See also 1rock  2rock  4rock
3rock ರಾಕ್‍
ಸಕರ್ಮಕ ಕ್ರಿಯಾಪದ
  1. (ತೊಟ್ಟಿಲು ಮೊದಲಾದವನ್ನು) ತೂಗು; ಆಡಿಸು; (ತೊಟ್ಟಿಲು ಮೊದಲಾದವುಗಳಲ್ಲಿ ಇಟ್ಟು) ತೂಗು: rock him to sleep ಅವನನ್ನು ತೊಟ್ಟಿಲಲ್ಲಿ ತೂಗಿ ನಿದ್ರೆ ಮಾಡಿಸು.
  2. (ಚಿನ್ನದ ಗಣಿ ಕೆಲಸ) (ಜಾಲಿಸುವ ತೊಟ್ಟಿಯನ್ನು) ಆಡಿಸು; ತೊಟ್ಟಿಯಲ್ಲಿ ಆಡಿಸಿ ಜಾಲಿಸು.
  3. (ಪಕ್ಕದಿಂದ ಪಕ್ಕಕ್ಕೆ) ತೂಗಾಡಿಸು; ಓಲಾಡಿಸು; ಅಲ್ಲಾಡಿಸು: earthquake rocks the house ಭೂಕಂಪ ಮನೆಯನ್ನು ಅಲ್ಲಾಡಿಸುತ್ತದೆ.
  4. ಕಾತರ ಹುಟ್ಟಿಸು; ಕಳವಳವುಂಟುಮಾಡು.
ಅಕರ್ಮಕ ಕ್ರಿಯಾಪದ
  1. (ತೊಟ್ಟಿಲು ಮೊದಲಾದವು) ಆಡು; ತೂಗಾಡು: ship rocking on the waves ತೆರೆಗಳ ಮೇಲೆ ತೂಗಾಡುತ್ತಿರುವ ಹಡಗು.
  2. (ಪಕ್ಕದಿಂದ ಪಕ್ಕಕ್ಕೆ) ತೂಗಾಡು; ತೊನೆದಾಡು; ಓಲಾಡು; ಅಲ್ಲಾಡು: house rocks ಮನೆ ಅಲ್ಲಾಡುತ್ತದೆ.
    1. ರಾಕ್‍ ಸಂಗೀತಕ್ಕೆ ತಕ್ಕಂತೆ – ಕುಣಿ, ನೃತ್ಯಮಾಡು.
    2. ರಾಕ್‍ ಸಂಗೀತ – ನುಡಿಸು, ವಾದನಮಾಡು.
ಪದಗುಚ್ಛ