಇನ್ನೆರಡು ಮೊತ್ತಗಳಿಗಿರುವ ನಿಷ್ಪತ್ತಿಗೆ ಸಮನಾಗಿದ್ದು ಅವುಗಳ ಪೈಕಿ ಮೂರು ಮೊತ್ತಗಳು ಮಾತ್ರ ಗೊತ್ತಾದವಾಗಿರುವಾಗ ನಾಲ್ಕನೆಯ ಮೊತ್ತವನ್ನು ಲೆಕ್ಕ ಹಾಕುವ ಕ್ರಮ.
rule of thumb ಹೆಬ್ಬೆರಳ ಸೂತ್ರ; ಸ್ಥೂಲ ವ್ಯಾವಹಾರಿಕ ಸೂತ್ರ; ಸಾಮಾನ್ಯ ನಿಯಮ; ತಾರ್ಕಿಕವಾಗಿ ಯಾ ಸೈದ್ಧಾಂತಿಕವಾಗಿ ಆಗಿರದೆ ವ್ಯಾವಹಾರಿಕ ಅನುಭವದ ಯಾ ಅಭ್ಯಾಸದ ಆಧಾರದ ಮೇಲೆ ರಚಿತವಾದ (ಆದ್ದರಿಂದ ಪ್ರತಿ ಸಂದರ್ಭಕ್ಕೂ ಸಂಪೂರ್ಣವಾಗಿ ಅನ್ವಯಿಸಲಾಗದ ಯಾ ಪ್ರತಿ ವಿವರದಲ್ಲೂ ಪೂರ್ತಿಯಾಗಿ ನೆಚ್ಚಲಾಗದ) ಮಾರ್ಗದರ್ಶಕ ಸೂತ್ರ, ನಿಯಮ.
run the rule over ಸರಿಯಾಗಿದೆಯೋ ಇಲ್ಲವೋ ಎಂದು, ಸಾಕಾಗುತ್ತದೆಯೋ ಇಲ್ಲವೋ ಎಂದು – ಸ್ಥೂಲವಾಗಿ ಪರೀಕ್ಷಿಸು.
standing rule ಸ್ಥಾಯೀ – ನಿಯಮ, ಕಾರ್ಯಸೂತ್ರ; ಒಂದು ಸಂಸ್ಥೆ ಕಾರ್ಯನಿರ್ವಹಣೆಗಾಗಿ ಮಾಡಿಕೊಳ್ಳುವ ನಿಯಮ, ಸೂತ್ರ.
the rule of force ಬಲಪ್ರಭುತ್ವ; ಬಲಾತ್ಕಾರದ ಆಳ್ವಿಕೆ.
the rules (ಚರಿತ್ರೆ) ಸೆರೆಯಾಳುಗಳೂ ಕೆಲವು ಷರತ್ತುಗಳ ಮೇಲೆ ನಿರ್ದಿಷ್ಟ ಸೆರೆಮನೆಗಳ ಹೊರಗೆ ವಾಸಮಾಡಲು ಅವಕಾಶವಿರುತ್ತಿದ್ದ ಗೊತ್ತಿನ ಎಲ್ಲೆ.
work to rule ನಿಯಮದಷ್ಟು ಕೆಲಸ; ಅತಿನಿಯಮ ಪಾಲನೆಯಿಂದ ಕಾರ್ಯಸಾಗದಂತೆ ಮಾಡು; (ಬಹಿರಂಗವಾಗಿ ಮುಷ್ಕರ ಹಿಡಿಯುವುದಕ್ಕೆ ಬದಲಾಗಿ) ಸಮಯ, ಅಸಮಯವೆನ್ನದೆ ಪ್ರತಿಯೊಂದು ನಿಯಮವನ್ನೂ ನಿಷ್ಠುರವಾಗಿ ಪಾಲಿಸಿ ಸರಾಗವಾಗಿ ಕಾರ್ಯನಡೆಯುವುದು ಅಸಾಧ್ಯವಾಗುವಂತೆ ಮಾಡು.